Thalapathy 67 Leo: ಬಿಡುಗಡೆಗೂ ಮುನ್ನವೇ ಭಾರೀ ಕಲೆಕ್ಷನ್‌ ಮಾಡಿದೆ ಸೌತ್‌ನ ಈ ಸಿನಿಮಾ!

Published : Feb 05, 2023, 02:39 PM IST

ದಳಪತಿ ವಿಜಯ್ (Thalapathy Vijay) ಅಭಿನಯದ 'ತಲಪತಿ 67' ಚಿತ್ರ . 'ಲಿಯೋ' (Leo)ಶೀರ್ಷಿಕೆಯೊಂದಿಗೆ ಚಿತ್ರ ಬಿಡುಗಡೆಯಾಗಲಿದ್ದು, ಇದರ ನಿರ್ಮಾಣ ವೆಚ್ಚ 250 ಕೋಟಿ ರೂ ಎಂದು ವರದಿಯಾಗಿದೆ. ದಳಪತಿ ವಿಜಯ್ ಅಭಿನಯದ 'ಲಿಯೋ' ಬಿಡುಗಡೆಗೆ ಮುಂಚೆಯೇ ಬಾರೀ ದೊಡ್ಡ ಮೊತ್ತದ ಕಲೆಕ್ಷನ್‌ ಮಾಡಿದೆ.     

PREV
18
 Thalapathy 67 Leo: ಬಿಡುಗಡೆಗೂ ಮುನ್ನವೇ ಭಾರೀ ಕಲೆಕ್ಷನ್‌ ಮಾಡಿದೆ ಸೌತ್‌ನ ಈ ಸಿನಿಮಾ!

ವರದಿಗಳ ಪ್ರಕಾರ , ಈ ತಮಿಳು ಚಿತ್ರವು ಬಿಡುಗಡೆಗೆ ಮುನ್ನವೇ ಸಾಕಷ್ಟು ಗಳಿಸಿದೆ. ವಿಜಯ್‌ ಅವರ ಲಿಯೋ ಸಿನಿಮಾ  ಈಗಾಗಲೇ ಪಠಾಣ್  ಚಿತ್ರದ ನಿರ್ಮಾಣ ವೆಚ್ಚದಷ್ಟು ಕಲೆಕ್ಷನ್‌ ಮಾಡಿದೆ. ಶಾರುಖ್ ಖಾನ್ ಅಭಿನಯದ 'ಪಠಾಣ್' 250 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿದೆ ಮತ್ತು 'ಲಿಯೋ' ಸುಮಾರು 246 ಕೋಟಿ ರೂ. ಸಂಗ್ರಹಿಸಿದೆ ದೃಢೀಕರಿಸದ ಸುದ್ದಿಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಈ ವಿಷಯವನ್ನು ವರದಿ ಮಾಡಲಾಗಿದೆ.

  

28

ಅಂದಹಾಗೆ, ವಿಜಯ್ ಅಭಿನಯದ ಚಿತ್ರ 250 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ತಯಾರಾಗಿದೆ ಎಂದು ಸುದ್ದಿಯಲ್ಲಿ ಹೇಳಲಾಗುತ್ತಿದೆ. ಆದರೆ ಬಿಡುಗಡೆಗೆ ಮುನ್ನವೇ ಸುಮಾರು 246 ಕೋಟಿ ರೂ.ಗಳನ್ನು ವಸೂಲಿ ಮಾಡಿರುವುದು ನಿರ್ಮಾಪಕರಿಗೆ ದೊಡ್ಡ ಸಮಾಧಾನದ ವಿಷಯವಾಗಿದೆ. 
 

38

ವಿಶೇಷವೆಂದರೆ ಈ ಗಳಿಕೆಯು ನಾನ್ ಥಿಯೇಟರ್ ರೈಟ್ಸ್ ನಿಂದ ಬಂದಿದೆ. ಈ ಚಿತ್ರದ ಹಕ್ಕುಗಳಿಂದ ವಿಜಯ್‌ ಅವರ ಲಿಯೋ ಸಿನಿಮಾವು  246 ಕೋಟಿ ರೂ ಗಳಿಸಿದೆ ಎನ್ನಲಾಗಿದೆ.

48

ವರದಿಗಳ ಪ್ರಕಾರ, ಚಿತ್ರವು ಡಿಜಿಟಲ್ ರೈಟ್ಸ್‌ನಿಂದ ಸುಮಾರು 150 ಕೋಟಿ ರೂಪಾಯಿ, ಸ್ಯಾಟಲೈಟ್ ರೈಟ್ಸ್‌ನಿಂದ ಸುಮಾರು 80 ಕೋಟಿ ರೂಪಾಯಿ ಮತ್ತು ಮ್ಯೂಸಿಕಲ್ ರೈಟ್ಸ್‌ನಿಂದ ಸುಮಾರು 16 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ. 
 

58

ಚಿತ್ರದ ಹಿಂದಿ ಡಬ್ ಹಕ್ಕುಗಳು ಎಷ್ಟು ಮಾರಾಟವಾಗಿವೆ ಎನ್ನುವುದರ ಬಗ್ಗೆ ಖಚಿತವಾದ ಮಾಹಿತಿಯು ಮುನ್ನೆಲೆಗೆ ಬಂದಿಲ್ಲ. ಆದರೆ ಭಾರೀ ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ.


 

68

ಇಲ್ಲಿಯವರೆಗೆ ವಿಜಯ್‌ ಅವರ ಈ ಸಿನಿಮಾವನ್ನು 'ತಲಪತಿ 67' ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಈ ಸಿನಿಮಾಕ್ಕೆ  'ಲಿಯೋ' ಎಂದು ಹೆಸರು ನೀಡಲಾಗಿದೆ. ಈ ಚಿತ್ರದ ಟೈಟಲ್ ಪ್ರೋಮೋವನ್ನು ಫೆಬ್ರವರಿ 3 ರಂದು ಲಾಂಚ್ ಮಾಡಲಾಗಿದೆ. 

78

ಚಿತ್ರದಲ್ಲಿ ವಿಜಯ್ ಜೊತೆಗೆ ಸಂಜಯ್ ದತ್, ತ್ರಿಶಾ ಕೃಷ್ಣನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಸರ್ಜಾ, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್, ಮಿಸ್ಕಿನ್ ಮತ್ತು ಗೌತಮ್ ವಾಸುದೇವ್ ಮೆನನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

88

ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ ವಿಜಯ್ ಅಭಿನಯದಈ ಚಿತ್ರ ಇದೇ ವರ್ಷ ಅಕ್ಟೋಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories