ನಾನು ಆರ್ಥಿಕವಾಗಿ ಸ್ವತಂತ್ರಳಲ್ಲ, ತನ್ನ ಮಕ್ಕಳಿಗೆ ಹೀಗಾಗಬಾರದು ಎಂದ ಬಿಗ್ ಬಿ ಪುತ್ರಿ
First Published | Sep 25, 2022, 4:57 PM ISTಮಾಡೆಲ್, ಅಂಕಣಕಾರತಿ, ಲೇಖಕಿ ಜೊತೆಗೆ ಉದ್ಯಮಿಯಾಗಿಯೂ ಕೆಲಸ ಮಾಡಿರುವ ಶ್ವೇತಾ ಬಚ್ಚನ್ (Shweta Bachchan) ಅವರು ತಮ್ಮ ವೃತ್ತಿ ಜೀವನದಲ್ಲಿ ಆರ್ಥಿಕವಾಗಿ ಸ್ವತಂತ್ರವಾಗಿಲ್ಲ ಎಂದು ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರು ಮಹತ್ವಾಕಾಂಕ್ಷೆಯ ವ್ಯಕ್ತಿಯಲ್ಲ ಮತ್ತು ನಾನು ಎಲ್ಲಿದ್ದೇನೆ ಎಂಬುದಕ್ಕೆ ತೃಪ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಆದರೆ ತನ್ನ ಮಕ್ಕಳಾದ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಬೇರೆ ದಾರಿ ಹಿಡಿದು ಆರ್ಥಿಕ ಭದ್ರತೆಯನ್ನು ಭದ್ರಪಡಿಸಿಕೊಳ್ಳಬೇಕೆಂದು ಬಯಸುತ್ತಾರೆ.