ಹೆಂಡತಿ ತೊರೆದು ಗಗನಸಖಿಯೊಂದಿಗೆ ಲೀವ್‌ ಇನ್‌; ನಂತರ ಆಕೆಗೂ ಕೈಕೊಟ್ಟ ನಟ

ಫುಟ್ ಟ್ಯಾಪಿಂಗ್ ಮ್ಯೂಸಿಕ್‌, ಬಿಕಿನಿ ಧರಿಸಿದ ನಟಿಯರು, ಸ್ಟೈಲಿಶ್ ನಟರು ಮತ್ತು ವೇಗದ ರೇಸಿಂಗ್ ಕಾರ್ ಚೇಸ್‌ಗಳನ್ನು ಹೊಂದಿರುವ ರೆಟ್ರೋ ಹಿಂದಿ ಚಲನಚಿತ್ರಗಳೆಂದರೆ ತಕ್ಷಣ ಫಿರೋಜ್ ಖಾನ್ (Feroz Khan) ನೆನಪಾಗುತ್ತಾರೆ. ಫಿರೋಜ್ ಖಾನ್ ಹಾಲಿವುಡ್‌ನಂತಹ ದೃಶ್ಯಗಳನ್ನು ಚಿತ್ರೀಕರಿಸಲು ಇಷ್ಟಪಟ್ಟಿದ್ದಾರೆ. 'ಧರ್ಮಾ' (1975) 'ಆರಾಧ' (1972), 'ದಿ ಗಾಡ್‌ಫಾದರ್' (1972)  ಸಿನಿಮಾಗಳಲ್ಲಿ ಭಾರತೀಯ ರೂಪಾಂತರದ ಕಾರ್ ರೇಸಿಂಗ್ ದೃಶ್ಯಗಳನ್ನು ಅಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ. ಅದೇ ಸಮಯದಲ್ಲಿ,   ಕುರ್ಬಾನಿ' (1980) ಅಥವಾ 'ಜಾನ್ಬಾಜ್' (1986) ನಲ್ಲಿ, ಅವರು ಕೌಬಾಯ್ ಸೆಟಪ್ ಮೂಲಕ ತಮ್ಮ ಚಲನಚಿತ್ರಗಳಿಗೆ ವಿಭಿನ್ನ ನೋಟವನ್ನು ನೀಡಲು ಪ್ರಯತ್ನಿಸಿದರು. ಫಿರೋಜ್‌ ಖಾನ್‌ ಅವರ  ಪರ್ಸನಲ್‌ ಲೈಫ್‌ ಕೂಡ ಸಖತ್‌ ಇಂಟರೆಸ್ಟಿಂಗ್‌ ಆಗಿತ್ತು. 

ಫಿರೋಜ್ ಖಾನ್ ಯಾವಾಗಲೂ  ಸಮಯಕ್ಕಿಂತ ಮುಂದೆ ನಡೆಯುತ್ತಿದ್ದರು. ಫಿರೋಜ್ ಖಾನ್ ಬಗ್ಗೆ ಹಲವು ರೀತಿಯ ಗಾಸಿಪ್ ಗಳು ಹರಿದಾಡುತ್ತಿದ್ದವು. ಅದೇ ಸಮಯದಲ್ಲಿ, ಅನೇಕ ವಿವಾದಗಳು ಸಹ ಅವರ ಸುತ್ತ ಇದೆ. ಫಿರೋಜ್ ಖಾನ್ ಮದುವೆಯಾಗಿದ್ದರು, ಇದರ ಹೊರತಾಗಿಯೂ ಅವರು ಜ್ಯೋತಿಕಾ ಅವರೊಂದಿಗೆ ಲಿವ್-ಇನ್ ಸಂಬಂಧವನ್ನು ಹೊಂದಿದ್ದರು.

ನಟ ಮತ್ತು ಚಲನಚಿತ್ರ ನಿರ್ಮಾಪಕ ಫಿರೋಜ್ ಖಾನ್ ಅವರು ಸೆಪ್ಟೆಂಬರ್ 25, 1939 ರಂದು ಬೆಂಗಳೂರಿನಲ್ಲಿ ಜನಿಸಿದರು. ಅಲ್ಲಿಂದ ಶಾಲಾ ಶಿಕ್ಷಣ ಮುಗಿಸಿ ಮುಂಬೈನಲ್ಲಿ ನೆಲೆಸಿದ ಫಿರೋಜ್ ಖಾನ್ 1959 ರಲ್ಲಿ ನಾರಾಯಣ್ ಕಾಳೆ ನಿರ್ದೇಶನದ ದೀದಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.


ಫಿರೋಜ್ ಖಾನ್ ಯಾವಾಗಲೂ ಪ್ಲೇ ಬಾಯ್ ಎಂದು ಬ್ರಾಂಡ್ ಆಗಿದ್ದರು. ಸುಂದರಿಯನ್ನು ಭೇಟಿಯಾದಾಗ ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿಯಾಯಿತು .ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು 1965 ರಲ್ಲಿ ಮದುವೆಯಾಗಲು ನಿರ್ಧರಿಸಿದರು.

ಮದುವೆಯಾದ ಕೆಲವು ವರ್ಷಗಳ ನಂತರ, ಅವರು ಮಗಳು ಲೈಲಾ ಮತ್ತು ಫರ್ದೀನ್ ಎಂಬ ಮಗನಿಗೆ ಪೋಷಕರಾದರು. ಸಮಯ ಕಳೆದಂತೆ, ಫಿರೋಜ್
ತನ್ನ ಕೆಲಸದಲ್ಲಿ ನಿರತನಾದರು ಮತ್ತು ಅವನ ಪತ್ನಿ  ಮನೆ ಮತ್ತು ಮಕ್ಕಳೊಂದಿಗೆ ಬ್ಯುಸಿಯಾದರು. 

ಇದರ ನಂತರ, ಫಿರೋಜ್ ಮತ್ತೊಮ್ಮೆ ಹೊಸ ಹುಡುಗಿ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದರು. ಫಿರೋಜ್ ಪ್ರಸಿದ್ಧ ಧನರಾಜಗಿರ್ ಕುಟುಂಬದ ಅತ್ಯಂತ ಆಕರ್ಷಕ ಏರ್ ಹೊಸ್ಟೆಸ್, ಜ್ಯೋತಿಕಾ ಧನರಾಜಗಿರ್ ಅವರನ್ನು ಭೇಟಿಯಾದರು ಮತ್ತು  ಪ್ರೀತಿಯ್ಲಲಿ ಬಿದ್ದರು. ಈ ವಿಷಯ ಅವರ ಪತ್ನಿ ಸುಂದರಿಗೆ ತಿಳಿದಾಗ ಅವರು ತಮ್ಮ ಮದುವೆಯನ್ನು ಮುರಿಯಲು ನಿರ್ಧರಿಸಿದರು.

ಫಿರೋಜ್ ಖಾನ್ ನಂತರ ಜ್ಯೋತಿಕಾಳೊಂದಿಗೆ ಬೆಂಗಳೂರಿಗೆ ತೆರಳಿದರು ಮತ್ತು ಅವರೊಂದಿಗೆ ಲಿವ್-ಇನ್ ಸಂಬಂಧವನ್ನು ಪ್ರಾರಂಭಿಸಿದರು. ಫಿರೋಜ್ ಮತ್ತು ಜ್ಯೋತಿಕಾ ಅವರ ಪ್ರೀತಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಯಿತು. ಜ್ಯೋತಿಕಾ ತನ್ನನ್ನು ಮದುವೆಯಾಗುವಂತೆ ಫಿರೋಜ್‌ಗೆ ಒತ್ತಡ ಹೇರಿದರೆ, ಫಿರೋಜ್ ಈ ಆಸೆಯನ್ನು ಈಡೇರಿಸಲಿಲ್ಲ.

ಫಿರೋಜ್‌ನ ಸುಳ್ಳು ಭರವಸೆಗಳಿಂದ ಬೇಸತ್ತು ಜ್ಯೋತಿಕಾ ಈ ಸಂಬಂಧದಿಂದ ಹೊರಬರಲು ನಿರ್ಧರಿಸಿದರು. ಅದೇ ಸಮಯದಲ್ಲಿ, ಸಂದರ್ಶನವೊಂದರಲ್ಲಿ, ಫಿರೋಜ್ ಜ್ಯೋತಿಕಾರನ್ನು ಗುರುತಿಸಲು ನಿರಾಕರಿಸಿದರು. ಇದು  ಜ್ಯೋತಿಕಾ ಅವರ ಕನಸುಗಳನ್ನು ಭಗ್ನಗೊಳಿಸಿತು ಮತ್ತು ಅವರು ಲಂಡನ್‌ಗೆ ತೆರಳಿದರು.

Latest Videos

click me!