ವರದಿಗಳ ಪ್ರಕಾರ, ಚಿತ್ರವು ವಿಶ್ವಾದ್ಯಂತ ಸುಮಾರು 403 ಕೋಟಿ ರೂ ಗಳಿಸಿದೆ. ಇದರಲ್ಲಿ ಭಾರತದಿಂದಲೇ 298 ಕೋಟಿ ರೂ.ಗಳ ಒಟ್ಟು ಕಲೆಕ್ಷನ್ ಆಗಿದ್ದರೆ, ವಿದೇಶದ ಮಾರುಕಟ್ಟೆಯಿಂದ 13 ಮಿಲಿಯನ್ ಡಾಲರ್ ಅಂದರೆ ಸುಮಾರು 105 ಕೋಟಿ ರೂ.ಗಳ ಒಟ್ಟು ಕಲೆಕ್ಷನ್ ಮಾಡಿದೆ. ಚಿತ್ರವು ಅದರ ಬಜೆಟ್ ಹಣ 410 ಕೋಟಿ ರೂ ಅನ್ನು ಗಳಿಸಲು ಸ್ವಲ್ಪ ದೂರದಲ್ಲಿದೆ.
ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದ ಭಾರತದಲ್ಲಿ ನಿವ್ವಳ ಕಲೆಕ್ಷನ್ ಸುಮಾರು 245.70 ಕೋಟಿ ರೂ. ಇದರಲ್ಲಿ ಮೊದಲ ಎರಡು ವಾರದ ಕಲೆಕ್ಷನ್ ಸುಮಾರು 230 ಕೋಟಿ ಮತ್ತು ಮೂರನೇ ಶುಕ್ರವಾರ,ಶನಿವಾರದ ಕಲೆಕ್ಷನ್ ಕ್ರಮವಾಗಿ 10 ಕೋಟಿ ಮತ್ತು 5.70 ಕೋಟಿ ಸೇರಿದೆ.
ಶನಿವಾರಕ್ಕೆ ಹೋಲಿಸಿದರೆ ಭಾನುವಾರದ ಕಲೆಕ್ಷನ್‌ನಲ್ಲಿ ಸ್ವಲ್ಪ ಜಿಗಿತವಾಗಬಹುದು ಮತ್ತು ಚಿತ್ರದ ಒಟ್ಟು ಕಲೆಕ್ಷನ್ ಹೆಚ್ಚಾಗಬಹುದು ಮತ್ತು ಅದು 'ದಿ ಕಾಶ್ಮೀರ್ ಫೈಲ್ಸ್' ಲೈಫ್‌ಟೈಮ್ ನೆಟ್ ಕಲೆಕ್ಷನ್ ರೂ 252.90 ಕೋಟಿ ದಾಟಬಹುದು ಎಂದು ನಿರೀಕ್ಷಿಸಲಾಗಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಲಿದೆ, ಆದರೆ ಕಲೆಕ್ಷನ್ ವೇಗವನ್ನು ನೋಡಿದರೆ, ಇದು 'RRR' ನ ಹಿಂದಿ ಆವೃತ್ತಿಯ ದಾಖಲೆಯನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.
ಇದು ಹಿಂದಿ ಬೆಲ್ಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಎಂದು ಸಾಬೀತುಪಡಿಸಬಹುದು. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ 'ಆರ್‌ಆರ್‌ಆರ್' ನ ಹಿಂದಿ ಆವೃತ್ತಿಯು ಸುಮಾರು 274.31 ಕೋಟಿ ರೂಪಾಯಿಗಳ ನಿವ್ವಳ ಸಂಗ್ರಹವನ್ನು ಮಾಡಿದೆ
ರಾಕ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಹಿಂದಿ ಆವೃತ್ತಿಯ ದಾಖಲೆಯನ್ನು ಮುರಿಯಲು 'ಬ್ರಹ್ಮಾಸ್ತ್ರ' ಚಿತ್ರಕ್ಕೆ ಸಾಧ್ಯವಿಲ್ಲ ಎಂಬುದು ಈವರೆಗಿನ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. 'ಕೆಜಿಎಫ್ 2' ಹಿಂದಿ ಆವೃತ್ತಿಯು ಸುಮಾರು 434.70 ಕೋಟಿ ರೂಪಾಯಿಗಳ ನೆಟ್ ಕಲೆಕ್ಷನ್ ಅನ್ನು ಹೊಂದಿತ್ತು.
'ಬ್ರಹ್ಮಾಸ್ತ್ರ' ಗಳಿಕೆಗೆ ಈ ವಾರವಷ್ಟೇ ಬಾಕಿ ಉಳಿದಿರುವುದು. ಏಕೆಂದರೆ ಎರಡು ದೊಡ್ಡ ಚಿತ್ರಗಳಾದ ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಅಭಿನಯದ 'ವಿಕ್ರಮ್ ವೇದ' ಮತ್ತು ಚಿಯಾನ್ ವಿಕ್ರಮ್ ಮತ್ತು ಐಶ್ವರ್ಯ ರೈ ಅಭಿನಯದ 'ಪೊನ್ನಿಯಿನ್ ಸೆಲ್ವನ್-1' ಶುಕ್ರವಾರ (ಸೆಪ್ಟೆಂಬರ್ 30) ಬಿಡುಗಡೆಯಾಗುತ್ತಿದೆ.
Image: Ayan MukerjiInstagram
ಮತ್ತೊಂದೆಡೆ ಈಗ ಚಿತ್ರದ ಕಲೆಕ್ಷನ್ ನ ವೇಗವೂ ತಗ್ಗಿದೆ. ಹೀಗಿರುವಾಗ ಚಿತ್ರ 270 ಕೋಟಿ ರೂಪಾಯಿಗಳ ನೆಟ್ ಕಲೆಕ್ಷನ್ ಅನ್ನು ದಾಟುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್ ಮತ್ತು ಸೌರಭ್ ಗುರ್ಜಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಶಾರುಖ್ ಖಾನ್ ಕೂಡ ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.