Twitter CEO Parag Agrawal: ಬಾಲ್ಯದ ಗೆಳೆಯನ ಬಗ್ಗೆ ಶ್ರೇಯಾ ಘೋಷಾಲ್ ಸಂಭ್ರಮ

First Published | Dec 1, 2021, 12:52 AM IST
  • Twitter CEO Parag Agrawal: ಇವರು ಶ್ರೇಯಾ ಘೋಷಲ್ ಬಾಲ್ಯ ಸ್ನೇಹಿತ
  • ಚೈಲ್ಡ್‌ಹುಟ್ ಫ್ರೆಂಡ್‌ ಸಾಧನೆಗೆ ಹೆಮ್ಮೆಪಟ್ಟ ಖ್ಯಾತ ಗಾಯಕಿ

ಜಾಕ್ ಡಾರ್ಸೆ ರಾಜೀನಾಮೆ ನೀಡಿದ ನಂತರ ಟ್ವಿಟರ್‌ನ ಹಿಂದಿನ ಮುಖ್ಯ ತಂತ್ರಜ್ಞಾನ ಅಧಿಕಾರಿ ಪರಾಗ್ ಅಗರವಾಲ್ (Parag Agrawal)ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ವಿಚಾರ ಹೊರಬೀಳುತ್ತಿದ್ದಂತೆ ಟ್ವಿಟರ್‌ನಲ್ಲಿ ಅಭಿನಂದನಾ ಸಂದೇಶಗಳು ಹರಿದುಬರಲಾರಂಭಿಸಿದೆ.

Shreya Ghoshal Parag Agrawal

ಅಂತಹ ಒಂದು ಶುಭಾಶಯ ಸಂದೇಶವು ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಬಂದಿದೆ. ಅವರು ಪರಾಗ್ ಅವರನ್ನು ಟ್ಯಾಗ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.

Tap to resize

ಅಭಿನಂದನೆಗಳು ಪರಾಗ್. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ!! ಈ ಸುದ್ದಿಯನ್ನು ಸಂಭ್ರಮಿಸುತ್ತಿರುವ ನಮಗೆ ಇದು ಬಹಳ ದೊಡ್ಡ ದಿನ ಎಂದು ಟ್ವೀಟ್ ಮಾಡಿದ್ದಾರೆ.

ಪರಾಗ್ ಮತ್ತು ಶ್ರೇಯಾ ಬಾಲ್ಯದಿಂದಲೂ ಸ್ನೇಹಿತರು. ಅವರ ಹಳೆಯ ಟ್ವಿಟರ್ ವಿನಿಮಯ ಮತ್ತು ಕೆಲವು ಫೋಟೋಗಳು ಈಗ ವೈರಲ್ ಆಗಿವೆ. ಪರಾಗ್ ಅವರು ಶ್ರೇಯಾ ಅವರ ಪತಿ ಶಿಲಾದಿತ್ಯ ಮುಖೋಪಾಧ್ಯಾಯ ಅವರ ಆತ್ಮೀಯರಾಗಿದ್ದಾರೆ. ಅವರು ಕೂಡಾ ತಂತ್ರಜ್ಞಾನ ಕಾರ್ಯನಿರ್ವಾಹಕ ಆಗಿದ್ದಾರೆ.

ಪರಾಗ್ ಅವರು ತಮ್ಮ ನೇಮಕಾತಿಯ ಬಗ್ಗೆ ಟ್ವಿಟ್ಟರ್‌ನಲ್ಲಿ ಟಿಪ್ಪಣಿಯನ್ನು ಪೋಸ್ಟ್ ಮಾಡಿದರು. ಡಾರ್ಸೆ ಅವರ ಮಾರ್ಗದರ್ಶನ ಮತ್ತು ಸ್ನೇಹಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

Latest Videos

click me!