ಮತ್ತೆ ಒಂದಾಗಲಿದ್ದರಾ ಕಿಮ್ ಕಾರ್ಡಶಿಯಾನ್ ಮತ್ತು ಕಾನ್ಯೆ ವೆಸ್ಟ್‌ ?

First Published | Dec 1, 2021, 12:14 AM IST

ಹಾಲಿವುಡ್‌ ನಟಿ ಕಿಮ್ ಕಾರ್ಡಶಿಯಾನ್ (Kim Kardashian) ಮತ್ತು ರಾಪರ್‌ ಕಾನ್ಯೆ ವೆಸ್ಟ್‌ (Kanye West)ಡಿವೋರ್ಸ್‌ ಪಡೆದು ಬೆರೆಯಾಗಿದ್ದಾರೆ ಮತ್ತು  ಸಹ ಪೋಷಕರಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಕಿಮ್‌ ಅವರ ಮಾಜಿ ಪತಿ ಕಾನ್ಯೆ ಹೆಂಡತಿಯನ್ನು ಮತ್ತೆ ಒಲಿಸಿಕೊಳ್ಳುವ ಎಲ್ಲಾ ಸಾರ್ವಜನಿಕ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಕಿಮ್‌ ರಿಯಾಕ್ಷನ್‌ ಏನು? ಕಿಮ್‌ ಅವರು ಮತ್ತೆ ಪತಿಯ ಬಳಿ ಮರಳುತ್ತರಾ? ಪೂರ್ತಿ ವಿವರ ಇಲ್ಲಿದೆ.

ಕಾನ್ಯೆ ವೆಸ್ಟ್ ತಮ್ಮ ಮಾಜಿ ಪತ್ನಿ ಕಿಮ್‌ ಅವರನ್ನು ಮರಳಿ ಗೆಲ್ಲುವ ಸಾರ್ವಜನಿಕ ಪ್ರಯತ್ನಳು ಮಾಡುತ್ತಿದ್ದಾರೆ. ಆದರೆ  ಕಿಮ್ ಕಾರ್ಡಶಿಯಾನ್ ನಿಜವಾಗಿಯೂ ಇದರ ಬಗ್ಗೆ ಆಸಕ್ತಿ ಹೊಂದಿಲ್ಲ ಅಥವಾ  ಇಂಪ್ರೆಸ್‌ ಆಗಿಲ್ಲ ಎಂದು ತೋರುತ್ತಿದೆ.  
 

SKIMS ಸಂಸ್ಥಾಪಕಿ ಮತ್ತು ನಾಲ್ವರ ತಾಯಿ ಕಿಮ್ ಕಾರ್ಡಶಿಯಾನ್ ಅವರ ಮಾಜಿ ಪತಿ ಕಾನ್ಯೆ ವೆಸ್ಟ್ ಅವರು ಮತ್ತೆ ಒಂದಾಗಲು ಮಾಡುತ್ತಿರುವ ಸಾರ್ವಜನಿಕ ಪ್ರಯತ್ನಗಳ ನಂತರ ವಿಚ್ಛೇದನವನ್ನು ಮರು ಪರಿಶೀಲಿಸುವ ಬಗ್ಗೆ ಯೋಚಿಸಿಲ್ಲ ಎಂದು ತೋರುತ್ತಿದೆ.
 

Tap to resize

ಕಿಮ್ ಕಾರ್ಡಶಿಯಾನ್ ಅವರನ್ನು ಮತ್ತೆ ಗೆಲ್ಲಲು ಕಾನ್ಯೆ ವೆಸ್ಟ್  ಮಾಡುತ್ತಿರುವ ಸಾರ್ವಜನಿಕ ಪ್ರಯತ್ನಗಳಿಂದ ಪ್ರಭಾವಿತರಾಗಿಲ್ಲ. ಈ ವಾರದ ಆರಂಭದಲ್ಲಿ, ಕಾನ್ಯೆ ವೆಸ್ಟ್ ಅವರು Instagram ಸ್ಟೋರಿಯನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ  ಅವರ ವಿಚ್ಛೇದಿತ ಪತ್ನಿ ಕಿಮ್ ಕಾರ್ಡಶಿಯಾನ್ ಅವರನ್ನು ಚುಂಬಿಸುತ್ತಿರುವ ಥ್ರೋಬ್ಯಾಕ್‌  ಫೋಟೋ ಹಂಚಿಕೊಂಡಿದ್ದಾರೆ.

ತನ್ನ ಕುಟುಂಬವನ್ನು ಒಟ್ಟಿಗೆ ಇರಿಸಲು ಮತ್ತು ಅವರ ಮದುವೆಯ ಸುತ್ತಲಿನ ಘಟನೆಗಳನ್ನು ಬದಲಾಯಿಸುವ ಉದ್ದೇಶಗಳ ಬಗ್ಗೆ ಸಾರ್ವಜನಿಕ ಭಾಷಣ ಮಾಡಿದ ಕೆಲವೇ ದಿನಗಳಲ್ಲಿ ಥ್ರೋಬ್ಯಾಕ್‌ ಫೋಟೋದ ಜೊತೆ  ಕಾನ್ಯೆಯ  ಪೋಸ್ಟ್ ಬಂದಿತು.
 

ಮತ್ತೊಂದೆಡೆ, ಕಿಮ್‌ಗೆ ಹತ್ತಿರವಿರುವ ಮೂಲವೊಂದು ದಿನಪತ್ರಿಕೆಯೊಂದಕ್ಕೆ ಕಿಮ್ Saturday Night Live'ನ  ಪೀಟ್ ಡೇವಿಡ್ಸನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ . ಕಾನ್ಯೆ ವೆಸ್ಟ್‌ನಿಂದ ವಿಚ್ಛೇದನ ಪಡೆದ ನಂತರ ಅವರು ಮೂವ್‌ ಆನ್‌ ಆಗಿದ್ದಾರೆ ಎಂದು ಹೇಳಿದ್ದಾರೆ.  

ಕಿಮ್ ಮಾಜಿ ಪತಿ ರಾಪರ್‌ ಜೊತೆ ರಾಜಿಯಾಗಿ ಮತ್ತೆ  ಅವರ ಬಳಿ ಹಿಂತಿರುಗುವ ಮನಸ್ಥಿತಿಯಲ್ಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಿಮ್ ಅವರು ತಮ್ಮ ಮದುವೆಯಲ್ಲಿ ಭಿನ್ನಾಭಿಫ್ರಾಯವನ್ನು ದೂರಮಾಡುವ ಬಗ್ಗೆ ಕೆಲಸ ಮಾಡಲು ಬಯಸುತ್ತಾರೆ ಎಂಬ ಯಾವುದೇ ಹಿಂಟ್‌ ಸಹ  ಕಾನ್ಯೆಗೆ ನೀಡಿಲ್ಲ. 

ಅಷ್ಟೇ ಅಲ್ಲ, ಕಿಮ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಅವರ ವಿವಾಹವು ತಿಂಗಳ ಹಿಂದೆ ಮುಗಿದಿದೆ ಎಂಬುದನ್ನು  ಕಾನ್ಯೆಗೆ ತಿಳಿಸಿದ್ದರು. ಪ್ರತ್ಯೇಕತೆಯ ಮಧ್ಯೆ, ಕಿಮ್ ಮತ್ತು ಕಾನ್ಯೆ ತಮ್ಮ ನಾಲ್ಕು ಮಕ್ಕಳಾದ ನಾರ್ತ್, ಸೇಂಟ್, ಚಿಕಾಗೋ ಮತ್ತು ಪ್ಸಾಲ್ಮ್ ವೆಸ್ಟ್ ಅನ್ನು  ಸಹ-ಪೋಷಕರಾಗಿದ್ದಾರೆ, ಏಕೆಂದರೆ ಅವರು ತಮ್ಮ ಆಸ್ತಿಯನ್ನು ಭಾಗ ಮಾಡಬೇಕು.  

ಕಿಮ್ ಮತ್ತು ಕಾನ್ಯೆ ತಮ್ಮ ಹೆಚ್ಚಿನ ಆಸ್ತಿ ಮತ್ತು ಸಂಪತ್ತನ್ನು ಸೌಹಾರ್ದಯುತವಾಗಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಒಟ್ಟಿಗೆ ನಿರ್ವಹಿಸುತ್ತಿರುವ ಸಹ-ಪೋಷಕರ ರೋಲ್‌ ಬಗ್ಗೆ ಕೂಡ ಕಾನ್ಯೆ  ಸಂತೋಷಗೊಂಡಿದ್ದಾರೆ. 

Latest Videos

click me!