ಶಾರ್ಟ್‌ ಔಟ್‌ಫಿಟ್‌ನಲ್ಲಿ Shraddha Kapoor ಅವರ ಹಾಟ್‌ ಫೋಟೋಶೂಟ್‌

Published : May 28, 2022, 03:34 PM IST

ಶ್ರದ್ಧಾ ಕಪೂರ್ (Shraddha Kapoor) ಬಾಲಿವುಡ್  ಸಹಜ ಸುಂದರಿ. ಎಷ್ಟು ಸುಂದರಿಯೋ ಅಷ್ಟೇ ಟ್ಯಾಲೆಂಟಡ್‌ ಕೂಡ ಹೌದು. ಮುಂದಿನ ದಿನಗಳಲ್ಲಿ ನಟಿ ರಣಬೀರ್ ಕಪೂರ್ (Ranbir kapoor) ಜೊತೆ ಲವ್ ರಂಜನ್ (Luv Ranjan) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಸ್ಪೇನ್‌ಗೆ ತೆರಳಲಿದ್ದಾರೆ. ಇದರ ನಡುವೆ ಶ್ರದ್ಧಾ ಕಪೂರ್ ತುಂಬಾ ಸುಂದರ ಫೋಟೋಶೂಟ್ ಮಾಡಿದ್ದಾರೆ. ಇದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.  

PREV
19
ಶಾರ್ಟ್‌ ಔಟ್‌ಫಿಟ್‌ನಲ್ಲಿ Shraddha Kapoor ಅವರ ಹಾಟ್‌ ಫೋಟೋಶೂಟ್‌

ಶ್ರದ್ಧಾ ಕಪೂರ್ ಇತ್ತೀಚೆಗೆ ತುಂಬಾ ಸುಂದರವಾದ ಫೋಟೋಶೂಟ್‌ಗಳನ್ನು ಮಾಡಿದ್ದಾರೆ. ಚಿಕ್ಕ ಉಡುಗೆ ಮತ್ತು ಮೆಸ್ಸಿ ಕೂದಲಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಇದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.  

29

ಫೋಟೋಗಳಲ್ಲಿ  ಶ್ರದ್ಧಾ ಗುಲಾಬಿ ಬಣ್ಣದ ಬ್ರಾ ಮೇಲೆ ಬಿಳಿ ಡೀಪ್ ನೆಕ್ ಮಿನಿ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಬೋಲ್ಡ್ ಲುಕ್‌ ಅನ್ನು ತೋರಿಸಿದ್ದಾರೆ

39

ಪಿಂಕ್ ಹಿನ್ನೆಲೆಯಲ್ಲಿ ಈ ಫೋಟೋಶೂಟ್ ಮಾಡಿದ್ದಾರೆ. ಈ ಡ್ರೆಸ್‌ ಜೊತೆ ಶ್ರದ್ಧಾ ತಮ್ಮ ಕೂದಲಿಗೆ ಮೆಸ್ಸಿ ಲುಕ್‌ ನೀಡಿದ್ದಾರೆ.ನ್ಯೂಡ್‌ ಮೇಕಪ್ ಮತ್ತು ಗುಲಾಬಿ ಬಣ್ಣದ ಲಿಪ್‌ಸ್ಟಿಕ್‌ನಲ್ಲಿ ಅವರು ಕಿಲ್ಲರ್ ಲುಕ್ ನೀಡುತ್ತಿದ್ದಾರೆ.

49

ಬಿಳಿ ಎತ್ತರದ ಹಿಲ್ಸ್‌ ಬೂಟುಗಳೊಂದಿಗೆ, ಅವರು  ತನ್ನ ಕುತ್ತಿಗೆಗೆ ತೆಳುವಾದ ಚಿನ್ನದ ಸರಪ  ಮತ್ತು ಸಣ್ಣ ಇಯರ್‌ ರಿಂಗ್‌ ಮೂಲಕ ತನ್ನ ಲುಕ್‌ವನ್ನು ಪೂರ್ಣಗೊಳಿಸಿದ್ದಾರೆ. ಅವರ ಅಪ್ರತಿಮ ಸೌಂದರ್ಯವು ಪ್ರತಿ ಫೋಟೋದಲ್ಲೂ ಗೋಚರಿಸುತ್ತದೆ

59

ಈ ಫೋಟೋಗಳನ್ನು ಹಂಚಿಕೊಂಡ ನಟಿ, 'ಯಾಕೆ ಯೋಚಿಸಬೇಕು? ಪಿಂಕ್ ಮಾತ್ರ ' ಎಂದು ಬರೆದಿದ್ದಾರೆ ಮತ್ತು  ಇದರೊಂದಿಗೆ ಪಿಂಕ್ ಹಾರ್ಟ್ ನ ಎಮೋಜಿಯನ್ನು ಹಾಕಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಟಿಗೆ  ಸಾಕಷ್ಟು ಪ್ರೀತಿ ನೀಡುತ್ತಿದ್ದಾರೆ. 
 

69

 'ನೀವು ಬಾಲಿವುಡ್‌ನ ಅತ್ಯಂತ ಸುಂದರ ನಟಿ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಅದೇ ಸಮಯದಲ್ಲಿ, 'ನಿಮ್ಮ ಫೋಟೋಗಳನ್ನು ನೋಡಿ, ಹೃದಯ ಗುಲಾಬಿ-ಗುಲಾಬಿ ಬಣ್ಣವಾಯಿತು' ಎಂದು ಇನ್ನೊಬ್ಬರು ಬರೆದರು.


 

79

ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ 2010 ರಲ್ಲಿ ತೀನ್ ಪಟ್ಟಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಆರ್ ಮಾಧವನ್‌ ಸಹ ಜೊತೆಗಿದ್ದರು.

89

ಶ್ರದ್ಧಾ ಕೊನೆಯದಾಗಿ ಬಾಘಿ 3 ರಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಟೈಗರ್ ಶ್ರಾಫ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದರು. ಪ್ರಸ್ತುತ ಅವರ ಬಳಿ  ಲವ್ ರಂಜನ್ ಅವರ ಚಿತ್ರವಿದೆ. ಇದಲ್ಲದೆ, ಅವರು ಶ್ರೀದೇವಿಯ 'ಚಲ್ಬಾಜ್' ಮತ್ತು 'ನಾಗಿನ್' ರೀಮೇಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರದ್ಧಾ ಕಪೂರ್ ಉತ್ತಮ ನೃತ್ಯಗಾರ್ತಿ ಮತ್ತು ಗಾಯಕಿ ಕೂಡ ಹೌದು. 

99

ಇನ್ನೂ ಶ್ರದ್ಧಾರ ಪ್ರೇಮ ಜೀವನ ಕೂಡ ಸಖತ್‌ ಫೇಮಸ್‌, ಆಕೆಯ ಹೆಸರು ಫರ್ಹಾನ್ ಅಖ್ತರ್ ಜೊತೆ ಸೇರಿಕೊಂಡಿತ್ತು. ಇದಲ್ಲದೆ, ರೋಹನ್ ಶ್ರೇಷ್ಠಾ, ಆದಿತ್ಯ ರಾಯ್ ಅವರೊಂದಿಗಿನ ಸಂಬಂಧದ ಸುದ್ದಿಯೂ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. 

Read more Photos on
click me!

Recommended Stories