Big B ಅಜ್ಜ ಎಂದು ಕೊಂಡಿದ್ದಾರಂತೆ Shahrukh ಕಿರಿ ಮಗ; ಕಾರಣವೇನು?
First Published | May 27, 2022, 5:59 PM ISTಶಾರುಖ್ ಖಾನ್ (Shahrukh Khan) ಅವರ ಕಿರಿಯ ಮಗ ಅಬ್ರಾಮ್ ಖಾನ್ (Abram Khan) ಇಂದು 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮೇ 27 ರಂದು2013 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಜನಿಸಿದ ಅಬ್ರಾಮ್ ಶಾರುಖ್ ಖಾನ್ ಮತ್ತು ಗೌರಿ ದಂಪತಿ ಕಿರಿಯ ಮಗ. ಮಾಧ್ಯಮದ ಛಾಯಾಗ್ರಾಹಕರು ತನ್ನ ಫೋಟೋಗಳನ್ನು ಕ್ಲಿಕ್ಕಿಸುವುದನ್ನು ಅಬ್ರಾಮ್ ಇಷ್ಟಪಡುವುದಿಲ್ಲ. ಆದಾಗ್ಯೂ, ಅವನು ತನ್ನ ತಂದೆಯೊಂದಿಗೆ ಹಾಲಿಡೇಗೆ ಹೋಗಲು ಇಷ್ಟಪಡುತ್ತಾನೆ. ಅದೇ ಸಮಯದಲ್ಲಿ, ಅಮಿತಾಬ್ ಬಚ್ಚನ್ (Amitabh Bachchan) ತನ್ನ ಅಜ್ಜ, ಅಂದರೆ ತನ್ನ ತಂದೆಯ ತಂದೆ ಎಂದು ಅಬ್ರಾಮ್ ಭಾವಿಸುತ್ತಾನಂತೆ. ಇದರ ಹಿಂದಿನ ಕಾರಣ ಇಲ್ಲಿದೆ.