ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ತಲುಪಿದ Kartik Aryan ಚಿತ್ರ

First Published | May 27, 2022, 6:05 PM IST

ಕಾರ್ತಿಕ್ ಆರ್ಯನ್ (Kartik Aryan) ಅಭಿನಯದ 'ಭೂಲ್ ಭುಲೈಯಾ 2' (Bhool Bhulaiyaa 2 ) ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ತೂ ಹವಾ ಸೃಷ್ಟಿಮಾಡಿದೆ. ಈ ಸಿನಿಮಾ ಮೊದಲ ವಾರದಲ್ಲಿ ಚಿತ್ರ 84.78 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಕಾರ್ತಿಕ್ ಒಂದು ದೊಡ್ಡ ಮೈಲಿಗಲ್ಲು ಸಾಧಿಸಿದ್ದಾರೆ ಮತ್ತು ಅದು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಕಲೆಕ್ಷನ್ ಆಗಿದೆ. 11 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರ್ತಿಕ್, ಇದುವರೆಗೆ ಹಿರಿತೆರೆಯಲ್ಲಿ 10 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಎಲ್ಲಾ ಚಿತ್ರಗಳ ಒಟ್ಟು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಸಂಪಾದಿಸಿದೆ. ವಿಶೇಷವೆಂದರೆ ಅವರ ಯಶಸ್ಸಿನ ಪ್ರಮಾಣವೂ ಶೇ.50ಕ್ಕಿಂತ ಹೆಚ್ಚಿದೆ.

ಅನೀಸ್ ಬಾಜ್ಮಿ ನಿರ್ದೇಶನದ 'ಭೂಲ್ ಭುಲೈಯಾ 2' 20 ಮೇ 2022 ರಂದು ಬಿಡುಗಡೆಯಾಯಿತು. ಕಾರ್ತಿಕ್ ಆರ್ಯನ್ ಜೊತೆಗೆ ಕಿಯಾರಾ ಅಡ್ವಾಣಿ ಮತ್ತು ಟಬು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ಮೊದಲ ದಿನದಲ್ಲಿ ಸುಮಾರು 14 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಕಾರ್ತಿಕ್ ಅವರ ವೃತ್ತಿಜೀವನದ (Career) ಅತಿದೊಡ್ಡ ಓಪನರ್ ಆಯಿತು ಮತ್ತು ಶೀಘ್ರದಲ್ಲೇ ಅವರ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ ಚಿತ್ರವಾಗಲಿದೆ.

ಕಾರ್ತಿಕ್‌ ಅವರ 'ಲವ್ ಆಜ್ ಕಲ್ 2' 14 ಫೆಬ್ರವರಿ 2020 ರಂದು ಕೊರೋನಾ ಸಮಯದಲ್ಲಿ ಬಿಡುಗಡೆಯಾಯಿತು. ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದರು ಮತ್ತು ಸಾರಾ ಅಲಿ ಖಾನ್ (Sara Ali Khan) ಕಾರ್ತಿಕ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 34.99 ಕೋಟಿ ಗಳಿಸಿದ ಈ ಸಿನಿಮಾ ಫ್ಲಾಪ್‌ ಆಗಿತ್ತು.

Tap to resize

6 ಡಿಸೆಂಬರ್ 2019 ರಂದು ಬಿಡುಗಡೆಯಾದ 'ಪತಿ ಪತ್ನಿ ಔರ್ ವೋ', ಕಾರ್ತಿಕ್ ಜೊತೆಗೆ ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಮುದಸ್ಸರ್ ಅಜೀಜ್ ನಿರ್ದೇಶಿಸಿದ್ದಾರೆ. ವಿವಾಹೇತರ ಸಂಬಂಧವನ್ನು ಆಧರಿಸಿದ ಚಿತ್ರವಾಗಿದೆ. ಈ ಹಿಟ್‌ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 86.99 ಕೋಟಿಯಷ್ಟು.

'ಲುಕಾ ಚುಪ್ಪಿ' 1 ಮಾರ್ಚ್ 2019 ರಂದು ಬಿಡುಗಡೆಯಾದ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನನ್ ಅಭಿನಯದ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಚಿತ್ರದ ಕಥೆಯು ಲಿವ್-ಇನ್ ಸಂಬಂಧವನ್ನು ಆಧರಿಸಿದೆ. ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸಿದ ಈ ಸಿನಿಮಾ 94.75 ಕೋಟಿಗಳಿಸಿ ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರಿದೆ. 

ಲವ್ ರಂಜನ್ ನಿರ್ದೇಶನದ ಸೋನು ಕೆ ಟಿಟು ಕಿ ಸ್ವೀಟಿ, 23 ಫೆಬ್ರವರಿ 2018 ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ನುಶ್ರತ್ ಭರುಚಾ ಮತ್ತು ಸನ್ನಿ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಕಥೆ ಪ್ರೀತಿ ಮತ್ತು ಸ್ನೇಹದ ನಡುವಿನ ಸಂಘರ್ಷವನ್ನು ಆಧರಿಸಿದೆ.  ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ ಗಳಿಸಿತ್ತು.

ಅಶ್ವನಿ ಧೀರ್ ನಿರ್ದೇಶಿಸಿದ, 'ಗೆಸ್ಟ್ ಇನ್ ಲಂಡನ್' 7 ಜುಲೈ 2017 ರಂದು ತೆರೆಗೆ ಬಂದಿತು. ಚಿತ್ರದಲ್ಲಿ ಕಾರ್ತಿಕ್ ಜೊತೆಗೆ ಕೃತಿ ಖರ್ಬಂದ, ಪರೇಶ್ ರಾವಲ್ ಮತ್ತು ಸುಪ್ರಿಯಾ ಪಾಠಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಗಲ್ಲಾಪೆಟ್ಟಿಗೆ ಗಳಿಕೆ 10.64 ಕೋಟಿ.
 

16 ಅಕ್ಟೋಬರ್ 2015 ರಂದು ಬಿಡುಗಡೆಯಾದ ಪ್ಯಾರ್ ಕಾ ಪಂಚನಾಮಾ 2, ಕಾರ್ತಿಕ್ ಆರ್ಯನ್ ಜೊತೆಗೆ ನುಶ್ರತ್ ಭರುಚಾ, ಸನ್ನಿ ಸಿಂಗ್, ಸೋನಾಲಿ ಸೈಗಲ್, ಓಂಕಾರ್ ಕಪೂರ್ ಮತ್ತು ಇಶಿತಾ ರಾಜ್ ಶರ್ಮಾ ಕೂಡ ನಟಿಸಿದ್ದಾರೆ. ಚಿತ್ರವನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ. ಇದು 64.1 ಕೋಟಿ ಗಳಿಸಿ ಸೂಪರ್‌ ಹಿಟ್‌ ಆಗಿದೆ. 

ಸುಭಾಷ್ ಘಾಯ್ ನಿರ್ದೇಶಿಸಿದ, 'ಕಾಂಚಿ: ದಿ ಅನ್‌ಬ್ರೇಕಬಲ್' 25 ಏಪ್ರಿಲ್ 2014 ರಂದು ಚಿತ್ರಮಂದಿರಗಳನ್ನು ತಲುಪಿತು. ಚಿತ್ರದಲ್ಲಿ ಕಾರ್ತಿಕ್ ಜೊತೆಗೆ ಮಿಶ್ತಿ ಕೂಡ ಪ್ರಮುಖ ಪಾತ್ರವನ್ನು ಹೊಂದಿದ್ದರು. ಚಿತ್ರದಲ್ಲಿ ಹಿರಿಯ ನಟರಾದ ರಿಷಿ ಕಪೂರ್ (Rishi Kapoor) ಮತ್ತು ಮಿಥುನ್ ಚಕ್ರವರ್ತಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫ್ಲಾಪ್‌ ಚಿತ್ರದ ಕಲೆಕ್ಷನ್‌ ಕೇವಲ 3.9 ಕೋಟಿ.

'ಆಕಾಶವಾಣಿ' ಅನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ ಮತ್ತು ಚಿತ್ರವು 25 ಜನವರಿ 2013 ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ ಕಾರ್ತಿಕ್ ಜೊತೆಗೆ ನುಶ್ರತ್ ಭರುಚಾ ಮತ್ತು ಸನ್ನಿ ಸಿಂಗ್ ಕೂಡ ಪ್ರಮುಖ ಪಾತ್ರಗಳನ್ನು ಹೊಂದಿದ್ದರು. 2.11 ಕೋಟಿ ಗಳಿಸಿದ ಈ ಸಿನಿಮಾ ಫ್ಲಾಪ್‌ ಎಂದು ಪರಿಗಣಿಸಲಾಗಿದೆ.

ಲವ್ ರಂಜನ್ ನಿರ್ದೇಶನದ 'ಪ್ಯಾರ್ ಕಾ ಪಂಚನಾಮಾ' ಕಾರ್ತಿಕ್ ಆರ್ಯನ್ ಅವರ ಚೊಚ್ಚಲ ಚಿತ್ರ. 20 ಮೇ 2011 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ನುಶ್ರತ್ ಭರುಚಾ, ಸನ್ನಿ ಸಿಂಗ್, ಸೋನಾಲಿ ಸೈಗಲ್, ಓಂಕಾರ್ ಕಪೂರ್ ಮತ್ತು ಇಶಿತಾ ರಾಜ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಅವರ ಸ್ವಗತವು ಸಾಕಷ್ಟು ಪ್ರಶಂಸೆಯನ್ನು ಗಳಿಸಿತು. 9 ಕೋಟಿ ಕಲೆಕ್ಷನ್‌ ಮಾಡಿ ಈ ಸಿನಿಮಾ ಅವ್ರೇಜ್‌ ಯಶಸ್ಸು ಗಳಿಸಿತ್ತು. 

Latest Videos

click me!