ಬಾಲಿವುಡ್ ಗೆ (Bollywood) ಎಂಟ್ರಿ ಕೊಡೋ ಮುನ್ನ ಮೌನಿ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು, ಆದರೆ ಅವರು 'ದೇವೊನ್ ಕೆ ದೇವ್ ಮಹಾದೇವ್' ನಿಂದ ಹೆಚ್ಚು ಜನಪ್ರಿಯತೆ ಪಡೆದರು. ಇದರ ನಂತರ ಅವರು ಏಕ್ತಾ ಕಪೂರ್ ಅವರ 'ನಾಗಿನ್' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಇದರ ನಂತರ, ಮೌನಿಯ ಲುಕ್ ನಲ್ಲಿ ಅನೇಕ ಹಠಾತ್ ಬದಲಾವಣೆಗಳು ಕಂಡುಬಂದವು. ತಮ್ಮ ಮೂಗಿನಿಂದ, ಬಾಯಿಯವರೆಗೆ ಸುಂದರವಾಗಿ ಕಾಣಿಸೋದಕ್ಕೆ ಮೌನಿ ರಾಯ್ ಅನೇಕ ರೀತಿಯ ಸರ್ಜರಿಗೆ ಒಳಗಾಗಿದ್ದಾರೆ ಅನ್ನೋದು ಕೂಡ ಸುದ್ದಿಯಾಗಿತ್ತು.