ತೆರೆ ಮೇಲೆ ಸೀರಿಯಲ್ ಕಿಸ್ಸರ್, ಬ್ಯಾಡ್ ಬಾಯ್ ಇಮೇಜ್… ರಿಯಲ್ ಲೈಫಲ್ಲಿ ಜೆಂಟಲ್’ಮ್ಯಾನ್ ಇಮ್ರಾನ್ ಹಶ್ಮಿ

First Published | Aug 25, 2024, 4:59 PM IST

ಸಿನಿಮಾಗಳಲ್ಲಿ ಸೀರಿಯಲ್ ಕಿಸ್ಸರ್ ಆಗಿ, ಬ್ಯಾಡ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಳ್ಳುವ ಇಮ್ರಾನ್ ಹಶ್ಮಿ ರಿಯಲ್ ಲೈಫಲ್ಲಿ ಜೆಂಟಲ್’ಮ್ಯಾನ್. ಇಲ್ಲಿದೆ ಇಮ್ರಾನ್ ಹಶ್ಮಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ. 

90 ರ ದಶಕದಲ್ಲಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಆ ನಾಯಕ, ಟೀನೇಜ್ ಹುಡುಗರ ಫೇವರೆಟ್ ಹೀರೋ ಆದನು. ತಮ್ಮ ನಟನೆಯ ಮೂಲಕ ಮ್ಯಾಜಿಕ್ ಮಾಡಿದ್ದ, ಈ ನಟನಿಗೆ ಮನಸೋತವರು ಅದೆಷ್ಟೋ ಜನ. ಸಿನಿಮಾಗಳ 'ಕಿಸ್ಸಿಂಗ್ ಸೀನ್' ಗಳನ್ನು ಎಷ್ಟು ಚೆನ್ನಾಗಿ ಮಾಡಿದ್ದರೆಂದರೆ, ಈ ನಟನನ್ನು ಜನರು 'ಗಾಡ್ ಆಫ್ ಕಿಸ್', 'ಸೀರಿಯಲ್ ಕಿಸ್ಸರ್' ಎಂದೇ ಕರೆಯೋದಕ್ಕೆ ಆರಂಭಿಸಿದರು. 
 

ನಾವು ಯಾರ ಬಗ್ಗೆ ಹೇಳ್ತಿದ್ದೀವಿ ಅನ್ನೋದು ಗೊತ್ತಾಯ್ತು ಅಲ್ವಾ? ನಾವು ಬಾಲಿವುಡ್ ನ ಸೀರಿಯಲ್ ಕಿಸ್ಸರ್ ಅಂದರೆ ಇಮ್ರಾನ್ ಹಶ್ಮಿ(Emraan Hashmi) ಬಗ್ಗೆ ಹೇಳ್ತಿದ್ದೀವಿ.  ಸಿನಿಮಾಗಳಲ್ಲಿ ಸೀರಿಯಲ್ ಕಿಸ್ಸರ್ ಆಗಿ, ಬ್ಯಾಡ್ ಬಾಯ್ ಇಮೇಜ್ ನಲ್ಲಿ ಮಿಂಚಿದ ಇಮ್ರಾನ್ ಹಶ್ಮಿ ರಿಯಲ್ ಲೈಫಲ್ಲಿ ಜೆಂಟಲ್’ಮ್ಯಾನ್ ಅಂದ್ರೆ ನಂಬಲೇಬೇಕು ಬನ್ನಿ ಬಾಲಿವುಡ್ ನಟನ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.

Tap to resize

ನಿಮಗೆ ಗೊತ್ತಾ ಇಮ್ರಾನ್ ಹಶ್ಮಿ ಮತ್ತು ಆಲಿಯಾ ಭಟ್ (Alia Bhatt) ಸಹೋದರ ಸಂಬಂಧಿಗಳಾಗ್ತಾರೆ, ಇಮ್ರಾನ್ ಅಜ್ಜಿ ಮತ್ತು ಮಹೇಶ್ ಭಟ್ ಸಂಬಂಧಿಕರು ಎನ್ನಲಾಗುತ್ತಿದೆ. ಇನ್ನು ಇಮ್ರಾನ್ ಸಿನಿಮಾಗೆ ಬರೋದಕ್ಕೆ ಕಾರಣ ಕೂಡ ಮಹೇಶ್ ಭಟ್ (Mahesh Bhatt). ಜೀವನದಲ್ಲಿ ಮುಂದೆ ಏನು ಎನ್ನುವ ಬಗ್ಗೆ ಯೋಚನೆಯೇ ಇಲ್ಲದ ಇಮ್ರಾನ್ ಹಶ್ಮಿಯವರನ್ನ ಅವರ ತಂದೆ ಸೋದರಮಾವ ಮಹೇಶ್ ಭಟ್ ಬಳಿ ಬಿಟ್ಟಿದ್ದರಂತೆ. 

Emraan Hashmi

ಇಮ್ರಾನ್ ಹಶ್ಮಿ ಮುಂಬೈನ ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದರು ಆದರೆ ಅವರು ಮೊದಲಿನಿಂದಲೂ ಆವ್ರೇಜ್ ವಿದ್ಯಾರ್ಥಿಯಂತೆ, ಇಮ್ರಾನ್ ಕಾಲೇಜಿಗೆ ಹೋಗ್ತಿದ್ದಿದ್ದೆ, ತನ್ನ ಗೆಳತಿಯರು ಮತ್ತು ಸ್ನೇಹಿತರಿಗಾಗಿ. ಮಹೇಶ್ ಭಟ್ ಇಮ್ರಾನ್ ಹಶ್ಮಿಯನ್ನು ತನ್ನ ಸಹಾಯಕನಾಗಿ ಇಟ್ಟುಕೊಂಡಿದ್ದರಂತೆ, ಆದ್ರೆ ಇಮ್ರಾನ್ ಹೇಗಾದರೂ ಮಾಡಿ ಅವರಿಂದ ತಪ್ಪಿಸಲು ತುಂಬಾನೆ ಪ್ರಯತ್ನಿಸುತ್ತಿದ್ದರಂತೆ. 
 

ಇನ್ನು ಮರ್ಡರ್ ಸಿನಿಮಾ ಮೂಲಕ ಯಶಸ್ಸು ಪಡೆದ ಇಮ್ರಾನ್ ಹಶ್ಮಿ, ಮರ್ಡರ್,  'ಆಶಿಕ್ ಬನಾಯಾ ಆಪ್ನೆ', 'ಜನ್ನತ್', 'ಗ್ಯಾಂಗ್ಸ್ಟರ್', 'ದಿ ಕಿಲ್ಲರ್', 'ಜೆಹರ್', 'ಕ್ರೂಕ್' ಮತ್ತು 'ಗುಡ್ ಬಾಯ್ ಬ್ಯಾಡ್ ಬಾಯ್' ಚಿತ್ರಗಳಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಿದ್ದರಿಂದ ಇವರಿಗೆ 'ಸೀರಿಯಲ್ ಕಿಸ್ಸರ್' (Serial kisser) ಎಂದೇ ಕರೆಯಲಾಗಿತ್ತು, ಆದ್ರೆ ರಿಯಲ್ ಲೈಫಲ್ಲಿ ಇವರು ನಿಜವಾದ ಜೆಂಟಲ್’ಮ್ಯಾನ್.  

ಇಮ್ರಾನ್ ರನ್ನು ನಿಜವಾದ ಜೆಂಟಲ್’ಮ್ಯಾನ್ ಅಂತ ಕರೆಯೋದು ಯಾಕೆ ಅಂದ್ರೆ, ಸಿನಿಮಾಗಳಲ್ಲಿ ಫ್ಲರ್ಟ್, ಹುಡುಗೀರ ಜೊತೆ ರೊಮ್ಯಾನ್ಸ್, ಚಕ್ಕಂದವಾಡುವ ದೃಶ್ಯಗಳಲ್ಲೇ ನಟಿಸುತ್ತಿದ್ದ ಇಮ್ರಾನ್ ನಿಜ ಜೀವನದಲ್ಲಿ ಪ್ರೀತಿಸಿದ್ದು ಒಂದೇ ಹುಡುಗಿಯನ್ನ, ಆಕೆಯನ್ನೆ ಮದ್ವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ ಇಮ್ರಾನ್. 

ಇಮ್ರಾನ್ ಮತ್ತು ಅವರ ಪತ್ನಿ ಪರ್ವೀನ್ ಶಹಾನಿ (Parveen Shahani) ಹೈಸ್ಕೂಲ್ ಪ್ರೇಮಿಗಳಾಗಿದ್ದರು, ಅವರು ಅನೇಕ ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು, ಸ್ನೇಹಿತರು. ಅವರ ಪ್ರೀತಿ ಮತ್ತು ಬಾಂಧವ್ಯ ಒಂದೇ ಸಮಯದಲ್ಲಿ ಬೆಳೆಯಿತು, ಜೊತೆಗೆ ಇಬ್ಬರೂ ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಕೂಡ ಮಾಡುತ್ತಿದ್ದರು. ಆ ಸಮಯದಲ್ಲಿ, ಇಮ್ರಾನ್ ತಮ್ಮ ಕರಿಯರ್ ಲೈಫಲ್ಲಿ ಸೆಟಲ್ ಆಗೋದಕ್ಕೆ ಮುಂದಾಗಿದ್ರೆ, ಪರ್ವೀನ್ ಇಮ್ರಾನ್ ಜೊತೆ ಸದಾ ಇದ್ದು, ಅವರಿಗೆ ಬೆಂಬಲ ನೀಡಿದ್ದರು. . 
 

2006 ರಲ್ಲಿ ಇಮ್ರಾನ್ ಹಶ್ಮಿ ತನ್ನ ದೀರ್ಘಕಾಲದ ಗೆಳತಿ ಪರ್ವೀನ್ ಶಹಾನಿಯನ್ನು ವಿವಾಹವಾದರು. ಇವರಿಬ್ಬರಿಗೆ + ಅಯಾನ್ ಹಶ್ಮಿ (Ayan Hashmi) ಎಂಬ ಮಗ ಇದ್ದಾನೆ.  ಆದರೆ ಮಗುವಿಗೆ ಕೇವಲ ನಾಲ್ಕು ವರ್ಷ ಇರೋವಾಗ ಆತನಿಗೆ ಕ್ಯಾನ್ಸರ್ ಇರೋದು ಗೊತ್ತಾಗಿತ್ತು. ಹೀಗಾಗಿ ಮಗುವನ್ನು ಉಳಿಸಿಕೊಳ್ಳಲು ಇಮ್ರಾನ್ ಹಶ್ಮಿ ದೇಶ, ವಿದೇಶದ ಆಸ್ಪತ್ರೆಗಳಿಗೆ ತೆರಳುತ್ತಾ ತುಂಬಾನೆ ಕಷ್ಟಪಟ್ಟಿದ್ದಾರೆ. ಸದ್ಯ ಮಗು ಕ್ಯಾನ್ಸರ್ ಮುಕ್ತವಾಗಿ ಆರೋಗ್ಯದಿಂದ ಇದೆ. ತಮ್ಮ ಮಗನ ಕ್ಯಾನ್ಸರ್ ಹೋರಾಟದ ಕುರಿತು ಇಮ್ರಾನ್ ಹಶ್ಮಿ ಪುಸ್ತಕ ಕೂಡ ಬರೆದಿದ್ದರು. 
 

Emraan Hashmi

ಸೋಶಿಯಲ್ ಮೀಡಿಯಾದಿಂದ, ಸೋಶಿಯಲ್ ಜೀವನದಿಂದ ತುಂಬಾನೆ ದೂರ ಉಳಿದಿರುವ ಇಮ್ರಾನ್ ಹಶ್ಮಿ ಕುಟುಂಬ ಜೀವನವನ್ನು ನಿಜವಾಗಿಯೂ ಎಂಜಾಯ್ ಮಾಡ್ತಿದ್ದಾರೆ. ಮದುವೆಯಾಗಿ ಡೀವೋರ್ಸ್ ತೆಗೆದುಕೊಳ್ಳುವವರ ಮಧ್ಯೆ, ತಲಾಖ್ ಎಂದು ಬೇರೆ ಆಗುವವರ ಮಧ್ಯೆ ಇಮ್ರಾನ್ ಹಶ್ಮಿ ಪ್ರೀತಿಸಿದವಳನ್ನೆ ಮದುವೆಯಾಗಿ ಕಳೆದ 18 ವರ್ಷಗಳಿಂದ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈವಾಗ ಹೇಳಿ ಇಮ್ರಾನ್ ಹಶ್ಮಿ ನಿಜವಾದ ಜೆಂಟಲ್’ಮ್ಯಾನ್ (gentleman) ಹೌದಾ ಅಲ್ವಾ? 

Latest Videos

click me!