ದಪ್ಪ ಎಂದು ಚೈಯ್ಯಾ ಚೈಯ್ಯಾ ಡ್ಯಾನ್ಸ್ ನೀಡಲಿಲ್ಲ: ಶಿಲ್ಪಾ ಶಿರೋಡ್ಕರ್‌ ಬೇಸರ

Published : Dec 06, 2022, 05:16 PM IST

ಇತ್ತೀಚೆಗೆ 'ಮೂವಿಂಗ್ ಇನ್ ವಿತ್ ಮಲೈಕಾ' ಕಾರ್ಯಕ್ರಮದಲ್ಲಿ ಫರಾ ಖಾನ್ (Farha Khan) ಅವರು ಮಲೈಕಾ ಅರೋರಾ (Malaika Arora) ಅನೇಕ ನಟಿಯರಿಂದ ತಿರಸ್ಕರಿಸಲ್ಪಟ್ಟ ನಂತರ 'ಚೈಯಾ ಚೈಯಾ' (Chhaiya Chhaiya) ಹಾಡನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದರು. ಫರಾ ಖಾನ್ ಚೈಯ್ಯಾ ಚೈಯ್ಯಾ ಹಾಡಿಗೆ  ಶಿಲ್ಪಾ ಶಿರೋಡ್ಕರ್ (Shilpa Shirodkar) ಸೇರಿ 2-3 ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು ಎಂಬ ಗುಟ್ಟನ್ನು ರಟ್ಟು ಮಾಡಿದ್ದರು. ಆದರೆ ಈಗ  ಶಿಲ್ಪಾ ಶಿರೋಡ್ಕರ್ ಬೇರೆ ರೀತಿಯೇ ಹೇಳಿಕೊಂಡಿದ್ದಾರೆ. ಹಾಡು ತನಗೆ ಸಿಗದ ಬಗ್ಗೆ  ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅಷ್ಷಕ್ಕೂ ನಟಿ ಹೇಳಿದ್ದೇನು ಗೊತ್ತಾ? 

PREV
18
ದಪ್ಪ ಎಂದು ಚೈಯ್ಯಾ ಚೈಯ್ಯಾ ಡ್ಯಾನ್ಸ್ ನೀಡಲಿಲ್ಲ: ಶಿಲ್ಪಾ ಶಿರೋಡ್ಕರ್‌ ಬೇಸರ

80 ಮತ್ತು 90 ರ ದಶಕದಲ್ಲಿ 'ಕಿಶನ್ ಕನ್ಹಯ್ಯಾ', 'ಖುದಾ ಗವಾ' ಮತ್ತು 'ಗೋಪಿ ಕಿಶನ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಶಿಲ್ಪಾ ಶಿರೋಡ್ಕರ್ ಅವರು 'ದಿಲ್ ಸೇ' ಚಿತ್ರದ ಜನಪ್ರಿಯ ಐಟಂ ನಂಬರ್ ಚೈಯ್ಯಾ ಚೈಯ್ಯಾದಲ್ಲಿ ಅವಕಾಶ ಕಳೆದುಕೊಂಡ ಬಗ್ಗೆ ದುಃಖ ತೋಡಿಕೊಂಡಿದ್ದಾರೆ.

28

ಅವರು ದಪ್ಪಗಿದ್ದಾಳೆಂದು ಕಮಂಟ್ ಮಾಡಿ, ಈ ಅವಕಾಶ ನೀಡದೇ ವಂಚಿಸಿದರಂತೆ. ಆವರಿಗೆ ಚೈಯಾ ಚೈಯಾ ಹಾಡು ಸಿಗಲಿಲ್ಲ ಎಂದು ನಟಿ ಹೇಳದಿದ್ದಾರೆ.

38

ಇ-ಟೈಮ್ಸ್ ಜೊತೆ ಮಾತನಾಡಿದ ಶಿಲ್ಪಾ,'ನನ್ನನ್ನು ಚೈಯಾ ಚೈಯಾಗೆ ಪರಿಗಣಿಸಲಾಗಿತ್ತು. ಆದರೆ ವರದಿ ಪ್ರಕಾರ ನಾನು ತುಂಬಾ ದಪ್ಪಗಿದ್ದೇನೆ ಎಂದೇ ಹೇಳಲಾಗುತ್ತಿತ್ತು. ಆದ್ದರಿಂದ ಅವರು ಅದನ್ನು ಮಲೈಕಾ ಅರೋರಾಗೆ ನೀಡಿದರು ಎಂದು ಹೇಳಿದ್ದಾರೆ. 

48

ಈ ಹಾಡು ಮತ್ತು ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಶಿಲ್ಪಾ ಇನ್ನೂ ದುಃಖಿತರಾಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

58

ಈ ಸಮಯದಲ್ಲಿ ಶಿಲ್ಪಾ ಅವರು ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಂಡಿರುವುದು ತನಗೆ ಹೆಚ್ಚು ದುಃಖ ತಂದಿದೆ. ಆದರೆ ಮತ್ತೊಂದು ಚಿತ್ರವು ತನಗೆ ಭರವಸೆಯ ಕಿರಣವಾಗಿ ಬಂದಿತು ಎಂದು ಹೇಳಿದರು.

68

ನಿಸ್ಸಂಶಯವಾಗಿ ನನಗೆ ದುಃಖವಾಯಿತು, ಆದರೆ ನಾನು 'ಗಜಗಾಮಿನಿ' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗಿನ ಒಂದು ದೃಶ್ಯವನ್ನು ಪ್ರದರ್ಶಿಸುವ ಭಾಗ್ಯ ಸಿಕ್ಕಿತು. ಹಾಗಾಗಿ ನನ್ನ ಕನಸು ನನಸಾಯಿತು ಎಂದು ಶಿಲ್ಪಾ ಶಿರೋಡ್ಕರ್‌ ಹೇಳಿದ್ದಾರೆ. 
 

78

ಗಜಗಾಮಿನಿ ಎಂ.ಎಫ್. ಈ ಚಿತ್ರವನ್ನು ಹುಸೇನ್ ನಿರ್ದೇಶಿಸಿದ್ದು, ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಶಾರುಖ್ ಖಾನ್ ಮತ್ತು ನಾಸಿರುದ್ದೀನ್ ಶಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

88

ಇತ್ತೀಚೆಗೆ, ಮಲೈಕಾ ಅರೋರಾ ಅವರ 'ಮೂವಿಂಗ್ ಇನ್ ವಿತ್ ಮಲೈಕಾ' ಕಾರ್ಯಕ್ರಮದಲ್ಲಿ  ಫರಾ ಖಾನ್ ಚೈಯ್ಯಾ ಚೈಯ್ಯಾ ಹಾಡಿಗೆ  ಶಿಲ್ಪಾ ಶಿರೋಡ್ಕರ್ ಸೇರಿದಂತೆ 2-3 ನಟಿಯರನ್ನು ಸಂಪರ್ಕಿಸಲಾಗಿದೆ ಎಂದು ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು  ಎಂದಿದ್ದರು.ಇದಾದ ನಂತರ ಮೇಕಪ್ ಕಲಾವಿದರು ಮಲೈಕಾ ಅವರ ಹೆಸರನ್ನು ಸೂಚಿಸಿದರು ಮತ್ತು ಅವರು ಉತ್ತಮ ನೃತ್ಯಗಾರ್ತಿ ಎಂದು ಫರಾಗೆ ಮಾಹಿತಿ ಸಿಕ್ಕಿತ್ತಂತೆ. 

Read more Photos on
click me!

Recommended Stories