ಪಾಕ್‌ನಲ್ಲಿ ಬ್ಯಾನ್‌ ಆದ ಬಾಲಿವುಡ್‌ ಖಾನ್‌ಗಳ ಸಿನಿಮಾ, ಏನಿರಬಹುದು ರೀಸನ್ಸ್?

First Published | Dec 6, 2022, 4:58 PM IST

ಅಕ್ಷಯ್ ಕುಮಾರ್ (Akshay Kumar) ಅಭಿನಯದ 'ಬೆಲ್ ಬಾಟಮ್' ಚಿತ್ರ ಪಾಕಿಸ್ತಾನ ವಿರೋಧಿ ವಿಷಯಗಳನ್ನು ತೋರಿಸುತ್ತಿದೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ, ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಅಕ್ಷಯ್ ಆಗಮಿಸಿದಾಗ, ಸಂವಾದದ ಸಮಯದಲ್ಲಿ, ಒಬ್ಬ ವ್ಯಕ್ತಿ ತನ್ನನ್ನು ಪಾಕಿಸ್ತಾನಿ ಎಂದು ಪರಿಚಯಿಸಿಕೊಂದು, ತಮ್ಮ ಚಿತ್ರದ ಕೆಲವು ವಿಷಯಗಳು ಪಾಕಿಸ್ತಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿದ್ದಾನೆ. ಆದರೆ, ಅಕ್ಷಯ್ ಇದು ಚಲನಚಿತ್ರವಾಗಿದ್ದು ಹಾಗೇ ನೋಡಬೇಕು ಎಂದು ಹೇಳಿ ಮುಗಿಸಿದರು. ಅಂದಹಾಗೆ, ಭಾರತೀಯ ಚಲನಚಿತ್ರಗಳು ಯಾವಾಗಲೂ ಪಾಕಿಸ್ತಾನದಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ. ಅಲ್ಲಿ ಬಿಡುಗಡೆಯಾಗದ ಹಲವು  ಚಿತ್ರಗಳಿವೆ. ವಿಶೇಷವೆಂದರೆ ಇವುಗಳಲ್ಲಿ ಕೆಲವು ಸಿನಿಮಾಗಳಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ ಒಂದು ಪದವೂ ಇಲ್ಲ.  ಆದರೂ ಪಾಕಿಸ್ತಾನದಲ್ಲಿ ಬ್ಯಾನ್ ಆದ ಬಾಲಿವುಡ್ ಸಿನಿಮಾಗಳು ಯಾವುದು ಗೊತ್ತಾ?

ವಿದ್ಯಾ ಬಾಲನ್, ನಾಸಿರುದ್ದೀನ್ ಶಾ ಮತ್ತು ಇಮ್ರಾನ್ ಹಶ್ಮಿ ಅಭಿನಯದ 'ದಿ ಡರ್ಟಿ ಪಿಕ್ಚರ್' ಅನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. 2011ರಲ್ಲಿ ಬಂದ ಈ ಸಿನಿಮಾ ಬ್ಯಾನ್ ಆಗಲು ಚಿತ್ರದ ಬೋಲ್ಡ್ ಮತ್ತು ವಿವಾದಾತ್ಮಕ ವಿಷಯವೇ ಕಾರಣ. ಆದರೆ, ಭಾರತದಲ್ಲಿ ಬಿಡುಗಡೆಯಾದ ಒಂದು ವಾರದ ನಂತರ ಪಾಕಿಸ್ತಾನ ಈ ಸಿನಮಾಕ್ಕೆ ಅನುಮತಿ ನೀಡಿದೆ.

ಆಮೀರ್ ಖಾನ್ ನಿರ್ಮಾಣದ ಚಿತ್ರ 'ದೆಹಲಿ ಬೆಲ್ಲಿ'  ಪಾಕಿಸ್ತಾನದಲ್ಲಿ ಬಿಡುಗಡೆಗೆ ಅವಕಾಶ ನೀಡಲಿಲ್ಲ. ಚಿತ್ರದ ನಿಂದನೀಯ ಭಾಷೆ ಹಾಗೂ ಬೋಲ್ಡ್ ದೃಶ್ಯಗಳೇ ಇದಕ್ಕೆ ಕಾರಣ ಎನ್ನಲಾಗಿದೆ. 2013 ರ ಈ ಚಿತ್ರದಲ್ಲಿ ಇಮ್ರಾನ್ ಖಾನ್, ಕುನಾಲ್ ರಾಯ್ ಕಪೂರ್ ಮತ್ತು ವೀರ್ ದಾಸ್ ಪ್ರಮುಖ ಪಾತ್ರಗಳನ್ನು ಹೊಂದಿದ್ದರು.

Tap to resize

ಧನುಷ್ ಮತ್ತು ಸೋನಂ ಕಪೂರ್ ಅಭಿನಯದ 'ರಾಂಜನಾ' ಸಿನಿಮಾವನ್ನು ಪಾಕಿಸ್ತಾನ ನಿಷೇಧಿಸಿದೆ. 2013 ರಲ್ಲಿ ಬಿಡುಗಡೆಯಾದ ಈ ಚಿತ್ರವು ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗನನ್ನು ಪ್ರೀತಿಸುತ್ತಿರುವುದನ್ನು ತೋರಿಸಿದ್ದರಿಂದ  ನಿಷೇಧಿಸಲಾಯಿತು.

ಮಧುರ್ ಭಂಡಾರ್ಕರ್ ನಿರ್ದೇಶನದ 2015 ರ ಚಲನಚಿತ್ರ ಕ್ಯಾಲೆಂಡರ್ ಗರ್ಲ್ಸ್ ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿಲ್ಲ. ಪಾಕಿಸ್ತಾನಿ ಸೆನ್ಸಾರ್ ಮಂಡಳಿಯು ಚಿತ್ರದ ಸಂಭಾಷಣೆಗಳನ್ನು ಆಕ್ಷೇಪಾರ್ಹ ಎಂದು ಕರೆದಿದೆ.

2016 ರಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಶಾಹಿದ್ ಕಪೂರ್, ಆಲಿಯಾ ಭಟ್, ಕರೀನಾ ಕಪೂರ್ ಮತ್ತು ದಿಲ್ಜಿತ್ ದೋಸಾಂಜ್ ಅಭಿನಯದ ಉಡ್ತಾ ಪಂಜಾಬ್ ಚಲನಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಯಿತು. ಪಾಕಿಸ್ತಾನಿ ಸೆನ್ಸಾರ್ ಮಂಡಳಿಯು ಚಿತ್ರದ ಭಾಷೆಯನ್ನು ಆಕ್ಷೇಪಾರ್ಹ ಎಂದು ಕರೆದಿದೆ. ಆದಾಗ್ಯೂ, ನಂತರ ಚಿತ್ರವನ್ನು 100 ಕಟ್‌ಗಳೊಂದಿಗೆ ಬಿಡುಗಡೆ ಮಾಡಲು ಅನುಮತಿಸಲಾಯಿತು.

ರಣಬೀರ್ ಕಪೂರ್, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಮತ್ತು ಫವಾದ್ ಖಾನ್ ಅಭಿನಯದ 'ಏ ದಿಲ್ ಹೈ ಮುಷ್ಕಿಲ್' ಚಿತ್ರ ಬಿಡುಗಡೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿಲ್ಲ. 2016 ರಲ್ಲಿ ಬಂದ ಈ ಚತ್ರಕ್ಕೆ ನಿಷೇಧ ಹೇರಲು ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಕಾರಣವಾಗಿತ್ತು. ವಾಸ್ತವವಾಗಿ, ಉರಿ ದಾಳಿ ನಂತರ ಭಾರತ ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ಚಿತ್ರಗಳನ್ನು ನಿಷೇಧಿಸಿತ್ತು. ಆದಾಗ್ಯೂ, 2017 ರಲ್ಲಿ, ಪಾಕಿಸ್ತಾನ ನಿಷೇಧವನ್ನು ತೆಗೆದುಹಾಕಿತು ಮತ್ತು ನಂತರ 'ಏ ದಿಲ್ ಹೈ ಮುಷ್ಕಿಲ್' ಅಲ್ಲಿ ಬಿಡುಗಡೆಯಾಯಿತು.

ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದ ಅಜಯ್ ದೇವಗನ್ ಅಭಿನಯದ 'ಶಿವಾಯ್' ಚಿತ್ರದ ಮೇಲೂ  ಪರಿಣಾಮ ಬೀರಿತು. ಚಿತ್ರವು 2016 ರಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದಾಗ, ಅದನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಯಿತು. 

ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಟ್ 2017 ರಲ್ಲಿ ಈದ್ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಯಿತು. ಆದರೆ ಅದನ್ನು ಖರೀದಿಸಲು ಪಾಕಿಸ್ತಾನ ಆಸಕ್ತಿ ತೋರಲಿಲ್ಲ. ಸ್ಥಳೀಯ ಚಿತ್ರಗಳಿಗೆ ಥಿಯೇಟರ್‌ಗಳಲ್ಲಿ ಸ್ಥಾನ ನೀಡಬೇಕು ಎಂಬುದಷ್ಟೇ ಕಾರಣ. ಈದ್‌ನಲ್ಲಿ ಬಿಡುಗಡೆಯಾಗುವ ಸ್ಥಳೀಯ ಚಲನಚಿತ್ರಗಳ ವ್ಯಾಪಾರದ ಮೇಲೆ 'ಟ್ಯೂಬ್‌ಲೈಟ್' ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

2017 ರಲ್ಲಿ, ಆಮೀರ್ ಖಾನ್ ಅಭಿನಯದ 'ದಂಗಲ್' ವಿಶ್ವಾದ್ಯಂತ ಸುಮಾರು 1900 ಕೋಟಿ ರೂ ಕಲೆಕ್ಷನ್‌ ಮಾಡಿ ದಾಖಲೆ ನಿರ್ಮಿಸಿದೆ ಆದರೆ ಈ ಚಿತ್ರ ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿಲ್ಲ. ಏಕೆಂದರೆ ಪಾಕಿಸ್ತಾನಿ ಸೆನ್ಸಾರ್ ಮಂಡಳಿಯನಿಯಮಗಳನ್ನು ಸ್ವೀಕರಿಸಲು ನಿರಾಕರಿಸಿದರು. ವಾಸ್ತವವಾಗಿ, ಪಾಕಿಸ್ತಾನಿ ಸೆನ್ಸಾರ್ ಮಂಡಳಿಯು ಚಿತ್ರದಿಂದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ದೃಶ್ಯಗಳನ್ನು ತೆಗೆದುಹಾಕಲು ಬಯಸಿದೆ, ಅದು ತಯಾರಕರು ವಿರೋಧಿಸಿದರು. ಪರಿಣಾಮವಾಗಿ ಚಿತ್ರಕ್ಕೆ ನಿಷೇಧ ಹೇರಲಾಯಿತು.

ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. 2018 ರಲ್ಲಿ ಬಂದ ಈ ಚಿತ್ರಕ್ಕೆ ಪಾಕಿಸ್ತಾನಿ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರವನ್ನು ನಿರಾಕರಿಸಿದೆ, ಅಂತಹ ಚಿತ್ರವನ್ನು ಇಲ್ಲಿ ಬಿಡುಗಡೆ ಮಾಡಲು ನಾವು ಅನುಮತಿಸುವುದಿಲ್ಲ, ಅದರ ಶೀರ್ಷಿಕೆ, ಕಥೆ ಮತ್ತು ವಿಷಯವು ಸಮಾಜಕ್ಕೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು. ಅವರ ಪ್ರಕಾರ, ಇದು ಇಸ್ಲಾಮಿಕ್ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಇತಿಹಾಸಕ್ಕೆ ವಿರುದ್ಧವಾಗಿದೆ. ಸೆನ್ಸಾರ್ ಮಂಡಳಿಯು ಅದರ ಹಕ್ಕುಗಳನ್ನು ಖರೀದಿಸದಂತೆ ಪಾಕಿಸ್ತಾನಿ ವಿತರಕರನ್ನು ನಿರ್ಬಂಧಿಸಿದೆ.

ಅನುಷ್ಕಾ ಶರ್ಮಾ ಅಭಿನಯದ ಹಾರರ್ ಚಿತ್ರ 'ಪರಿ' 2018 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ ಪಾಕಿಸ್ತಾನ ಅದನ್ನು ನಿಷೇಧಿಸಿದೆ. ಚಿತ್ರದಲ್ಲಿ ಇಸ್ಲಾಂ ತತ್ವಗಳನ್ನು ಉಲ್ಲಂಘಿಸುವ ಬ್ಲ್ಯಾಕ್ ಮ್ಯಾಜಿಕ್ ತೋರಿಸಲಾಗಿದೆ ಎಂದು ಪಾಕಿಸ್ತಾನಿ ಸೆನ್ಸಾರ್ ಮಂಡಳಿ ಹೇಳಿದೆ. ಪಾಕಿಸ್ತಾನಿ ಪ್ರೇಕ್ಷಕರಿಗೆ ಈ ಚಿತ್ರ ಅನಗತ್ಯ ಎಂದು ಅವರು ಪರಿಗಣಿಸಿದ್ದಾರೆ.

2018 ರಲ್ಲಿ ತೆರೆಗೆ ಬಂದ ಕರೀನಾ ಕಪೂರ್ ಮತ್ತು ಸೋನಂ ಕಪೂರ್ ಅಭಿನಯದ ವೀರೆ ದಿ ವೆಡ್ಡಿಂಗ್ ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿಲ್ಲ. ಪಾಕಿಸ್ತಾನಿ ಸೆನ್ಸಾರ್ ಮಂಡಳಿಯ ಪ್ರಕಾರ, ಈ ಚಿತ್ರದಲ್ಲಿ ಮಹಿಳಾ ನಟರು ಅಶ್ಲೀಲತೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಅಶ್ಲೀಲ ಸಂಭಾಷಣೆಗಳನ್ನು ಸಹ ಮಾತನಾಡಿದ್ದಾರೆ ಎಂದು ಅರೋಪಿಸಿತು

ಸಲ್ಮಾನ್ ಖಾನ್ ಅಭಿನಯದ 'ರೇಸ್ 3' 2018 ರಲ್ಲಿ ಈದ್ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆದರೆ ಪಾಕಿಸ್ತಾನ ಅದನ್ನು ಬಿಡುಗಡೆ ಮಾಡಲಿಲ್ಲ. ಒಂದೇ ಕಾರಣಕ್ಕೆ ಈದ್ ನಲ್ಲಿ ಪಾಕಿಸ್ತಾನಿ ಚಿತ್ರಗಳಿಗೆ ಸ್ಥಾನ ಕೊಡಲು ಅವರು ಬಯಸಿದ್ದರು ಮತ್ತು ಯಾವುದೇ ಬಾಲಿವುಡ್ ಚಿತ್ರದೊಂದಿಗೆ  ಸ್ಪರ್ಧಿಸಲು ಬಯಸಲಿಲ್ಲ.

Latest Videos

click me!