ಕೆಟ್ಟ ಮೇಲೆ ಬುದ್ಧಿ ಬಂತು! ಎದೆಯ 'ಪ್ಲಾಸ್ಟಿಕ್​ ಭಾರ' ತೆಗೆಸಿ ಯುವತಿಯರಿಗೆ ನಟಿ ಶೆರ್ಲಿನ್​ ಚೋಪ್ರಾ ಬುದ್ಧಿಮಾತು

Published : Nov 16, 2025, 12:36 PM IST

ಪ್ಲಾಸ್ಟಿಕ್ ಸರ್ಜರಿಯಿಂದ ಖ್ಯಾತಿ ಗಳಿಸಿದ್ದ ನಟಿ ಶೆರ್ಲಿನ್ ಚೋಪ್ರಾ, ಆರೋಗ್ಯ સમસ્યાಗಳಿಂದಾಗಿ ತಮ್ಮ ಸ್ತನ ಇಂಪ್ಲಾಂಟ್‌ಗಳನ್ನು ತೆಗೆದುಹಾಕಿದ್ದಾರೆ. ನಿರಂತರ ನೋವಿನಿಂದ ಬಳಲುತ್ತಿದ್ದ ಅವರು, ತಮ್ಮ ಅನುಭವವನ್ನು ಹಂಚಿಕೊಂಡು ಇಂತಹ ತಪ್ಪುಗಳನ್ನು ಮಾಡದಂತೆ ಯುವತಿಯರಿಗೆ ಬುದ್ಧಿಮಾತು ಹೇಳಿದ್ದಾರೆ.

PREV
16
ಪ್ಲಾಸ್ಟಿಕ್​ ರಾಣಿ

ನಟಿ ಮತ್ತು ರೂಪದರ್ಶಿ ಶೆರ್ಲಿನ್ ಚೋಪ್ರಾ ಎಂದರೆ ಎಲ್ಲರ ಕಣ್ಣೆದುರಿಗೆ ಬರುತ್ತಿದ್ದುದು ಪ್ಲಾಸ್ಟಿಕ್​ ಸರ್ಜರಿಯೇ. ಅಸಹ್ಯ ಎನ್ನುವಂತೆ ಎದೆಯ ಮೇಲೆ ಸಿಲಿಕಾನ್​ ಸರ್ಜರಿ ಮಾಡಿಸಿಕೊಂಡು ಎದೆಯ ಭಾರ ಹೆಚ್ಚಿಸಿಕೊಂಡು ಅದರಿಂದಲೇ (ಕು)ಖ್ಯಾತಿ ಗಳಿಸಿದ್ದ ನಟಿ ಶೆರ್ಲಿನ್​ ಚೋಪ್ರಾಗೆ ಈಗ ಬುದ್ಧಿ ಬಂದಿಂತಿದೆ!

26
ಆರೋಗ್ಯದ ಮೇಲೆ ಪ್ರಭಾವ

ಸ್ತ*ನಗಳ ಗಾತ್ರ ಹೆಚ್ಚುವಂತೆ ಕಾಣಿಸುವ ಸಲುವಾಗಿ, ನಟಿ ಎರಡು ಕೆಜಿಯಷ್ಟು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದರು. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ವರ್ಷದವರೆಗೆ ದೈಹಿಕವಾಗಿ ಸಮಸ್ಯೆ ತಲೆದೋರಿದ್ದರಿಂದ ಸ್ತ*ನ ಇಂಪ್ಲಾಂಟ್‌ಗಳನ್ನು ತೆಗೆದುಹಾಕಿದ್ದಾರೆ ನಟಿ.

36
ಬುದ್ಧಿಮಾತು

ಅದನ್ನು ಕೈಯಲ್ಲಿ ಹಿಡಿದುಕೊಂಡು ಈಗ ಯುವತಿಯರಿಗೆ ಆರೋಗ್ಯದ ಬುದ್ಧಿಮಾತು ಹೇಳಿದ್ದಾರೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿರೋ ನಟಿ ಶೆರ್ಲಿನ್, ಶಸ್ತ್ರಚಿಕಿತ್ಸೆಯು ನನ್ನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತ್ತು. ನಿರಂತರ ನೋವಿನಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

46
ಸಿಲಿಕಾನ್​ ಸ್ತ*ನ

ಶೆರ್ಲಿನ್ ಚೋಪ್ರಾ ಅವರು ತಮ್ಮ ಸಿಲಿಕಾನ್​ ಸ್ತ*ನಗಳನ್ನು ಸಹ ತೋರಿಸಿದ್ದಾರೆ. ಇವುಗಳನ್ನು ಅಳವಡಿಸಲಾಗಿತ್ತು ಮತ್ತು ಈಗ ಶಸ್ತ್ರಚಿಕಿತ್ಸೆಯ ನಂತರ ತೆಗೆದುಹಾಕಲಾಗಿದೆ. 825 ಗ್ರಾಂ ತೂಕದ ನನ್ನ ಸ್ತ*ನ ಇಂಪ್ಲಾಂಟ್‌ಗಳನ್ನು ತೆಗೆದುಹಾಕಿದ ನಂತರ ಹೆಚ್ಚು ಹಗುರವಾಗಿದ್ದೇನೆ ಎಂದಿದ್ದಾರೆ.

56
ಜನರಲ್ಲಿ ಮನವಿ

ತಾವು ಮಾಡಿದ ಅದೇ ತಪ್ಪನ್ನು ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ ನಟಿ. ಅದು ಎಷ್ಟು ನೋವಿನಿಂದ ಕೂಡಿದೆ ಎಂಬುದನ್ನು ಅವರು ವಿವರಿಸಿದ್ದಾರೆ. "ಅನಗತ್ಯ ಹೊರೆಯೊಂದಿಗೆ ಜೀವನವನ್ನು ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯವಿದೆ. ನನ್ನ ಸ್ತ*ನ ಇಂಪ್ಲಾಂಟ್ ತೆಗೆಯುವಿಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

66
ಈ ನಿರ್ಧಾರವೇಕೆ?

"ಕಳೆದ ಕೆಲವು ತಿಂಗಳುಗಳಿಂದ, ನನ್ನ ಬೆನ್ನು, ಎದೆ, ಕುತ್ತಿಗೆ ಮತ್ತು ಭುಜಗಳಲ್ಲಿ ನಿರಂತರ ನೋವು ಮತ್ತು ನನ್ನ ಎದೆಯ ಸುತ್ತ ನಿರಂತರ ಒತ್ತಡವನ್ನು ಅನುಭವಿಸುತ್ತಿದ್ದೇನೆ. ಹಲವಾರು ವೈದ್ಯರೊಂದಿಗೆ ಸಮಾಲೋಚಿಸಿದ ನಂತರ, ನನ್ನ ರೋಗಲಕ್ಷಣಗಳ ಕಾರಣವನ್ನು ನಾನು ಅಂತಿಮವಾಗಿ ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ ಈ ನಿರ್ಧಾರ ಎಂದಿದ್ದಾರೆ.

Read more Photos on
click me!

Recommended Stories