ಈ ಕಾರಣಕ್ಕೆ ಶಾರುಖ್ ಖಾನ್ ಅವರ ಮನ್ನತ್‌ನಲ್ಲಿ ದೀಪಾವಳಿ ಪಾರ್ಟಿ ಇಲ್ಲ

Published : Oct 20, 2022, 02:55 PM IST

ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ, ಶಾರುಖ್ ಖಾನ್ (Shahrukh Khan) ತಮ್ಮ ಬಂಗಲೆ ಮನ್ನತ್‌ನಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ ಈ ಬಾರಿ ಶಾರುಖ್‌ ಅವರು ದೀವಾಳಿ ಬ್ಯಾಷ್‌ ಆಯೋಜಿಸುತ್ತಿಲ್ಲ.  ಅದೇ ಸಮಯದಲ್ಲಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಸೋನಂ ಕಪೂರ್ (Sonam Kapoor) ಈ  ಬಾರಿ ದೀಪಾವಳಿ ಪಾರ್ಟಿ ಮಾಡುತ್ತಾರೆ ಎಂಬ ಸುದ್ದಿ ಇದೆ. ಅಷ್ಷಕ್ಕೂ   ಶಾರುಖ್ ಖಾನ್ ದೀಪಾವಳಿ ಪಾರ್ಟಿ ಯಾಕೆ ಕೊಡಲ್ಲ ಗೊತ್ತಾ?

PREV
19
ಈ ಕಾರಣಕ್ಕೆ  ಶಾರುಖ್ ಖಾನ್ ಅವರ ಮನ್ನತ್‌ನಲ್ಲಿ ದೀಪಾವಳಿ ಪಾರ್ಟಿ ಇಲ್ಲ

ಬಾಲಿವುಡ್‌ನ ಅನೇಕ ಹಿರಿಯ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಾರೆ. ನಿನ್ನೆ ರಾತ್ರಿ ಕೃತಿ ಸನೋನ್ ಮತ್ತು ನಿರ್ಮಾಪಕ ರಮೇಶ್ ತೌರಾನಿ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. 

29

ಈ ಮಧ್ಯೆ, ಈ ವರ್ಷ ಶಾರುಖ್ ಖಾನ್ ತಮ್ಮ ಬಂಗಲೆ ಮನ್ನತ್‌ನಲ್ಲಿ ದೀಪಾವಳಿ ಪಾರ್ಟಿ ನೀಡುತ್ತಿಲ್ಲ ಎಂಬ ಸುದ್ದಿಯೊಂದು ಹೊರಬಿದ್ದಿದೆ.ಅದೇ ಸಮಯದಲ್ಲಿ ಸೋನಂ ಕಪೂರ್ ಮತ್ತು  ಶಿಲ್ಪಾ ಶೆಟ್ಟಿ ಈ ಸಂದರ್ಭದಲ್ಲಿ ಗ್ರ್ಯಾಂಡ್ ಪಾರ್ಟಿ ಆಯೋಜಿಸಲು ಯೋಜಿಸಿದ್ದಾರೆ ಎಂಬ ಸುದ್ದಿಯೂ ಇದೆ.


 

39

ದೀಪಾವಳಿ ಸಂದರ್ಭದಲ್ಲಿ ಶಾರುಖ್ ಖಾನ್ ಮನೆಯಲ್ಲಿ  ನಡೆಯುವ ಪಾರ್ಟಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅವರು ತಮ್ಮ ಬಂಗಲೆ ಮನ್ನತ್‌ನಲ್ಲಿ ಗ್ರ್ಯಾಂಡ್ ಬ್ಯಾಷ್ ಆಯೋಜಿಸುತ್ತಾರೆ ಆದರೆ ಈ ಬಾರಿ ಅದು ಆಗುವುದಿಲ್ಲ.

49

ವರದಿಗಳ ಪ್ರಕಾರ ಈ ವರ್ಷ ಶಾರುಖ್ ತಮ್ಮ ಮುಂಬರುವ ಚಿತ್ರಗಳಲ್ಲಿ ತುಂಬಾ ನಿರತರಾಗಿದ್ದಾರೆ ಮತ್ತು ಒಂದರ ನಂತರ ಒಂದರಂತೆ ಚಿತ್ರಗಳ ಚಿತ್ರೀಕರಣದಲ್ಲಿದ್ದಾರೆ.

59

ಪ್ರಸ್ತುತ, ಅವರು ತಮ್ಮ ಡುಂಕಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಮತ್ತು ಅವರ ಟೈಟ್ ಶೆಡ್ಯೂಲ್‌ನಿಂದಾಗಿ ಅವರಿಗೆ ಸದ್ಯಕ್ಕೆ ಸಮಯವಿಲ್ಲ ಮತ್ತು ಆದ್ದರಿಂದ ಅವರು ಈ ಬಾರಿ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

69

ಇತ್ತೀಚೆಗೆ ಅವರು ತಮ್ಮ ಜವಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸೌತ್ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಅವರು ನಯನತಾರಾ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಅವರು ದೀಪಿಕಾ ಪಡುಕೋಣೆ ಎದುರು ಪಠಾಣ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ

79

ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷ ಶಿಲ್ಪಾ ಶೆಟ್ಟಿ ತಮ್ಮ ಮನೆಯಲ್ಲಿ ಪಾರ್ಟಿ ಯೋಜಿಸುತ್ತಿದ್ದಾರೆ. ಈ ದೀಪಾವಳಿ ಪಾರ್ಟಿ ಅಕ್ಟೋಬರ್ 23 ರಂದು ನಡೆಯಲಿದೆ ಎಂದು ವರದಿಯಾಗಿದೆ. 

89
sonam kapoor

ಇತ್ತೀಚಿಗೆ ಸೋನಮ್ ಕಪೂರ್ ಮಗನಿಗೆ ಜನ್ಮ ನೀಡಿದ್ದು ಪ್ರಸ್ತುತ  ಅವರು ಮುಂಬೈನಲ್ಲಿದ್ದಾರೆ.  ಅದೇ ಸಮಯದಲ್ಲಿ ಸೋನಂ ಕೂಡ ಈ ವರ್ಷ ದೀಪಾವಳಿ ಪಾರ್ಟಿ ಮಾಡುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. 

99
sonam kapoor

ಪ್ರತಿ ವರ್ಷ ಅನಿಲ್ ಕಪೂರ್ ಅವರ ಮನೆಯಲ್ಲಿ, ಅವರ ಮೂವರು ಮಕ್ಕಳಾದ ಸೋನಮ್, ರಿಯಾ ಮತ್ತು ಹರ್ಷವರ್ಧನ್ ದೀಪಾವಳಿ ಪಾರ್ಟಿಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸೋನಂ ಅವರ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿ ನಡೆಯಲಿದೆ. ಅಕ್ಟೋಬರ್ 24 ರಂದು ಈ ಪಾರ್ಟಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Read more Photos on
click me!

Recommended Stories