Madhuban: ಕನಿಕಾ ಕಪೂರ್ ಡ್ಯಾನ್ಸ್ ಟ್ರ್ಯಾಕ್‌ನಲ್ಲಿ ಮಿಂಚಿದ ಸನ್ನಿ ಲಿಯೋನ್ !

Published : Dec 23, 2021, 07:15 PM ISTUpdated : Dec 23, 2021, 07:24 PM IST

ಬೇಬಿ ಡಾಲ್, ದೇಸಿ ಲುಕ್, ಹಲೋ ಜಿ ಮತ್ತು ಇತರ ಸೂಪರ್‌ ಹಿಟ್‌ ಹಾಡುಗಳ ನಂತರ, ಕನಿಕಾ ಕಪೂರ್ (Kanika kapoor) ಮಧುಬನ್ (Madhuban) ಶೀರ್ಷಿಕೆಯ ಮತ್ತೊಂದು ಟ್ರ್ಯಾಕ್‌ನೊಂದಿಗೆ ಮರಳಿದ್ದಾರೆ. ಈ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಸನ್ನಿ ಲಿಯೋನ್ (Sunny Leone) ಕಾಣಿಸಿಕೊಂಡಿದ್ದಾರೆ.

PREV
16
Madhuban: ಕನಿಕಾ ಕಪೂರ್   ಡ್ಯಾನ್ಸ್ ಟ್ರ್ಯಾಕ್‌ನಲ್ಲಿ ಮಿಂಚಿದ ಸನ್ನಿ ಲಿಯೋನ್ !

ಮಧುಬನ್‌ನಲ್ಲಿ ಒಂದು ಹಾಡನ್ನು ಕನಿಕಾ ಕಪೂರ್ ಹಾಡಿದ್ದರೆ ಮತ್ತು ಅದರ ಮ್ಯೂಸಿಕ್ ವಿಡಿಯೋದಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡರೆ, ಅದು ಹಿಟ್ ಆಗುವುದು ಖಚಿತ ಎಂದು ವರದಿಗಳು ಹೇಳಿವೆ.

26

ಗಾಯಕಿ ಕನಿಕಾ ಕಪೂರ್ ಮತ್ತು ನಟಿ ಸನ್ನಿ ಲಿಯೋನ್‌ ಜೋಡಿಯು ಬುಧವಾರ ತಮ್ಮ ಇತ್ತೀಚಿನ ಟ್ರ್ಯಾಕ್ 'ಮಧುಬನ್' ಅನ್ನು ಪ್ರಾರಂಭಿಸಿದರು, ಇದು ದುರದೃಷ್ಟವಶಾತ್ ನಿರೀಕ್ಷೆಗಳಿಗೆ ತಕ್ಕಂತೆ ಹಿಟ್‌ ಆಗಲು  ವಿಫಲವಾಗಿದೆ. ಈ ಹಾಡನ್ನು ಶರೀಬ್ ಮತ್ತು ತೋಶಿ ಸಂಯೋಜಿಸಿದ್ದಾರೆ.

36

'ನನ್ನ ಎಲ್ಲಾ ಹಾಡುಗಳನ್ನು ಪ್ರೇಕ್ಷಕರು ಇಷ್ಟಪಟ್ಟಿರುವುದು ನನ್ನ ಅದೃಷ್ಟ, ಅದರಲ್ಲಿ ನಾನು ನನ್ನ ನೃತ್ಯವನ್ನು ಸಹ ಪ್ರದರ್ಶಿಸಿದ್ದೇನೆ ಮತ್ತು ಇದು ಒಂದು ಲೆವೆಲ್‌ ಹೆಚ್ಚಿಗೆ. ಮಧುಬನ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಅಪಾರ ಪ್ರೀತಿಯನ್ನು ಪಡೆದಿದೆ. ಸ್ಟೈಲ್‌ನಲ್ಲಿ 2021 ಕ್ಕೆ ವಿದಾಯ ಹೇಳುವ ಮತ್ತು 2022 ಅನ್ನು ಅಬ್ಬರದಿಂದ ಸ್ವಾಗತಿಸುವ ಈ ಹಾಡಿನ ಭಾಗವಾವಾಗಿರುವುದು ಅದ್ಭುತವಾಗಿದೆ' ಎಂದು ಹಾಡಿನ ಕುರಿತು ಮಾತನಾಡುತ್ತಾ, ಸನ್ನಿ ಲಿಯೋನ್ ಹೇಳಿಕೆ ನೀಡಿದ್ದಾರೆ.

46

'ಸನ್ನಿ ಹಾಡನ್ನು ತುಂಬಾ ಸುಂದರವಾಗಿಸಿದ್ದಾರೆ. ಈ ಹಾಡನ್ನು ಹಾಡುವುದು ತುಂಬಾ ಖುಷಿಯಾಯಿತು. ಇದು ಹೆಚ್ಚಿನ ಎನರ್ಜಿ ಮತ್ತು ಸೂಪರ್ ಡ್ಯಾನ್ಸ್‌ ನಂಬರ್‌ ಹೊಂದಿದೆ. ಹಾಡಿಗೆ ಈಗಾಗಲೇ ಸಿಕ್ಕಿರುವ ಪ್ರತಿಕ್ರಿಯೆಯಿಂದ ನನಗೆ ತುಂಬಾ ಖುಷಿಯಾಗಿದೆ' ಎಂದು ಕನಿಕಾ ಕಪೂರ್ ಹೇಳಿದ್ದಾರೆ.

56

ಮಧುಬನ್ ತಯಾರಕರಾದ ಸರೆಗಮ ಮ್ಯೂಸಿಕ್ ಸ್ಪರ್ಧೆಯನ್ನು ಆಯೋಜಿಸಿದ್ದು, ಅಭಿಮಾನಿಗಳಿಗೆ ಸಂಗೀತ ವೀಡಿಯೊದ ಭಾಗವಾಗಲು ಅವಕಾಶವನ್ನು ನೀಡುತ್ತದೆ. ಸ್ಪರ್ಧೆಯ ವಿಜೇತ ಅರಿಂದಮ್ ಚಕ್ರವರ್ತಿಗೆ ಹಾಡುವ ಅವಕಾಶವನ್ನು  ಒದಗಿಸಿದರೆ, ಎರಡನೇ ರನ್ನರ್ ಅಪ್ ಶಿವಿಕಾ ಪ್ರತಾಪ್ ಸಿಂಗ್ ಮ್ಯೂಸಿಕ್ ವಿಡಿಯೋದಲ್ಲಿ ಸನ್ನಿ ಲಿಯೋನ್ ಜೊತೆ ಹೆಜ್ಜೆ ಹಾಕಿದರು.

66

'ಈ ಹಾಡು ಎಲ್ಲಾ ಚಾರ್ಟ್‌ಗಳಲ್ಲಿ ರೇಸ್‌  ಮಾಡುತ್ತದೆ ಎಂದು ಬಲವಾಗಿ ನಂಬುತ್ತಾರೆ' ಎಂದು ಸಂಯೋಜಕರಾದ ಶರೀಬ್ ಮತ್ತು ತೋಶಿ ಅವರು ಹೇಳಿದರು ಮತ್ತು 'ಹಾಡಿನಲ್ಲಿ ಹೆಚ್ಚಿನ ಎನರ್ಜಿ, ಫನ್‌ ಇದೆ ಮತ್ತು ಆಕರ್ಷಕವಾಗಿದೆ ಹಾಗೂ ಸನ್ನಿ ಹಾಡನ್ನು ತುಂಬಾ ಅದ್ಭುತವಾಗಿ ಕಾಣುವಂತೆ ಮಾಡಿದ್ದಾರೆ' ಎಂದು ಅವರು ಇನ್ನಷ್ಟು ಹೇಳಿದ್ದಾರೆ.

click me!

Recommended Stories