ಮಗಳ ಸೀರೆ ಲುಕ್‌ಗೆ ಶಾರುಖ್ ಖಾನ್ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ

First Published | Oct 23, 2022, 1:05 PM IST

ಸುಹಾನಾ ಖಾನ್ (Suhana Khan) ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಭೂಮಿ ಪೆಡ್ನೇಕರ್ ಅವರ ದೀಪಾವಳಿ ಪಾರ್ಟಿಗೆ ಸುಹಾನಾಅವರು ಈ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಪಾರ್ಟಿಗಾಗಿ  ಸುಹಾನಾ ಸುಂದರ ಮನೀಶ್ ಮಲ್ಹೋತ್ರಾ ವಿನ್ಯಾಸದ ಸೀರೆಯನ್ನು ಧರಿಸಿದ್ದರು. ನಂತರ ಶನಿವಾರ, ಸುಹಾನಾ ಅವರು ಮನೀಶ್ ಮಲ್ಹೋತ್ರಾ ಅವರನ್ನು ಟ್ಯಾಗ್ ಮಾಡಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಶೀರ್ಷಿಕೆಯಲ್ಲಿ ಹಳದಿ ಹೃದಯವನ್ನು ಹಂಚಿಕೊಂಡಿದ್ದಾರೆ. ಮಗಳ  ಸೀರೆ ಲುಕ್‌ಗೆ ಶಾರುಖ್ ಖಾನ್ (Shahrukh Khan) ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ

Shahrukh Khan commented on daughter Suhana saree have you worn it yourself

ಸುಹಾನಾ ಅವರ ಸೀರೆಯ ಲುಕ್‌ ಎಲ್ಲರಿಗೂ  ಆಶ್ಚರ್ಯವನ್ನುಂಟು ಮಾಡಿದೆ.ಮಗಳ ಪೋಟೋಗೆ ತಂದೆ ಶಾರುಖ್ ಖಾನ್ ಸಹ ಕಾಮೆಂಟ್‌ ಮಾಡಿದ್ದಾರೆ

Suhana Khan

'ಅವರು ಬೆಳೆಯುವ ವೇಗವು ಸಮಯದ ನಿಯಮಗಳನ್ನು ಧಿಕ್ಕರಿಸುತ್ತದೆ ... ತುಂಬಾ ಸೊಗಸಾಗಿ ಮತ್ತು ಆಕರ್ಷಕವಾಗಿದೆ (ನೀನೇ ಸೀರೆ ಉಟ್ಟಿದ್ದಾ? ),' ಎಂದು ತಮ್ಮ ಮಗಳ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ ಶಾರುಖ್ ಖಾನ್.

Tap to resize

suhana khan

ಇದಕ್ಕೆ ಸುಹಾನಾ ಖಾನ್ ಪ್ರತಿಕ್ರಿಯಿಸಿದ್ದಾರೆ. 'ಲವ್ ಯೂ,  ನೋ, ಗೌರಿ ಖಾನ್ ನನಗಾಗಿ ಮಾಡಿದ್ದಾರೆ' ಎಂದು ಸುಹಾನಾ ಸೀರೆ ಉಡಿಸಿದ್ದು ತಾಯಿ ಗೌರಿ ಎಂದು ತಂದೆಯ ಪ್ರತಿಕ್ರಿಯಿಸಿದ್ದಾರೆ. ಅದೇ ಸಮಯದಲ್ಲಿ  ಸುಹಾನಾ ಅವರ ತಾಯಿ ಗೌರಿ ಖಾನ್ ಕೂಡ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ 'Sarees are so timeless' ಎಂದು ಕಾಮೆಂಟ್‌ ಮಾಡಿದ್ದಾರೆ  
 

ಕಳೆದ ಎರಡು ದಿನಗಳಲ್ಲಿ, ಸುಹಾನಾ ಎರಡು ದೀಪಾವಳಿ ಪಾರ್ಟಿಗಳಿಗೆ ಹಾಜರಾಗಿದ್ದರು, ಮೊದಲನೆಯದು ಗುರುವಾರ ರಾತ್ರಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರದ್ದು, ಅಲ್ಲಿ ಅವರು ಕೂಡ ಸೀರೆಯನ್ನು ಧರಿಸಿದ್ದರು. ಶುಕ್ರವಾರ, ಸುಹಾನಾ ತನ್ನ ಸಹೋದರ ಆರ್ಯನ್ ಖಾನ್ ಜೊತೆಗೆ ಮುಂಬೈನಲ್ಲಿ  ಭೂಮಿ ಪೆಡ್ನೇಕರ್ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಶನಯಾ ಕಪೂರ್ ಮತ್ತು ಅನನ್ಯಾ ಪಾಂಡೆ ಕೂಡ ತಮ್ಮ ಫ್ರೆಂಡ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದರು. ಶನಯಾ ಕಪೂರ್ ಅವರು ಸುಹಾನಾ ಅವರ ಪೋಸ್ಟ್‌ನಲ್ಲಿ 'ನನ್ನ ಕಣ್ಣುಗಳನ್ನು ನಿಮ್ಮಿಂದ ತೆಗೆಯಲು ಸಾಧ್ಯವಿಲ್ಲ'ಎಂದು ಬರೆದಿದ್ದಾರೆ. You're just too good to be true ಎಂದು ಅನನ್ಯಾ ಪಾಂಡೆ ಕಾಮೆಂಟ್‌ ಮಾಡಿದ್ದಾರೆ.

Suhana Khan

ಭೂಮಿ ಪೆಡ್ನೇಕರ್ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಅವರು ಸುಹಾನಾ ಅವರ ಪೋಸ್ಟ್‌ಗೆ ' ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ' ಎಂದು ಪ್ರತಿಕ್ರಿಯಿಸಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ ದಿ ಆರ್ಚೀಸ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ, ಇದರಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಅವರ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರವನ್ನು ಮುಂದಿನ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Latest Videos

click me!