Bhumi Pednekar Diwali Party: ದೀಪಾವಳಿ ಪಾರ್ಟಿಯಲ್ಲಿ ಗಮನ ಸೆಳೆದ ಭೂಮಿ ಪೆಡ್ನೇಕರ್: ಲುಕ್‌ ವೈರಲ್‌

Published : Oct 22, 2022, 05:33 PM ISTUpdated : Oct 22, 2022, 05:46 PM IST

ಆಯುಷ್ಮಾನ್ ಖುರಾನಾ ಮತ್ತು ಕೃತಿ ಸನನ್ ತಮ್ಮ ಮನೆಗಳಲ್ಲಿ ಸ್ಟಾರ್-ಸ್ಟಡ್ ಪಾರ್ಟಿಗಳನ್ನು ಆಯೋಜಿಸಿದ ಕೆಲವು ದಿನಗಳ ನಂತರ, ಭೂಮಿ ಪೆಡ್ನೇಕರ್ (Bhumi Pednekar) ಅವರ ಮನೆಯಲ್ಲಿ ಶುಕ್ರವಾರದಂದು ದೀಪಾವಳಿ ಪೂರ್ವ ಪಾರ್ಟಿಯನ್ನು ಆಯೋಜಿಸಿದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭೂಮಿ ಅವರ  ಪಾರ್ಟಿಯಲ್ಲಿ ಭಾಗವಹಿಸಿದ್ದರು, ಇದರಲ್ಲಿ ಭೂಮಿ ತನ್ನ ಸಹೋದರಿಯೊಂದಿಗೆ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಈ ಪಾರ್ಟಿಯಲ್ಲಿ  ಹಿರಿಯ ಸೆಲೆಬ್ರಿಟಿಗಳ ಜೊತೆಗೆ ಸ್ಟಾರ್ ಕಿಡ್ಸ್ ಕೂಡ ಭಾಗಿಯಾಗಿದ್ದರು. ನ್ಯಾಸಾ ದೇವಗನ್‌ನಿಂದ ಹಿಡಿದು ಸಹೋದರರಾದ ಆರ್ಯನ್ ಖಾನ್ ಮತ್ತು ಸುಹಾನಾ ಖಾನ್‌ವರೆಗೆ ಎಲ್ಲರೂ ಪಾರ್ಟಿಯಲ್ಲಿ ಗುರುತಿಸಿಕೊಂಡರು. ಈ ಪಾರ್ಟಿಯ ಕೆಲವು ಅದ್ಭುತ ಫೋಟೋಗಳು ಇಲ್ಲಿವೆ.

PREV
18
Bhumi Pednekar Diwali Party: ದೀಪಾವಳಿ ಪಾರ್ಟಿಯಲ್ಲಿ ಗಮನ ಸೆಳೆದ ಭೂಮಿ ಪೆಡ್ನೇಕರ್: ಲುಕ್‌  ವೈರಲ್‌

ನಟಿ ಭೂಮಿ ಪೆಡ್ನೇಕರ್ ಬಹುವರ್ಣದ ಲೆಹೆಂಗಾವನ್ನು ಧರಿಸಿದ್ದರು, ಬಣ್ಣಬಣ್ಣದ ದುಪ್ಪಟ್ಟಾದ ರೀವಿಲಿಂಗ್‌ ಬ್ಲೌಸ್‌ ನ್ನು ಧರಿಸಿದ್ದರು. ಭೂಮಿ ದೀಪಾವಳಿ ಪಾರ್ಟಿಗಾಗಿ ರಾಜಸ್ಥಾನಿ ಸಾಂಪ್ರದಾಯಿಕ ಉಡುಪನ್ನು ಧರಿಸಿ ಮಿಂಚಿದರು.

28
Bhumi Pednekar Diwali Party

ಈ ವರ್ಷ ಭೂಮಿ ಪೆಡ್ನೇಕರ್ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಅವರ ಮೂರು ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೊಸ ವರ್ಷಕ್ಕೊಮ್ಮೆ ಭೂಮಿ ಶೂಟಿಂಗ್‌ಗೆ ವಿದೇಶಕ್ಕೆ ಹೋಗಬಹುದು
 

38
Bhumi Pednekar Diwali Party

ಭೂಮಿ ಪೆಡ್ನೇಕರ್ ದೀಪಾವಳಿ ಪಾರ್ಟಿಯಲ್ಲಿ  ಅವರ ಸಹೋದರಿ ಸಮೀಕ್ಷಾ ಪೆಡ್ನೇಕರ್ ಎಲ್ಲರ ಗಮನ ಸೆಳೆದರು. ಸಿಲ್ವರ್ ಕಲರ್ ಲೆಹೆಂಗಾದಲ್ಲಿ ತೆಳು ಸ್ಟ್ರಾಪ್‌ ಕುಪ್ಪಸದಲ್ಲಿ ತನ್ನ ಸೌಂದರ್ಯವನ್ನು ಮೆರೆದ ಸಮೀಕ್ಷಾ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡರು.
 

48
Bhumi Pednekar Diwali Party

ರಾಜ್‌ಕುಮಾರ್ ರಾವ್ ಭೂಮಿಯ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ ಇನ್ನೊಬ್ಬ ಬಾಲಿವುಡ್‌ ನಟ. ಈ ಸಮಯದಲ್ಲಿ  ಬಾಯ್ಲೆಟ್ ಮಿಕ್ಸ್ ಬ್ಲಿಂಗ್ ಕುರ್ತಾದಲ್ಲಿ ರಾಜ್‌ಕುಮಾರ್‌ ರಾವ್‌ ಪತ್ನಿ ಪತ್ರಲೇಖಾ ಅವರ ಜೊತೆ ಪೋಸ್ ನೀಡಿದ್ದು ಹೀಗೆ. 

58
Bhumi Pednekar Diwali Party

ಭೂಮಿ ಪೆಡ್ನೇಕರ್ ಅವರ ಪಾರ್ಟಿಯಲ್ಲಿ ಕಾಣಿಸಿಕೊಂಡ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಜೋಡಿ. ಈ ಪಾರ್ಟಿಗೆ  ಹೆಚ್ಚಿನ ಅತಿಥಿಗಳು ಸಾಂಪ್ರದಾಯಿಕ ಲುಕ್‌ನಲ್ಲಿ ಆಗಮಿಸಿದ್ದರು.

68

ಹೃತಿಕ್‌ ರೋಷನ್‌ ಎಕ್ಸ್‌ ವೈಫ್‌ ಸುಸ್ಸಾನೆ ಖಾನ್ ಕೂಡ ಭೂಮಿ ಪೆಡ್ನೇಕರ್ ಅವರ ಮನೆಗೆ ತಲುಪಿದರು. ಸುಸ್ಸಾನೆ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಇದಕ್ಕೂ ಮೊದಲು  ಟಿವಿ ತಾರೆ ಕರಿಷ್ಮಾ ತನ್ನಾರ ದೀಪಾವಳಿ ಪಾರ್ಟಿಯಲ್ಲಿ ಸಹ ಸುಸ್ಸಾನೆ ಖಾನ್ ಮತ್ತು ಅವರ ಗೆಳೆಯ ನಟ ಅರ್ಸ್ಲಾನ್ ಗೋನಿಯೊಂದಿಗೆ ಕಾಣಿಸಿಕೊಂಡರು.

78

ಈ ಬಾರಿ ಭೂಮಿ ಪೆಡ್ನೇಕರ್ ಕೂಡ ದೀಪಾವಳಿಗೂ ಮುನ್ನ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭೂಮಿ ಪಾರ್ಟಿಯಲ್ಲಿ ಭಾಗವಹಿಸಿದ್ದರು.

88

ಲೋ ಪ್ರೊಫೈಲ್ ಸ್ಟಾರ್ ಕೂಡ ಭೂಮಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ತಡರಾತ್ರಿಯವರೆಗೂ ಭೂಮಿ ಅವರ ಮನೆಯಲ್ಲಿ ಪಾರ್ಟಿ ನಡೆದಿತ್ತು ಮತ್ತು ಸೆಲೆಬ್ರಿಟಿಗಳು ಹುಲ್ಲುಹಾಸಿನ ಮೇಲೆ ಪಾಪರಾಜಿಗಳಿಗೆ ಪೋಸ್ ನೀಡಿರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ
 

Read more Photos on
click me!

Recommended Stories