ಹಿಟ್‌ ಮೂವಿಗೆ ಹಾತೊರೆಯುತ್ತಿದೆ ಬಾಲಿವುಡ್‌; ಇತಿಹಾಸ ಸೃಷ್ಟಿಸಿವೆ ಕನ್ನಡ ಚಿತ್ರಗಳು!

First Published | Oct 22, 2022, 4:14 PM IST

ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿವೆ. ಅದರಲ್ಲೂ ಕನ್ನಡ ಭಾಷೆಯ ಚಿತ್ರಗಳು ಕರ್ನಾಟಕದ ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಸೃಷ್ಟಿಸುತ್ತಿದೆಯಲ್ಲದೇ, ಪ್ಯಾನ್ ಇಂಡಿಯಾದಲ್ಲಿಯೂ ಸೂಪರ್ ಹಿಟ್ ಆಗುತ್ತಿವೆ. ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಅನ್ನು ಹೋಲಿಸಿದರೆ, 2022ರಲ್ಲಿ ಕನ್ನಡ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಯಾವ ಚಿತ್ರಕ್ಕಿಂತಲೂ ಕಡಿಮೆ ಇಲ್ಲವೆನ್ನುವಂತೆ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಮುಂಚೂಣಿಯಲ್ಲಿವೆ.

ಈ ವರ್ಷ ಬಾಲಿವುಡ್‌ ಎರಡೇ ಚಿತ್ರಗಳು  (ದಿ ಕಾಶ್ಮೀರ್ ಫೈಲ್ಸ್‌  ಮತ್ತು ಭೂಲ್ ಭುಲಯ್ಯ 2) ಸೂಪರ್‌ಹಿಟ್ ಆಗಿದ್ದವು. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ಚಿತ್ರಗಳ ಸಂಖ್ಯೆ ಹೆಚ್ಚು. 
 

ಪುನೀತ್ ರಾಜ್‌ಕುಮಾರ್ ಮತ್ತು ಪ್ರಿಯಾ ಆನಂದ್ ಅಭಿನಯದ 'ಜೇಮ್ಸ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚೇತನ್ ಕುಮಾರ್ ನಿರ್ದೇಶನದಲ್ಲಿ ಸುಮಾರು 55 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ವಿಶ್ವಾದ್ಯಂತ ಸುಮಾರು 94.2 ಕೋಟಿ ರೂ ಕಲೆಕ್ಷನ್‌ ಮಾಡಿದೆ.

Tap to resize

ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ 'ಕೆಜಿಎಫ್ ಚಾಪ್ಟರ್ 2' ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಚಿತ್ರ ಎಂದು ಸಾಬೀತಾಯಿತು. ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಚಿತ್ರ ವಿಶ್ವಾದ್ಯಂತ 1200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಕಿರಣರಾಜ್ ಕೆ. ನಿರ್ದೇಶನದಲ್ಲಿ ತಯಾರಾದ '777 ಚಾರ್ಲಿ' ಚಿತ್ರವು 102.75 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಆಗಿತ್ತು. ರಕ್ಷಿತ್ ಶೆಟ್ಟಿ ಮತ್ತು ಸಂಗೀತಾ ಶೃಂಗೇರಿ ಅಭಿನಯದ ಈ ಚಿತ್ರವನ್ನು ಸುಮಾರು 15 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗಿದೆ.

ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ವಿಶ್ವಾದ್ಯಂತ 38.5 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸೂಪರ್ ಹಿಟ್ ಆಗಿದೆ. 15 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಗಣೇಶ್, ಅನಂತ್ ನಾಗ್, ದಿಗಂತ್ ಮುಂತಾದ ತಾರೆಯರು ಪ್ರಮುಖ ಪಾತ್ರದಲ್ಲಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸದ್ಯ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಓಡುತ್ತಿದೆ. 16 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ವಿಶ್ವದಾದ್ಯಂತ 170 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ವಿಭಾಗದಲ್ಲಿ ಬಂದಿದೆ.

Latest Videos

click me!