ಬಾಹುಬಲಿ 2 ಅನ್ನೂ ಮೀರಿದ ಕಾಂತಾರ, 5ನೇ ವಾರಾಂತ್ಯದಲ್ಲಿ ರೆಕಾರ್ಡ್‌ ಗಳಿಕೆ!

First Published | Nov 1, 2022, 5:22 PM IST

ಕನ್ನಡದ 'ಕಾಂತಾರ' (Kantara) ಚಿತ್ರ ಗಳಿಕೆಯ ವಿಚಾರದಲ್ಲಿ ಎಲ್ಲಾ ರೆಕಾರ್ಡ್‌ಗಳನ್ನು ಮುರಿಯುತಿದೆ.ಈಗ ಈ ಚಿತ್ರವು ಐದನೇ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ, ಇದು 'ಬಾಹುಬಲಿ 2: ದಿ ಕನ್‌ಕ್ಲೂಷನ್' (Baahubali 2)ದಾಖಲೆಯನ್ನು ಮುರಿದಿದೆ. ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರ ಐದನೇ ವಾರಾಂತ್ಯದಲ್ಲಿ ಸುಮಾರು 29 ಕೋಟಿ ರೂ  ಗಳಿಸಿದೆ. ಪ್ರಭಾಸ್ ಅಭಿನಯದ 'ಬಾಹುಬಲಿ 2' ಸುಮಾರು 250 ಕೋಟಿ ರೂ.ಗೆ ನಿರ್ಮಾಣಗೊಂಡಿದ್ದರೆ, ಐದನೇ ವಾರದಲ್ಲಿ ಸುಮಾರು 24.50 ಕೋಟಿ ರೂ ಗಳಿಕೆ ಮಾಡಿತ್ತು. ಐದನೇ ವಾರಾಂತ್ಯದಲ್ಲಿ 'ಕಾಂತಾರ' ಗಳಿಸಿದಷ್ಟು ಸಾಧನೆ ಮಾಡಲು ಯಾವುದೇ ಭಾರತೀಯ ಚಿತ್ರಕ್ಕೆ ಸಾಧ್ಯವಾಗಿಲ್ಲ.

ಅಂದಹಾಗೆ ಚಿತ್ರದ ಐದನೇ ವಾರಾಂತ್ಯದ ಕಲೆಕ್ಷನ್ ದಿನದ ಸಂಗ್ರಹ ಹೀಗಿದೆ :-

5ನೇ ಶುಕ್ರವಾರ 5.65 ಕೋಟಿ ರೂ
5ನೇ ಶನಿವಾರ 10.55 ಕೋಟಿ ರೂ
5ನೇ ಭಾನುವಾರ 12.9 ಕೋಟಿ ರೂ
ಒಟ್ಟು ವಾರಾಂತ್ಯ 29.1 ಕೋಟಿ ರೂ 

ಐದನೇ ಸೋಮವಾರದಂದು ಚಿತ್ರದ ಕಲೆಕ್ಷನ್ ಕೂಡ ಭರ್ಜರಿಯಾಗಿದೆ. ಈ ಚಿತ್ರವು ಅಕ್ಟೋಬರ್ 31 ರಂದು ಮೊದಲ ದಿನದ ಸಂಗ್ರಹಣೆಗಿಂತ ಎರಡು ಪಟ್ಟು ಹೆಚ್ಚು ಗಳಿಸಿತು. ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನವೇ ಸುಮಾರು 1.95 ಕೋಟಿ ರೂಪಾಯಿ ಗಳಿಸಿದೆ. ಆದರೆ 32ನೇ ದಿನ ಅಂದರೆ 5ನೇ ಸೋಮವಾರದಂದು ಸುಮಾರು 4.50 ಕೋಟಿ ಕಲೆಕ್ಷನ್ ಆಗಿದೆ.

Tap to resize

ಐದನೇ ಸೋಮವಾರದಂದು 'ರಾಮ ಸೇತು' ಗಿಂತ ಹೆಚ್ಚು ಗಳಿಸುತ್ತಿದೆ ಕಲೆಕ್ಷನ್ ವಿಚಾರದಲ್ಲಿ ರಿಷಬ್ ಶೆಟ್ಟಿ ಕಾಂತಾರ ಮುಂದಿದೆ. ಅಕ್ಷಯ್ ಕುಮಾರ್ ಅಭಿನಯದ 'ರಾಮ್ ಸೇತು' ಮತ್ತು ಅಜಯ್ ದೇವಗನ್ ಅಭಿನಯದ 'ಥ್ಯಾಂಕ್ ಗಾಡ್' ಚಿತ್ರಗಳು 7 ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಈ ಎರಡೂ ಚಿತ್ರಗಳು ಸೋಮವಾರದ ಪರೀಕ್ಷೆಯಲ್ಲಿ ಹೀನಾಯವಾಗಿ ಸೋತಿವೆ

ಅಭಿಷೇಕ್ ಶರ್ಮಾ ನಿರ್ದೇಶನದ ‘ರಾಮಸೇತು’ ಸೋಮವಾರದಂದು ಸುಮಾರು 2.70 ಕೋಟಿ ಕಲೆಕ್ಷನ್ ಮಾಡಿದ್ದರೆ, ಇಂದ್ರಕುಮಾರ್ ನಿರ್ದೇಶನದ ‘ಥ್ಯಾಂಕ್ ಗಾಡ್’ ಗಳಿಕೆ 1.65 ಕೋಟಿಗೆ ಇಳಿದಿದೆ .

'ಕಾಂತಾರ' ಸುಮಾರು 16 ಕೋಟಿ ರೂ.ಗೆ ನಿರ್ಮಾಣವಾಗಿದ್ದು, ಇದುವರೆಗೆ ವಿಶ್ವಾದ್ಯಂತ ಸುಮಾರು 293 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಅದು ಸುಮಾರು 277 ಕೋಟಿ ರೂಪಾಯಿಗಳು ಲಾಭ ಮಾಡಿದೆ. ಅಂದರೆ ಇದು ಸುಮಾರು 1731 ಪ್ರತಿಶತದಷ್ಟು ಲಾಭಗಳಿದೆ ಮತ್ತು ಬಹುಶಃ ಹೆಚ್ಚು ಲಾಭದಾಯಕ ಕನ್ನಡ ಚಿತ್ರ ಎಂದು ಸಾಬೀತಾಗಿದೆ. 
 

ಲಾಭದ ವಿಚಾರದಲ್ಲಿ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಚಿತ್ರವನ್ನು ಕಾಂತಾರ ಸೋಲಿಸಿದೆ. ಸುಮಾರು 100 ಕೋಟಿ ರೂಪಾಯಿಗಳಲ್ಲಿ ತಯಾರಾದ 'ಕೆಜಿಎಫ್ 2' ವಿಶ್ವಾದ್ಯಂತ ಸುಮಾರು 1250 ಕೋಟಿ ರೂಪಾಯಿ ಗಳಿಸಿದೆ. ಅದರ ಪ್ರಕಾರ, ಅದರ ಲಾಭವು 1150 ಕೋಟಿ ರೂಪಾಯಿಗಳು ಅಥವಾ ಶೇಕಡಾ 1150 ರಷ್ಟಿದೆ.

Latest Videos

click me!