Shah Rukh Khan Back On Set: ಮಗನ ಡ್ರಗ್ಸ್ ಕೇಸ್ ನಂತರ ಮತ್ತೆ ಕೆಲಸ ಶುರು ಮಾಡಿದ ಶಾರೂಖ್

Published : Dec 24, 2021, 06:36 PM ISTUpdated : Dec 24, 2021, 06:38 PM IST

ಪುತ್ರ ಆರ್ಯನ್ ಖಾನ್ (Aryan Khan) ಬಂಧನ ಮತ್ತು ಜಾಮೀನಿನ ನಂತರ ಶಾರುಖ್ ಖಾನ್ (Shah Rukh Khan) ಮೊದಲ ಬಾರಿಗೆ ಕೆಲಸಕ್ಕೆ ಮರಳಿದ್ದಾರೆ. ಶಾರುಖ್‌ ಅವರ  ಉದ್ದನೆಯ ಕೂದಲಿನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮುಂಬೈನಲ್ಲಿ ಜಾಹೀರಾತಿನ ಚಿತ್ರೀಕರಣಕ್ಕೆ ತೆರಳುತ್ತಿದ್ದಾಗ ಕಾಣಿಸಿಕೊಂಡರು. ಈ ಸಮಯದ ಶಾರುಖ್‌ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

PREV
18
Shah Rukh Khan Back On Set: ಮಗನ ಡ್ರಗ್ಸ್ ಕೇಸ್ ನಂತರ ಮತ್ತೆ ಕೆಲಸ ಶುರು ಮಾಡಿದ ಶಾರೂಖ್

ಬುಧವಾರ ಮುಂಬೈನಲ್ಲಿ ನಟ ಶಾರುಖ್ ಖಾನ್ ಅವರನ್ನು ಪಾಪರಾಜಿಗಳು ಗುರುತಿಸಿದ್ದಾರೆ. ಶಾರುಖ್‌  ತಿಂಗಳಗಳ ನಂತರ ಮತ್ತೆ ಕೆಲಸಕ್ಕೆ ಕಾಣಿಸಿಕೊಂಡರು. ಅವರ ಮಗ ಆರ್ಯನ್ ಖಾನ್ ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ ಶಾರುಖ್ ಕೆಲಸ ಮತ್ತು ಸಾರ್ವಜನಿಕ ಜೀವನದಿಂದ ಬ್ರೇಕ್‌  ತೆಗೆದುಕೊಂಡರು.

28

ಶಾರುಖ್ ಕಪ್ಪು ಟೀ ಶರ್ಟ್‌ನಲ್ಲಿ ತಮ್ಮ ಉದ್ದನೆಯ ಕೂದಲನ್ನು ಬನ್‌ನಲ್ಲಿ ಕಟ್ಟಿದ್ದರು. ಅವರು ಸನ್‌ಗ್ಲಾಸ್‌ಗಳನ್ನು ಧರಿಸಿದ್ದರು ಮತ್ತು ಅವರ ಫೋಟೋಗಳನ್ನು ಅವರ ಫ್ಯಾನ್‌ ಕ್ಲಬ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

38

ಶಾರುಖ್ ಕೊನೆಯದಾಗಿ ಅಕ್ಟೋಬರ್ 21 ರಂದು ಆರ್ಥರ್ ರೋಡ್ ಜೈಲಿನ ಹೊರಗೆ ಕಾಣಿಸಿಕೊಂಡರು, ಅಲ್ಲಿ ಅವರು ಮಗ ಆರ್ಯನ್‌  ಭೇಟಿ ಮಾಡಲು ಹೋಗಿದ್ದರು ಮತ್ತು ಆ ಸಮಯದಲ್ಲಿ ಒಳಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಲು ಕಾಯುತ್ತಿದ್ದ ಕೆಲವು ಜನರನ್ನು ಶಾರುಖ್‌ ಭೇಟಿಯಾಗಿದ್ದರು.


 

48

ಮುಂಬೈ ತೀರದಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆರ್ಯನ್‌ ಖಾನ್‌ನನ್ನು ಬಂಧಿಸಿತ್ತು. ಜಾಮೀನಿನ ಮೇಲೆ ಹೊರಬರುವ ಮೊದಲು ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 

58

ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ತನ್ನ ವಿವರವಾದ ಆದೇಶದಲ್ಲಿ, ಆರೋಪಿಗಳು ಅಪರಾಧ ಮಾಡಲು ಸಂಚು ರೂಪಿಸಿದ್ದಾರೆ ಎಂದು ತೋರಿಸಲು ಆರೋಪಿಗಳ ವಿರುದ್ಧ ಯಾವುದೇ ಸಕಾರಾತ್ಮಕ ಪುರಾವೆಗಳು ಪ್ರಾಥಮಿಕವಾಗಿ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ.

68

ಆರ್ಯನ್ ನಂತರ ತನ್ನ ವಾರಾದ ಹಾಜರಾತಿ ಆದೇಶದ ಸಡಿಲಿಕೆಗಾಗಿ ನ್ಯಾಯಾಲಯದ ಮೊರೆ ಹೋದರು ಮತ್ತು  ಬಾಂಬೆ ಹೈಕೋರ್ಟ್ ಆರ್ಯನ್‌ಗೆ ಪ್ರತಿ ವಾರ ಎನ್‌ಸಿಬಿ ಮುಂದೆ ಹಾಜಾರಾಗುವ ಬಗ್ಗೆ ವಿನಾಯಿತಿ ನೀಡಿತು.

78

ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಬಂಧನದ ನಂತರ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಶಾರುಖ್ ಖಾನ್  ಅವರು ಕೊನೆಯದಾಗಿ 2018 ರ ಸಿನಿಮಾ ಝೀರೋದಲ್ಲಿ ಕಾಣಿಸಿಕೊಂಡರು. ಅದು ಕೆಟ್ಟದಾಗಿ ಫ್ಲಾಪ್‌ ಆಗಿತ್ತು.

88

ಮುಂದಿನ ದಿನಗಳಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಪಠಾಣ್ ಸಿನಿಮಾದ ಶೂಟಿಂಗ್ ಅನ್ನು ಪುನರಾರಂಭಿಸಿದ್ದಾರೆ. ಶಾರುಖ್ ದಕ್ಷಿಣದ ನಿರ್ದೇಶಕ ಅಟ್ಲೀ ಅವರ ಲಯನ್ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. 

Read more Photos on
click me!

Recommended Stories