Atrangi Rey: ಸಿನಿಮಾ ಸಕ್ಸಸ್‌ಗಾಗಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಾರಾ ಅಲಿ ಖಾನ್ ಪ್ರಾರ್ಥನೆ!

First Published | Dec 24, 2021, 5:19 PM IST

ಬಾಲಿವುಡ್‌ ನಟಿ ಸಾರಾ ಅಲಿ ಖಾನ್ (sara Ali Khan) ಅವರ ಬಹು ನಿರೀಕ್ಷಿತ ಚಿತ್ರ ಅತ್ರಾಂಗಿ ರೇ (Atrangi Re) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ನಟಿ ರಿಂಕು ಎಂಬ ಬಿಹಾರಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ನಟಿ ತನ್ನ ಪ್ರಚಾರ ಕಾರ್ಯಗಳನ್ನು ಭರದಿಂದ ನಡೆಸುತ್ತಿದ್ದಾರೆ. 

ಇತ್ತೀಚೆಗೆ, ಸಾರಾ ತಮ್ಮ ಸಿನಿಮಾ ಅತ್ರಾಂಗಿ ರೇ  ಯಶಸ್ಸಿಗೆ ಆಶೀರ್ವಾದ ಪಡೆಯಲು ಸಾರಾ ಅಲಿ ಖಾನ್ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದರು. 

ನಟಿ ತಮ್ಮ ಭೇಟಿಯ ಸಮಯದ ಫೋಟೋವನ್ನು Instagram ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಆ ಸಮಯದಲ್ಲಿ , ಅವರು ಬಿಳಿ ಚಿಂಕಾರಿ ಸಲ್ವಾರ್ ಸೂಟ್ ಮತ್ತು ಸಂಸ್ಕೃತ ಶ್ಲೋಕಗಳನ್ನು ಬರೆದ ಕಪ್ಪು ಸ್ಕಾರ್ಫ್ ಅನ್ನು ಧರಿಸಿದ್ದರು. 

Tap to resize

ಇದಲ್ಲದೆ, ಸಾರಾ ಆಲಿ ಖಾನ್‌  'ರಿಂಕು' ಎಂದು ಬರೆದಿರುವ ಬಿಳಿ ಮಾಸ್ಕ್‌  ಧರಿಸಿದ್ದರು. ಅತ್ರಾಂಗಿ ರೇ ಸಿನಿಮಾದಲ್ಲಿ  ಸಾರಾ ರಿಂಕು ಎಂಬ ಬಿಹಾರಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಾರಾ ದೇವಸ್ಥಾನದ ಮುಂದೆ ಪ್ರಾರ್ಥನೆ ಮತ್ತು ಪೂಜೆ ಮಾಡುವುದನ್ನು ಸಹ ಕಾಣಬಹುದು. ಫೋಟೋಗಳಲ್ಲಿ, ಪವಿತ್ರ ಮಹಾಕಾಳೇಶ್ವರ ದೇವಾಲಯದ ಸುಂದರವಾದ ಹಿನ್ನೆಲೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಹಂಚಿಕೊಂಡಿರುವ ಫೋಟೋಗಳಿಗೆ ಸಾರಾ ಅಲಿ ಖಾನ್ ಅವರು 'ಜೈ ಮಹಾಕಾಲ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಮತ್ತು ಜೊತೆಗೆ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಿರುವ ಎಮೋಟಿಕಾನ್ ಶೀರ್ಷಿಕೆಯಲ್ಲಿ ಹಾಕಿದ್ದಾರೆ.

ಇದಲ್ಲದೆ, ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು 'ರಿಂಕು ಮತ್ತು ಸಾರಾ ನಿಮ್ಮೆಲ್ಲರ ಪ್ರೀತಿಗಾಗಿ ಪ್ರಾರ್ಥನೆ ಮಾಡುತ್ತಾಳೆ. ನಾಳೆ ಅತ್ರಾಂಗಿ ರೀ ಔಟ್!' ಎಂದು ಬರೆದಿದ್ದಾರೆ.

ಆನಂದ್ ಎಲ್. ರೈ ಅವರು ನಿರ್ದೇಶಿಸಿರುವ ಅತ್ರಾಂಗಿ ರೇ ಚಿತ್ರದಲ್ಲಿ ಸಾರಾ ಅಲಿ ಖಾನ್ ಮತ್ತು ಸೌತ್ ಸ್ಟಾರ್ ಧನುಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರವು ಡಿಸೆಂಬರ್ 24, 2021 ರಿಂದ Disney+Hotstar ನಲ್ಲಿ ಸ್ಟ್ರೀಮ್ ಆಗಲಿದೆ.

Latest Videos

click me!