ನಿಲ್ಲದ ಪಠಾಣ್‌ ಓಟ : ಅತಿ ವೇಗವಾಗಿ 400 ಕೋಟಿ ಕ್ಲಬ್‌ ಪ್ರವೇಶಿಸಿದ ಬಾಲಿವುಡ್‌ ಚಿತ್ರ

Published : Jan 29, 2023, 04:33 PM IST

ಶಾರುಖ್ ಖಾನ್ (Shah Rukh Khan)  ಅಭಿನಯದ ಪಠಾಣ್ (Pathaan)  ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅರ್ಭಟ ಮುಂದುವರಿಸಿದೆ.  ಚಿತ್ರವು ಬಿಡುಗಡೆಯಾದ 4 ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿಗೂ ಹೆಚ್ಚು ಗಳಿಸಿದೆ. ಸತಿ ಶೀಘ್ರದಲ್ಲಿ ವಿಶ್ವದಾದ್ಯಂತ ರೂ 400 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಬಾಲಿವುಡ್ ಚಲನಚಿತ್ರವಾಗಿದೆ.

PREV
18
 ನಿಲ್ಲದ  ಪಠಾಣ್‌ ಓಟ : ಅತಿ ವೇಗವಾಗಿ  400 ಕೋಟಿ ಕ್ಲಬ್‌ ಪ್ರವೇಶಿಸಿದ ಬಾಲಿವುಡ್‌ ಚಿತ್ರ

ಬಹಳ ದಿನಗಳಿಂದ ಹಿಂದಿ ಚಿತ್ರರಂಗ ಕಂಡಿರದ ಅಭಿಮಾನಿಗಳ ಕ್ರೇಜ್‌ ನಡುವೆ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಎಲ್ಲಾ ದಾಖಲೆಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

28

ನಾಲ್ಕು ವರ್ಷಗಳ ಸುದೀರ್ಘಕಾಯುವಿಕೆ ಅಂತಿಮವಾಗಿ ಕೊನೆಗೊಂಡಿತು. ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್  ಪಠಾಣ್‌ನಲ್ಲಿ ನಾಯಕನಾಗಿ ಪರದೆಯ ಮೇಲೆಪವರ್‌ಫುಲ್‌ ಕಮ್‌ಬ್ಯಾಕ್‌ ಮಾಡಿದ್ದಾರೆ.

38

ಮೊದಲ ದಿನ ಬೆಳಗಿನ ಜಾವದ ಶೋಗಳಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿದ್ದರು.  ದೊಡ್ಡ ಪೋಸ್ಟರ್‌ಗಳು ಮತ್ತು ಕೇಕ್‌ಗಳನ್ನು ಜೊತೆ  ಥಿಯೇಟರ್‌ಗಳ ಹೊರಗೆ ಪಟಾಕಿಗಳನ್ನು ಸಹ ಸಿಡಿಸಿದರು. ಇದರೊಂದಿಗೆ ಹೆಚ್ಚಿನ ಬೇಡಿಕೆಯಿಂದಾಗಿ ಪಠಾಣ್‌ಗಾಗಿ ಪ್ರದರ್ಶನಗಳು ಹೆಚ್ಚಾದವು.
 

48

ನಿರೀಕ್ಷೆಗಿಂತ ಮೀರಿ ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಬೆಂಕಿ ಹಚ್ಚಿದೆ. ಜನವರಿ 28 ರಂದು 4 ನೇ ದಿನದಂದು, ಪಠಾಣ್ ಪ್ರಪಂಚದಾದ್ಯಂತ 400 ಕೋಟಿ ಗಳಿಸಿದೆ.

58

ಪಠಾಣ್ ಚಲನಚಿತ್ರವು ಪ್ರತಿ ದಿನವೂ ಹೊಸ ದಾಖಲೆಗಳನ್ನು ಮಾಡಿದೆ ಮತ್ತು ಹಲವಾರು ಮೊದಲೇ ಅಸ್ತಿತ್ವದಲ್ಲಿರುವ ದಾಖಲೆಗಳನ್ನು ಮುರಿದಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಪಠಾಣ್ 400 ಕೋಟಿ ಗಳಿಸಿದೆ.


 

68

ಖ್ಯಾತ ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವಿಟ್ಟರ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ, '#ಪರಾಣ್‌ 4 ದಿನಗಳಲ್ಲಿ WW ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗಳನ್ನು ದಾಟಿದೆ' ಎಂದು ಉಲ್ಲೇಖಿಸಿದ್ದಾರೆ.


 

78

ಜನವರಿ 25 ರಂದು ಬಿಡುಗಡೆಯಾದ ಪಠಾನ್ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪಠಾಣ್  ಯಾವುದೇ ತಡೇ ಇಲ್ಲದೆ ತನ್ನ ಓಟ ಮುದಂದುವರೆಸಿ ಅತಿ ವೇಗವಾಗಿ ವಿಶ್ವಾದ್ಯಂತ 400 ಕೋಟಿ ಕ್ಲಬ್‌ಗೆ ಸೇರಿದೆ 

88

ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿರುವ ಈ ಚಿತ್ರವು ವಿಶ್ವದಾದ್ಯಂತ 400 ಕೋಟಿ ರೂಪಾಯಿಗಳನ್ನು ದಾಟಿ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ.
 

Read more Photos on
click me!

Recommended Stories