ಶಾರುಖ್ ಖಾನ್ ಜೊತೆ ಕೆಲಸ ಮಾಡಿದ ಈ ನಟಿಯರು ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಗೊತ್ತಾ?

Published : Jan 29, 2023, 04:26 PM IST

ಶಾರುಖ್ ಖಾನ್ (Shah Rukh Khan) ಅವರ ಚಿತ್ರ ಪಠಾಣ್ (Pathaan) ಭಾರತದಲ್ಲಿ  ಮಾತ್ರವಲ್ಲದೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದೆ. ಈ ಚಿತ್ರ ಕೇವಲ 2 ದಿನದಲ್ಲಿ 123 ಕೋಟಿ ಕಲೆಕ್ಷನ್ ಮಾಡಿದೆ. ಇದುವರೆಗೂ ಶಾರುಖ್‌ ಖಾನ್‌ ಜೊತೆ ಕೆಲಸ ಮಾಡಿದ ಹಲವು  ನಾಯಕಿಯರಲ್ಲಿ ಕೆಲವರು ಈಗ ಚಿತ್ರರಂಗದಿಂದ ದೂರವಾಗಿದ್ದಾರೆ. ಅಷ್ಟೇ ಅಲ್ಲ ಇಬ್ಬರು ಈ ಜಗತ್ತನೇ ತೊರೆದಿದ್ದಾರೆ. ಇಲ್ಲಿದೆ ಶಾರುಖ್‌ ಖಾನ್‌ ಜೊತೆ ಪರದೆ ಹಂಚಿಕೊಂಡ ನಟಿಯರ ವಿವರ.  

PREV
110
ಶಾರುಖ್ ಖಾನ್ ಜೊತೆ ಕೆಲಸ ಮಾಡಿದ ಈ ನಟಿಯರು ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಗೊತ್ತಾ?

ದಿವ್ಯಾ ಭಾರತಿ:
ಶಾರುಖ್ ಖಾನ್ ತಮ್ಮ ವೃತ್ತಿಜೀವನವನ್ನು ದೀವಾನಾ ಚಿತ್ರದ ಮೂಲಕ ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರೊಂದಿಗೆ ದಿವ್ಯಾ ಭಾರತಿ ಪ್ರಮುಖ ಪಾತ್ರದಲ್ಲಿದ್ದರು. ದಿಲ್ ಆಶ್ನಾ ಚಿತ್ರದಲ್ಲಿ ಸಹ  ದಿವ್ಯಾ ಜೊತೆ ಶಾರುಖ್ ಕಾಣಿಸಿಕೊಂಡಿದ್ದರು. ಆದರೆ  ಈಗ ದಿವ್ಯಾ ಭಾರತಿ ನಮ್ಮ ನಡುವೆ ಇಲ್ಲ

210

ಊರ್ಮಿಳಾ ಮಾತೋಡ್ಕರ್:
ಶಾರುಖ್ ಖಾನ್ ಊರ್ಮಿಳಾ ಮಾಡ್ತೋಡ್ಕರ್ ಜೊತೆ ಚಮಾತ್ಕರ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರ ಫ್ಲಾಪ್ ಆಗಿತ್ತು. ಈಗ  ಊರ್ಮಿಳಾ ಬೆಳ್ಳಿತೆರೆಯಿಂದ ಕಾಣೆಯಾಗಿ ವರ್ಷಗಳೇ ಕಳೆದಿವೆ.

310

ನಗ್ಮಾ:
ಶಾರುಖ್ ಖಾನ್ ಅವರ ಕಿಂಗ್ ಅಂಕಲ್ ಚಿತ್ರದಲ್ಲಿ ನಗ್ಮಾ ಪ್ರಮುಖ ಪಾತ್ರದಲ್ಲಿದ್ದರು. ಆದರೆ, ಚಿತ್ರದಲ್ಲಿ ವಿಶೇಷ ಏನನ್ನೂ ತೋರಿಸಲಾಗಲಿಲ್ಲ. ಇನ್ನೂ ನಗ್ಮಾ ಬಗ್ಗೆ ಹೇಳುವುದಾದರೆ, ಬಾಲಿವುಡ್‌ನಲ್ಲಿ ಅವರ ವೃತ್ತಿಜೀವನವು ವಿಶೇಷವಾಗಿಲ್ಲ. ಅವರು ದಕ್ಷಿಣದ ಕೆಲವು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಈಗ ನಟನೆಯಿಂದ ದೂರವಾಗಿ  ಜೀವನ ನಡೆಸುತ್ತಿದ್ದಾರೆ.

410

ದೀಪಾ ಸಾಹಿ:
ಶಾರುಖ್ ಖಾನ್ ದೀಪಾ ಸಾಹಿ ಅವರೊಂದಿಗೆ ಮಾಯಾ ಮೇಮ್‌ಸಾಹಬ್ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರ ಸೂಪರ್ ಫ್ಲಾಪ್ ಆಗಿತ್ತು. ಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಶಾರುಖ್ ಕೂಡ ತೀವ್ರ ಟೀಕೆಗೆ ಗುರಿಯಾಗಿದ್ದರು. ದೀಪಾ ಈಗ ಅನಾಮಧೇಯಳಾಗಿದ್ದಾರೆ ಅವರು ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ.

510

ಸುಚಿತ್ರಾ ಕೃಷ್ಣಮೂರ್ತಿ:
ಕಭಿ ಹಾನ್ ಕಭಿ ನಾ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಸುಚಿತ್ರಾ ಕೃಷ್ಣಮೂರ್ತಿ ಮುಖ್ಯ ಭೂಮಿಕೆಯಲ್ಲಿದ್ದರು. ಸುಚಿತ್ರಾ ಅವರ ಬಾಲಿವುಡ್ ವೃತ್ತಿಜೀವನವೂ ವಿಶೇಷವಾಗಿರಲಿಲ್ಲ. ಅವರು ಬಹಳ ಸಮಯದಿಂದ ಜನಮನದಿಂದ ದೂರ ಉಳಿದಿದ್ದಾರೆ.

610

ಮನಿಶಾ ಕೊಯಿರಾಲಾ:
ಶಾರುಖ್ ಖಾನ್ ಮನೀಶಾ ಕೊಯಿರಾಲಾ ಅವರೊಂದಿಗೆ ಗುಡ್ಡು ಮತ್ತು ದಿಲ್ ಸೇ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಹಿಟ್ ನಟಿಯರಲ್ಲಿ ಮನೀಷಾ ಒಬ್ಬರು ಆದರೆ ಮಾದಕ ವ್ಯಸನವು ಅವರ ಸಂಪೂರ್ಣ ವೃತ್ತಿಜೀವನವನ್ನು ಹಾಳುಮಾಡಿತು. ಮನೀಶಾ ಈಗ ಜನಮನದಿಂದ ದೂರ ಉಳಿದಿದ್ದಾರೆ.

710

ಪ್ರಿಯಾ ಗಿಲ್:
ಜೋಶ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಕಾಣಿಸಿಕೊಂಡಿದ್ದ ಪ್ರಿಯಾ ಗಿಲ್, ಕೆಲವೇ ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಅನಾಮಧೇಯರಾದರು. ವರ್ಷಗಳ ಕಾಲ ನಟನಾ ಲೋಕದಿಂದ ದೂರವಾಗಿ ಪ್ರಿಯಾ   ಜೀವನ ನಡೆಸುತ್ತಿದ್ದಾರೆ.

810

ಗಾಯತ್ರಿ ಜೋಶಿ:
ಸ್ವದೇಶ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಕಾಣಿಸಿಕೊಂಡ ಗಾಯತ್ರಿ ಜೋಶಿಯವರ ಮೊದಲ ಮತ್ತು ಕೊನೆಯ ಚಿತ್ರ ಇದಾಗಿದೆ. ಗಾಯತ್ರಿ ಈಗ ಜನಮನದಿಂದ ದೂರವಾಗಿದ್ದಾರೆ. ಅವರ ಬಗ್ಗೆ ಯಾವುದೇ  ಮಾಹಿತಿ ಲಭ್ಯವಿಲ್ಲ.

  

910

ಶ್ರೀದೇವಿ :
ಶಾರುಖ್ ಖಾನ್ ಆರ್ಮಿ ಚಿತ್ರದಲ್ಲಿ ಶ್ರೀದೇವಿ ಜೊತೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಶಾರುಖ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ  ಸೂಪರ್ ಸ್ಟಾರ್ ಶ್ರೀದೇವಿ ಅವರು ಈಗ ಜಗತ್ತಿನಲ್ಲಿ ಇಲ್ಲ

1010

ಸೋನಾಲಿ ಬೇಂದ್ರೆ:
ಸೋನಾಲಿ ಬೇಂದ್ರೆ ಶಾರುಖ್ ಖಾನ್ ಜೊತೆ ಅಂಗ್ರೇಜಿ ಬಾಬು ದೇಸಿ ಮಾಮ್ ಮತ್ತು ಡುಪ್ಲಿಕೇಟ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಎರಡೂ ಚಿತ್ರಗಳು ಸೋತಿವೆ. ಚಿತ್ರರಂಗದಿಂದ ದೂರ ಉಳಿದಿರುವ ಸೋನಾಲಿ  ಅವರು ಕೆಲವೊಮ್ಮೆ ಟಿವಿ ರಿಯಾಲಿಟಿ ಶೋಗಳಲ್ಲಿ  ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರೆ. ಆದಾಗ್ಯೂ, ಹೆಚ್ಚಿನ ಸಮಯ ಅವರು ಜನಮನದಿಂದ ದೂರ ಉಳಿಯುತ್ತಾರೆ

 

Read more Photos on
click me!

Recommended Stories