ರಣವೀರ್ ಸಿಂಗ್ ಬಟ್ಟೆ ಧರಿಸದಿದ್ದಕ್ಕಾಗಿ ಆರೆಸ್ಟ್‌ ಆಗುತ್ತಾರೆಂದು ಭವಿಷ್ಯ ಹೇಳಿದ್ದ ಶಾರುಖ್‌ ಖಾನ್

Published : Jul 29, 2022, 06:31 PM IST

ವಿಲಕ್ಷಣ ಮತ್ತು ಸೊಗಸಾದ ವಾರ್ಡ್ರೋಬ್ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ರಣವೀರ್ ಸಿಂಗ್ (Ranverr Singh) ಮತ್ತೆ ಸುದ್ದಿಯಲ್ಲಿದ್ದಾರೆ. ಪೇಪರ್ ಮ್ಯಾಗಜೀನ್‌ಗಾಗಿ ರಣವೀರ್‌ ಸಿಂಗ್‌ ನೀಡಿರುವ ನ್ಯೂಡ್‌ ಪೋಸ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಅನೇಕ ಜನರು ಫೋಟೋಗಳನ್ನು ಮೆಚ್ಚಿಕೊಂಡಿದ್ದರೂ, ಸಮಾಜದ ಕೆಲವು ಜನರು ಫೋಟೋಗಳನ್ನು ಇಷ್ಟಪಡಲಿಲ್ಲ ಹಾಗೂ ರಣವೀರ್‌ ಸಿಂಗ್‌ ವಿರುದ್ಧ ಈ ಕಾರಣಕ್ಕಾಗಿ ದೂರು ದಾಖಲಾಗಿದೆ. ಈ ಹಿಂದೆಯೇ ಶಾರುಖ್‌ ಖಾನ್ (Shah Rukh Khan)  ಒಮ್ಮೆ ರಣವೀರ್‌ ಸಿಂಗ್‌ ಬಟ್ಟೆ ಧರಿಸದೆ ಇರುವ ಕಾರಣ ಅರೆಸ್ಟ್‌ ಆಗುತ್ತಾರೆ ಎಂದು ಹೇಳಿದ್ದರು ಮತ್ತು ಈಗ ಅದು ನಿಜವಾಗುವ ಹಾಗೇ ಕಾಣುತ್ತಿದೆ.    

PREV
18
ರಣವೀರ್ ಸಿಂಗ್ ಬಟ್ಟೆ ಧರಿಸದಿದ್ದಕ್ಕಾಗಿ ಆರೆಸ್ಟ್‌ ಆಗುತ್ತಾರೆಂದು ಭವಿಷ್ಯ ಹೇಳಿದ್ದ ಶಾರುಖ್‌ ಖಾನ್

ರಣವೀರ್ ಸಿಂಗ್‌ ಅವರ ನ್ಯೂಡ್‌ ಫೋಟೋಶೂಟ್‌ ಅನ್ನು 'ಮಹಿಳೆಯರ ಸಂವೇದನೆಯನ್ನು ನೋಯಿಸುವ ಮತ್ತು ಅವರ ನಮ್ರತೆಯನ್ನು ಅವಮಾನಿಸುವ ಕೆಲಸ ಎಂದು ದೂರ ನೀಡಲಾಗಿದೆ. ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ನಟ ಕಾನೂನು ತೊಂದರೆಗೆ ಸಿಲುಕಿದ್ದಾರೆ.

28

ಆದರೆ ನಟ ರಣವೀರ್‌ ಸಿಂಗ್‌ ತನ್ನ ಫ್ಯಾಷನ್ ಆಯ್ಕೆಗಳಿಂದಾಗಿ ಒಂದು ದಿನ ಜೈಲು ಪಾಲಾಗುತ್ತಾನೆ ಎಂದು ಶಾರುಖ್ ಖಾನ್ ಬಹಳ ಹಿಂದೆ ಭವಿಷ್ಯ ನುಡಿದಿದ್ದರು.
 

38

ಬಾಲಿವುಡ್‌ನ ಕಿಂಗ್, ಶಾರುಖ್ ಖಾನ್ 2017 ರಲ್ಲಿ ಕಾಫಿ ವಿತ್ ಕರಣ್ ಎಂಬ ಚಾಟ್ ಪ್ರೋಗ್ರಾಂನಲ್ಲಿ ಆಲಿಯಾ ಭಟ್ ಅವರ ಜೊತೆ ಕಾಣಿಸಿಕೊಂಡಿದ್ದರು. ಈಗ ಮತ್ತೆ   ಅವರ ಈ ಹಳೆಯ ಸಂದರ್ಶನವು ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. 

48

ಕಾಫಿ ವಿತ್ ಕರಣ್‌ನ ಹಳೆಯ ಸಂಚಿಕೆಯಲ್ಲಿ, ರಣವೀರ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಕೇಳಿದರೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕರಣ್ ಜೋಹರ್ ಶಾರುಖ್ ಖಾನ್ ಅವರನ್ನು ಕೇಳಿದರು.  'ಬಟ್ಟೆ ಧರಿಸಿದ್ದಕ್ಕಾಗಿ ಮತ್ತು ಬಟ್ಟೆ ಧರಿಸದಿದ್ದಕ್ಕಾಗಿ ರಣವೀರ್ ಜೈಲು ಪಾಲಾಗಬಹುದು' ಎಂದು ಶಾರುಖ್‌ ತಮಾಷೆ ಮಾಡಿದ್ದರು.
 

58

ರಣವೀರ್‌ ಅವರ ವಿವಾದಾತ್ಮಕ ಬೆತ್ತಲೆ  ಫೋಟೋಗಳ ಕಾರಣ ಮಧ್ಯಪ್ರದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದು, ಜನರು  ರಣವೀರ್ ಅವರ ಚಿತ್ರಗಳಿರುವ ಪೆಟ್ಟಿಗೆಯಲ್ಲಿ ಬಟ್ಟೆಗಳನ್ನು ನೀಡಿದರು. ತಮ್ಮ ನೇಕಿ ಕಿ ದಿವಾರ್ ಅಭಿಯಾನದ ಭಾಗವಾಗಿ, ಇಂದೋರ್‌ನ ರಾಜಕೀಯ ಪಕ್ಷದ ಉದ್ಯೋಗಿಗಳು ಸಹ ರಣವೀರ್‌ಗೆ ಬಟ್ಟೆ ನೀಡಿದರು.
 

68

ಅದೇ ಸಮಯದಲ್ಲಿ ನಟನಿಗೆ  ಬಾಲಿವುಡ್‌ನಿಂದ ಬೆಂಬಲ ಸಿಗುತ್ತಿದೆ. ಪರಿಣಿತಿ ಚೋಪ್ರಾ, ವಾಣಿ ಕಪೂರ್ ಮತ್ತು ಅರ್ಜುನ್ ಕಪೂರ್ ಅವರಿಂದ ಅವರ ಬೋಲ್ಡ್‌  ಚಿತ್ರ ಸೆಷನ್‌ಗಾಗಿ ಅವರು ಬೆಂಬಲ ಮತ್ತು ಪ್ರಶಂಸೆಯನ್ನು ಪಡೆದರು.
 

78

ಪತ್ರಕರ್ತರೊಬ್ಬರು ಈಗಾಗಲೇ ಗಲ್ಲಿ ಬಾಯ್‌ನಲ್ಲಿ ಅವರ ಸಹನಟಿ ಆಲಿಯಾ ಭಟ್ ಅವರನ್ನು ರಣವೀರ್ ಅವರ ಈ ಫೋಟೋಗಳ ಬಗ್ಗೆ ಪ್ರಶ್ನಿಸಿದ್ದರು ಮತ್ತು ಅವರು ರಣವೀರ್ ಅವರ ಛಾಯಾಚಿತ್ರದ ಬಗ್ಗೆ ಪ್ರತಿಕ್ರಿಯಿಸಿದರು. ನನಗೆ ಈ ಪ್ರಶ್ನೆಯನ್ನು ಸಹಿಸಲಾಗುತ್ತಿಲ್ಲ, ರಣವೀರ್ ಸಿಂಗ್ ಫೇವರೇಟ್‌ ಅವರ ಬಗ್ಗೆ ಅಸಹ್ಯವಾಗಿ ಏನನ್ನೂ ಹೇಳುವುದನ್ನು ನಾನು ಪ್ರಶಂಸಿಸುವುದಿಲ್ಲ ಎಂದು ಆಲಿಯಾ ಹೇಳಿದ್ದಾರೆ.

88

ಇತ್ತೀಚೆಗೆ,  ರಣವೀರರ್ ಸಿಂಗ್‌ ಮತ್ತ ಆಲಿಯಾ ಭಟ್‌  ಜೋಡಿ ಕರಣ್ ಜೋಹರ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

Read more Photos on
click me!

Recommended Stories