ಆರ್ ಮಾಧವನ್ ಮತ್ತು ಬಿಪಾಶಾ ಬಸು 2012 ರಲ್ಲಿ ಜೋಡಿ ಬ್ರೇಕರ್ಸ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅದೇ ವರ್ಷದಲ್ಲಿ ಚಿತ್ರದ ಪ್ರಚಾರದ ಸಂದರ್ಭದಲ್ಲಿ, ಮಾಧವನ್ ಅವರು ಬಿಪಾಶಾ ಅವರೊಂದಿಗಿನ ತಮ್ಮ ಆನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತನಾಡಿದರು.
2012 ರಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಆರ್ ಮಾಧವನ್ ಬಿಪಾಶಾ ಬಸು ಬಗ್ಗೆ ತಮ್ಮ ಭಾವನೆಗಳ ಬಗ್ಗೆ ಮಾತನಾಡಿದರು ಮತ್ತು ಅವರು 'ಖಂಡಿತವಾಗಿಯೂ ಬಿಪಾಶಾರಿಗೆ ಆಕರ್ಷಿತರಾಗಿದ್ದರು' ಎಂದು ಹೇಳಿದ್ದರು.
'ನೀವು ಪರದೆಯ ಮೇಲೆ ಕೆಮಿಸ್ಟ್ರಿ ಹೊಂದಿರುವಾಗ, ಆ ವ್ಯಕ್ತಿಯತ್ತ ಹೆಚ್ಚು ಆಕರ್ಷಿತರಾಗಬೇಕು ಮತ್ತು ನಾನು ಖಂಡಿತವಾಗಿಯೂ ಬಿಪಾಶಾಗೆ ಆಕರ್ಷಿತನಾಗಿದ್ದೇನೆ. ಅವರು ಅಸಾಧಾರಣ ಮತ್ತು ಹೀಗೆ ಮಾಡದಿದ್ದರೆ' ಅಂತಹ ಕೆಮಿಸ್ಟ್ರಿ ಇಲ್ಲದಿದ್ದರೆ ರೋಮ್ಯಾನ್ಸ್ ಅನ್ನು ತೆರೆಯ ಮೇಲೆ ಚಿತ್ರಿಸುವುದು ಕಷ್ಟ. ಅವರು ಸುಂದರಿ, ಆಕರ್ಷಕ. ಸೆಟ್‌ಗಳಲ್ಲಿ ನಮ್ಮ ಸಂಬಂಧ ಹೇಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಅವರು ಎಷ್ಟು ದೊಡ್ಡ ಸ್ಟಾರ್ ಎಂಬ ಭಾವನೆ ನನ್ನಲ್ಲಿ ಬರುವಂತೆ ಅವರು ಎಂದಿಗೂ ನಡೆದುಕೊಳ್ಳಲಿಲ್ಲ' ಎಂದು ಮಾಧವನ್ ಹೇಳಿದ್ದರು.
ಬಿಪಾಶಾ ಅವರು ಹಿಂದೆ ನಟ ಜಾನ್ ಅಬ್ರಹಾಂ ಅವರನ್ನು 10 ವರ್ಷಗಳ ಕಾಲ ಡೇಟಿಂಗ್ ಮಾಡಿದರು ಮತ್ತು 2011 ರಲ್ಲಿ ಬೇರ್ಪಟ್ಟರು. ನಂತರ 2015 ರಲ್ಲಿ ಅಲೋನ್ ಸೆಟ್‌ನಲ್ಲಿ ಭೇಟಿಯಾದ ನಂತರ ನಟ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ 2016 ರಲ್ಲಿ ಮದುವೆಯಾದರು. ಬಿಪಾಶಾ ಕೊನೆಯದಾಗಿ MX ಪ್ಲೇಯರ್‌ನ ವೆಬ್-ಸರಣಿಯಲ್ಲಿ ಕಾಣಿಸಿಕೊಂಡರು.
ಮಾಧವನ್ ಇತ್ತೀಚೆಗೆ ತಮ್ಮ ಪತ್ನಿ ಸರಿತಾ ಬಿರ್ಜೆ ಅವರೊಂದಿಗೆ 23 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ತಮ್ಮ ಕೆಲವು ಪೋಟೋಗಳನ್ನು ಹಂಚಿಕೊಂಡ ಮಾಧವನ್, 'ಹೇಗೆ ನಾನು ಹಿಂದೆಂದಿಗಿಂತಲೂ ನಿನ್ನನ್ನು ಹೆಚ್ಚು ಪ್ರೀತಿಸುತ್ತಿದ್ದೇನೆ ಮತ್ತು ನಾನು ಈಗಷ್ಟೇ ಪ್ರಾರಂಭಿಸುತ್ತಿದ್ದೇನೆ... ವಾರ್ಷಿಕೋತ್ಸವದ ಶುಭಾಶಯಗಳು ವೈಫ್' ಎಂದು ಬರೆದಿದ್ದಾರೆ
ಮಾಧವನ್ ಮತ್ತು ಸರಿತಾ 2005 ರಲ್ಲಿ ಮಗ ವೇದಾಂತ್ ಮಾಧವನ್ ಅವರನ್ನು ಸ್ವಾಗತಿಸಿದರು. ವೇದಾಂತ್ ಇತ್ತೀಚೆಗೆ 48 ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ಜೂನಿಯರ್ ದಾಖಲೆಯನ್ನು ಮುರಿ ಸಖತ್ ಸುದ್ದಿ ಮಾಡಿದ್ದನು.
ಮಾಧವನ್ ಕೊನೆಯ ಬಾರಿಗೆ ರಾಕೆಟ್ರಿ: ದಿ ನಂಬಿ ಎಫೆಕ್ಟ್ ನಲ್ಲಿ ಕಾಣಿಸಿಕೊಂಡರು, ಇದು ಜುಲೈ 1 ರಂದು ಬಿಡುಗಡೆಯಾಯಿತು. ನಟರಾದ ಶಾರುಖ್ ಖಾನ್ ಮತ್ತು ಸೂರ್ಯ ಚಿತ್ರದಲ್ಲಿ ಅತಿಥಿ ಪಾತ್ರಗಳನ್ನು ಹೊಂದಿದ್ದರು. ರಾಕೆಟ್ರಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ವಿಶ್ವದಾದ್ಯಂತ ಆರು ಭಾಷೆಗಳಲ್ಲಿ ಬಿಡುಗಡೆಯಾಯಿತು.