ಅಬ್ಬಬ್ಬಾ ಶಾರುಖ್ ಖಾನ್ ತಮ್ಮ ಮ್ಯಾನೇಜರ್‌ಗೆ ಕೊಡೋ ಸಂಬಳವೆಷ್ಟು ಗೊತ್ತಾ?

Published : Feb 17, 2023, 04:17 PM IST

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಶಾರುಖ್ ಖಾನ್(Shahrukh Khan)  ಅವರ ಮ್ಯಾನೇಜರ್ ಪೂಜಾ ದದ್ಲಾನಿ (Pooja Dadlani) ಬಿಟೌನ್‌ನಲ್ಲಿ ಪರಿಚಿತ ಮುಖ. ಶಾರುಖ್‌ ಖಾನ್‌ ಜೊತೆ ಎಲ್ಲ ಕಡೆ ಕಾಣಿಸಿಕೊಳ್ಳುವ ಪೂಜಾ ಅವರು ನಟನ ಪ್ಯಾಮಿಲಿಗೂ ಅಪ್ತರು. ಈ ನಡುವೆ ಪೂಜಾ ಅವರ  ಆಸ್ತಿಗೆ ಸಂಬಂಧಿಸಿದ ವಿವರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಪೂಜಾ ಅವರ ವಾರ್ಷಿಕ ಗಳಿಕೆಯ ನಿವ್ವಳ ಮೌಲ್ಯ ಎಷ್ಷು ಗೊತ್ತಾ?

PREV
110
ಅಬ್ಬಬ್ಬಾ ಶಾರುಖ್ ಖಾನ್ ತಮ್ಮ ಮ್ಯಾನೇಜರ್‌ಗೆ ಕೊಡೋ ಸಂಬಳವೆಷ್ಟು ಗೊತ್ತಾ?

ಪೂಜಾ ದದ್ಲಾನಿ ಕಳೆದ 11 ವರ್ಷಗಳಿಂದ ಶಾರುಖ್ ಖಾನ್ ಅವರ ಪ್ರೊಫೆಷನಲ್ ಕೆಲಸವನ್ನು ವೀಕ್ಷಿಸುತ್ತಿದ್ದಾರೆ. ಬಾಲಿವುಡ್ ಬಾದ್ ಶಾನ ಕುಟುಂಬಕ್ಕೂ ಆತ್ಮೀಯರಾಗಿರುವ ಇವರು, ಶಾರುಖ್ ಮಗ ಡ್ರಗ್ ಕೇಸಲ್ಲಿ ಜೈಲು ಪಾಲಾದಾಗಲೂ ಹೈಲೈಟ್ ಆಗುತ್ತಿದ್ದರು. 

210

ಚಲನಚಿತ್ರಗಳ ಜೊತೆಗೆ, ಅವರು ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್‌ನಂತಹ ಇತರ ವ್ಯವಹಾರಗಳನ್ನು ಸಹ ನಿರ್ವಹಿಸುತ್ತಾರೆ.

310

ಶಾರುಖ್ ಖಾನ್ ಅವರ ಕೆಲಸವನ್ನು ನಿರ್ವಹಿಸುವುದಕ್ಕಾಗಿ ಪೂಜಾ ದದ್ಲಾನಿ ಅವರು ವಾರ್ಷಿಕವಾಗಿ ಭಾರಿ ಮೊತ್ತದ ಸಂಬಳ ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತವೆ.ಶಾರುಖ್ ಮ್ಯಾನೇಜರ್ ಆಗಿ ಪ್ರತಿ ವರ್ಷ ಸುಮಾರು 7 ರಿಂದ 9 ಕೋಟಿ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. 

410

ಸಾಮಾನ್ಯವಾಗಿ ಬಾಲಿವುಡ್ ನ ಎ-ಲಿಸ್ಟರ್ ಹೀರೋಯಿನ್ ಗಳು ಒಂದು ಚಿತ್ರಕ್ಕೆ  ಪಡೆಯುವ ಶುಲ್ಕದಷ್ಷು ಪೂಜಾ ಅವರು ವರ್ಷದ ಸಂಬಳವಾಗಿ ಪಡೆಯುತ್ತಾರೆ.

 

510
Pooja Dadlani

ಪೂಜಾ ದದ್ಲಾನಿ ಸುಮಾರು 45 ರಿಂದ 50 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಅವರ ಐಷಾರಾಮಿ ಮನೆಯಿಂದ ಐಷಾರಾಮಿ ಮರ್ಸಿಡಿಸ್ ಕಾರು ಸೇರಿದೆ.

610

ಪೂಜಾ ಇತ್ತೀಚೆಗೆ ತನ್ನ ಹೊಸ ಮನೆಯ ಫೋಟೋಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅವರು ಇತ್ತೀಚೆಗೆ ಈ ಮನೆಗೆ ಪ್ರವೇಶಿಸಿದ್ದಾರೆ. ಈ ಬಗ್ಗೆ ಸ್ವತಃ ಪೂಜಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.


 

710

ಪೂಜಾ ಅವರ ಹೊಸ ಮನೆಯ  ಇಂಟೀರಿಯರ್‌ ತುಂಬಾ ಸುಂದರವಾಗಿದೆ. ಇದನ್ನು ಡಿಸೈನ್‌ ಮಾಡಿರುವುದು ಬೇರೆ ಯಾರು ಅಲ್ಲ. ಸ್ವತಃ ಗೌರಿ ಖಾನ್‌ ಎನ್ನುವುದು ಪೂಜಾ ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ 
 

810

'ಹೊಸ ಕನಸುಳಿಗೆ, ಸಂತೋಷವನ್ನು ಸೃಷ್ಷಿಸಲು ನಮ್ಮ ಹೊಸ ಮನೆಗೆ ಪ್ರವೇಶಿಸುತ್ತಿದ್ದೇನೆ.  ಮತ್ತು ಈ ಹೊಸ ಪ್ರಯಾಣವನ್ನು ನನ್ನ ಕುಟುಂಬವಾದ ಗೌರಿ ಖಾನ್ ವಿನ್ಯಾಸಗೊಳಿಸುವುದಕ್ಕಿಂತ ಬೇರೆ ಖುಷಿ ಏನಿದೆ? ಅವರು ಕಟ್ಟಡವನ್ನು ಮನೆಯಾಗಿ ಬದಲಾಯಿಸಿದ್ದಾರೆ'ಎಂದು ಪೂಜಾ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.

910

ಫೋಟೋಗಳಲ್ಲಿ, ಪೂಜಾ ಜೊತೆಗೆ, ಗೌರಿ ಕೂಡ ತನ್ನ ಹೊಸ ಮನೆಯಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಶಾರುಖ್ ಖಾನ್ ಮತ್ತು ಗೌರಿ ಪೂಜಾರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ.

1010

ಪ್ರತಿ ಸುಖ ದುಃಖದಲ್ಲೂ ಖಾನ್ ಕುಟುಂಬದೊಂದಿಗೆ ಪೂಜಾ ಕೂಡ ನಿಂತಿದ್ದಾರೆ. ಕಳೆದ ವರ್ಷ ಶಾರುಖ್ ಪುತ್ರ ಆರ್ಯನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಪೂಜಾ ಅವರು ಪ್ರತಿ ಹಂತದಲ್ಲೂ ನಟನ ಜೊತೆ ನಿಂತು ಬೆಂಬಲಿಸಿದ್ದರು.

Read more Photos on
click me!

Recommended Stories