3 ಸಲ MRI ಸ್ಕ್ಯಾನ್‌ ಮಾಡಿಸಿದ ಕಿರುತೆರೆ ನಟಿ ಐಶ್ವರ್ಯ; ಮುಖಕ್ಕೆ ಪಾರ್ಶ್ಚವಾಯು, ಹಿಂಸೆ ನೆನೆದು ಕಣ್ಣೀರು

Published : Feb 17, 2023, 09:57 AM IST

Ramsay Hunt Syndromeನಿಂದ ಬಳಲುತ್ತಿರುವ ನಟಿ ಐಶ್ವರ್ಯ ಸಖುಜಾ.  ನೋವಿನ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ...  

PREV
19
3 ಸಲ MRI ಸ್ಕ್ಯಾನ್‌ ಮಾಡಿಸಿದ ಕಿರುತೆರೆ ನಟಿ ಐಶ್ವರ್ಯ; ಮುಖಕ್ಕೆ ಪಾರ್ಶ್ಚವಾಯು, ಹಿಂಸೆ ನೆನೆದು ಕಣ್ಣೀರು

2014ರಲ್ಲಿ ಕಿರುತೆರೆ ನಟಿ ಐಶ್ವರ್ಯಾ ಸಖುಜಾ ಮುಖಕ್ಕೆ ಪಾರ್ಶ್ಚವಾಯು.  Ramsay Hunt Syndrome ಅಂದ್ರೆ ಏನು? ಇದರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ಹಂಚಿಕೊಂಡಿದ್ದಾರೆ.

29

ಎಂಟು ವರ್ಷಗಳ ಹಿಂದೆ ನಟಿ ಐಶ್ವರ್ಯಾ ಸಖುಜಾ ಅವರ ಮುಖಕ್ಕೆ ಪಾರ್ಶ್ಚವಾಯು ಆಗಿತ್ತಂತೆ. 'ಮೈನ್ ನಾ ಭೂಲುಂಗಿ' (2014) ಧಾರಾವಾಹಿ ಚಿತ್ರೀಕರಣದ ವೇಳೆ ನಡೆದ ಘಟನೆ. 

39

ಮದುವೆ ಸೀಕ್ವೆನ್ಸ್‌ ಶುರುವಾಗುತ್ತಿದ್ದ ಕಾರಣ ನಾನ್ ಸ್ಟಾಪ್ ಚಿತ್ರೀಕರಣ ಮಾಡಿರುವೆ. ರೋಹಿತ್ (ಈಗ ಪತಿ, 2014ರಲ್ಲಿ ಬಾಯ್‌ಫ್ರೆಂಡ್) ಯಾಕೆ ಪದೇ ಪದೇ ಕಣ್ಣು ಹೊಡೆಯುತ್ತಿರುವೆ ಎಂದು ಪ್ರಶ್ನೆ ಮಾಡಿದ್ದರು.

49

ಪ್ರೀತಿಯಿಂದ ತಮಾಷೆ ಮಾಡುತ್ತಿದ್ದಾರೆ ಎಂದು ನಾನು ಸುಮ್ಮನಾದೆ. ಆದರೆ ಮರು ದಿನ ಬೆಳಗ್ಗೆ ನಾನು ಹಲ್ಲು ಉಜ್ಜುವಾಗ ಬಾಯಲ್ಲಿ ನೀರು ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ನನ್ನ ದೇಹ ದಣಿದಿದೆ ಎಂದುಕೊಂಡು ಸುಮ್ಮನಾದೆ' ಎಂದು ನಟಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಹೇಳಿದ್ದಾರೆ.

59

'ನನ್ನ ರೂಮ್‌ ಮೇಟ್‌ ಪೂಜಾ ಶರ್ಮಾ ನನ್ನ ಮುಖ ನೋಡಿ ವಿಚಿತ್ರವಾಗುತ್ತಿದೆ ಎಂದು ಹೇಳುತ್ತಿದ್ದಳು. ಆರೋಗ್ಯ ಸರಿ ಇಲ್ಲ ಎಂದುಕೊಂಡಳು ಆದರೆ ನಾನು ಸೂಪರ್ ಫಿಟ್ ಆಗಿದ್ದೆ. ಬಾತ್‌ರೂಮ್‌ನಲ್ಲಿ ಕನ್ನಡಿ ಇರಲಿಲ್ಲ. ಗಡಿಬಿಡಿಯಲ್ಲಿ ರೆಡಿಯಾಗುತ್ತಿರುವ ಕಾರಣ ನಾನು ರೂಮ್‌ನಲ್ಲಿ ಮುಖ ನೋಡಿಕೊಂಡಿರಲಿಲ್ಲ. 

69

ಏನೋ ಬದಲಾವಣೆ ಕಾಣಿಸುತ್ತಿದೆ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಸ್ನೇಹಿತೆ ಹೇಳಿದ್ದಳು. ಮೆದುಳಿಗೆ MRI ಸ್ಕ್ಯಾನ್ ಮಾಡಿಸಿದ ನಂತರವೂ ನಾನು ಚಿತ್ರೀಕರಣ ಮುಂದುವರೆಸಿದೆ. 

79

ಎರಡು ಮೂರು ಸ್ಕ್ಯಾನ್‌ಗಳ ನಂತರ ತಿಳಿಯಿತ್ತು ನನಗೆ Ramsay Hunt Syndrome ಆಗಿದೆ ಎಂದು. ತಕ್ಷಣವೇ ಸ್ಟಿರಾಯ್ಡ್‌ ಆರಂಭಿಸಿದ್ದರು' ಎಂದು ಐಶ್ವರ್ಯ ಹೇಳಿದ್ದಾರೆ. ಟೈಟ್‌ ಶೆಡ್ಯೂಲ್‌ ಇದ್ದ ಕಾರಣ ಬ್ರೇಕ್ ತೆಗೆದುಕೊಳ್ಳದೆ ಚಿತ್ರೀಕರಣ ಮಾಡಿದೆ. ಬ್ಯಾಕಪ್‌ ಎಪಿಸೋಡ್‌ ಕೂಡ ಇರಲಿಲ್ಲ. ಇಡೀ ತಂಡ ನನಗೆ ಸಪೋರ್ಟ್ ಮಾಡಿದ್ದರು. 

89

ತೆರೆ ಮೇಲೆ ನನ್ನ ಅರ್ಧ ಮುಖ ಮಾತ್ರ ತೋರಿಸುತ್ತಿದ್ದರು ಹೀಗಾಗಿ ಜನರಿಗೆ ಇದರ ಬಗ್ಗೆ ಗೊತ್ತಗಲಿಲ್ಲ. ವೈದ್ಯರು ಕೊಡುತ್ತಿದ್ದ ಸ್ಟಿರಾಯ್ಡ್‌ ತುಂಬಾ ಹಿಂಸೆ ಆಗುತ್ತಿತ್ತು, ಅದಕ್ಕಿಂತ ದೊಡ್ಡ ಹಿಂಸೆ ಮಾನಸಿವಾಗಿ ನಮ್ಮನ್ನು ನಾವು ಎದುರಿಸಿಕೊಳ್ಳುವುದು ಏಕೆಂದರೆ ನಟಿಯಾಗಿ ನನಗೆ ಮುಖ ತುಂಬಾನೇ ಮುಖ್ಯ. 

99

  ಒಂದು ತಿಂಗಳು ನಾನ್‌ ಸ್ಟಾಪ್‌ ಚಿಕಿತ್ಸೆಯಿಂದ ನಾನು ಚೇತರಿಸಿಕೊಂಡಿರುವೆ ಹೀಗಾಗಿ ಜಸ್ಟಿನ್ ಬೀಬರ್‌ ಕೂಡ ಚೇತರಿಸಿಕೊಂಡು ಸಂಗೀತ ಕಾರ್ಯಕ್ರಮ ಶುರು ಮಾಡಲಿದ್ದಾರೆ ಎಂದಿದ್ದಾರೆ ಐಶ್ವರ್ಯ.

Read more Photos on
click me!

Recommended Stories