ಹಿಂದೂ ಸಂಪ್ರದಾಯದ ಪ್ರಕಾರ ಹಾರ್ದಿಕ್ ಪಾಂಡ್ಯ-ನತಾಶಾ ಅದ್ದೂರಿ ಮದುವೆ; ಫೋಟೋ ವೈರಲ್

First Published Feb 17, 2023, 11:05 AM IST

ಇತ್ತೀಚಿಗಷ್ಟೆ ಟೀಂ ಇಂಡಿಯಾ ಆಟಗಾರ ಮತ್ತು ನತಾಶಾ ಸ್ಟಾಂಕೋವಿಕ್‌ ಅದ್ದೂರಿಯಾಗಿ ಮದುವೆಯಾದರು. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಇತ್ತೀಚಿಗಷ್ಟೆ ಟೀಂ ಇಂಡಿಯಾ ಆಟಗಾರ ಮತ್ತು ನತಾಶಾ ಸ್ಟಾಂಕೋವಿಕ್‌ ಅದ್ದೂರಿಯಾಗಿ ಮದುವೆಯಾದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಹಾರ್ದಿಕ್‌ ಪಾಂಡ್ಯ ಹಾಗು ನತಾಶಾ ಸ್ಟಾಂಕೋವಿಕ್‌ ಪ್ರೇಮಿಗಳ ದಿನದಂದು ಮತ್ತೊಮ್ಮೆ ವಿವಾಹವಾಗುಲ ಮೂಲಕ ಗಮನ ಸೆಳೆಯುತ್ತಿದ್ದಾರೆ. 

ಇದೀಗ ಹಾರ್ದಿಕ್  ಮತ್ತು ನತಾಶಾ ಜೋಡಿ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.  ಈ ಜೋಡಿ ರಾಜಸ್ಥಾನದ ಉದಯ್‌ಪುರದಲ್ಲಿ ಅದ್ದೂರಿಯಾಗಿ ವಿವಾಹವಾದರು. ಸದ್ಯ ಹಾರ್ದಿಕ್‌ ಪಾಂಡ್ಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

Latest Videos


ಹಿಂದೂ ಸಾಂಪ್ರದಾಯದ ಪ್ರಕಾರ ಮದುವೆಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಾರ್ದಿಕ್  ಶೆರ್ವಾನಿಯಲ್ಲಿ ಮಿಂಚಿದ್ರೆ ಮತ್ತು ನತಾಶಾ ಕೆಂಪು ಬಣ್ಣದ ಹೆವಿ ಎಂಬ್ರಾಯಿಡರಿ ಇರುವ ಲೆಹೆಂಗಾದಲ್ಲಿ ಕಂಗೊಳಿಸುದರು. 

ಹಾರ್ದಿಕ್ ಮತ್ತು ನತಾಶಾ ಜೋಡಿ ಎರಡು ಸಾಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಪಾಶ್ಚಿಮಾತ್ಯ ಶೈಲಿಯಲ್ಲಿ ಒಮ್ಮೆ ಮದುವೆಯಾದರೆ ಮತ್ತೊಮ್ಮೆ ಹಿಂದೂ ಸಾಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದಾರೆ. 
 

ಹಾರ್ದಿಕ್ ಮತ್ತು ನತಾಶಾ ಮದುವೆಯಲ್ಲಿ ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು.  
ಮೂರು ವರ್ಷಗಳ ಹಿಂದೆ ನತಾಶಾ ಸ್ಟಾಂಕೋವಿಕ್‌ರನ್ನು ಹಾರ್ದಿಕ್‌ ಪಾಂಡ್ಯ ರಿಜಿಸ್ಟರ್‌ ಮದುವೆ ಆಗಿದ್ದರು.

ಮೂರು ವರ್ಷದ ಹಿಂದೆ ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ ನಿಶ್ಚಿತಾರ್ಥ ಮಾಡಿಕೊಂಡ 6 ತಿಂಗಳಿಗೆ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ. 
 

click me!