Shah Rukh Khan: 10 ವರ್ಷದಲ್ಲಿ ಮೊದಲಬಾರಿ ಫ್ಯಾನ್ಸ್‌ಗೆ ಬರ್ತ್‌ಡೇ ವೇವ್ ಮಾಡಿಲ್ಲ ಶಾರೂಖ್

Published : Nov 03, 2021, 05:01 PM ISTUpdated : Nov 03, 2021, 05:09 PM IST

ಪ್ರತಿಬಾರಿ ಮನೆಯ ಟೆರೇಸ್‌ಗೆ ಬಂದು ಅಭಿಮಾನಿಗಳಿಗೆ ದರ್ಶನ ನೀಡೋ ನಟ ಈ ಬಾರಿ ಮಾತ್ರ ಶಾರೂಖ್(Shahrukh Khan) ಅಭಿಮಾನಿಗಳ ಭೇಟಿ ಇಲ್ಲ

PREV
16
Shah Rukh Khan: 10 ವರ್ಷದಲ್ಲಿ ಮೊದಲಬಾರಿ ಫ್ಯಾನ್ಸ್‌ಗೆ ಬರ್ತ್‌ಡೇ ವೇವ್ ಮಾಡಿಲ್ಲ ಶಾರೂಖ್

ಶಾರುಖ್ ಖಾನ್ ಸರಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನವೆಂಬರ್ 2 ಮಂಗಳವಾರ ಅವರು 56 ನೇ ವರ್ಷಕ್ಕೆ ಕಾಲಿಟ್ಟರು. ಪ್ರತಿ ವರ್ಷ ಮಾಡುತ್ತಿದ್ದ ಅವರ ಒಂದು ಪದ್ಧತಿಗೆ ಮಾತ್ರ ಈ ಬಾರಿ ಬ್ರೇಕ್ ಬಿದ್ದಿದೆ.

26

ಅವರು ತಮ್ಮ ಹುಟ್ಟುಹಬ್ಬದಂದು ಪ್ರತಿ ವರ್ಷ ಮನ್ನತ್‌ನ ಹೊರಗೆ ಸೇರುವ ಅವರ ಅಭಿಮಾನಿಗಳತ್ತ ಕೈ ಬೀಸಿ ಚಂದದ್ದೊಂದು ಸ್ಮೈಲ್ ಕೊಡುತ್ತಾರೆ. ಆದರೆ ಈ ಬಾರಿ ನಟ ತಮ್ಮ ಬಾಲ್ಕನಿಯಲ್ಲಿ ಹೆಜ್ಜೆ ಹಾಕಲಿಲ್ಲ. ಈ ಬಾರಿ ಎಲ್ಲವನ್ನೂ ಅವಾಯ್ಡ್ ಮಾಡಿದ್ದಾರೆ ನಟ.

36

ನವೆಂಬರ್ 2 ರಂದು ಶಾರುಖ್ ಖಾನ್ ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದರೆ ಈ ವರ್ಷ ಬರ್ತ್‌ಡೇ ಆಚರಣೆ ಅತ್ಯಂತ ಖಾಸಗಿ ಕಾರ್ಯಕ್ರಮವಾಗಿತ್ತು. ನಟ ಯಾರನ್ನೂ ಭೇಟಿ ಮಾಡಿಲ್ಲ.

46

ತನ್ನ ಹುಟ್ಟುಹಬ್ಬದಂದು ಶುಭಾಶಯ ಕೋರಲು ಕರೆ ಮಾಡಿದ ಸ್ನೇಹಿತರೊಂದಿಗೆ ಕೂಡಾ ಶಾರೂಖ್ ಮಾತನಾಡಲಿಲ್ಲ. ಅವರು ತಮ್ಮ ಮನೆಯ ಮನ್ನತ್‌ನ ಬಾಲ್ಕನಿಯಲ್ಲಿ ನಿಂತು ಹೊರಗೆ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಲಿಲ್ಲ.

56

ಪ್ರತಿ ವರ್ಷದಂತೆ, ಶಾರುಖ್ ಖಾನ್ ಅವರ ಸಾವಿರಾರು ಅಭಿಮಾನಿಗಳು ನಟನ ಹುಟ್ಟುಹಬ್ಬವನ್ನು ಅವರೊಂದಿಗೆ ಆಚರಿಸಲು ಮನ್ನತ್‌ಗೆ ಆಗಮಿಸಿದರು. ತಮ್ಮ ನೆಚ್ಚಿನ ನಟನ ದರ್ಶನಕ್ಕಾಗಿ ಅವರು ಉಡುಗೊರೆಗಳು ಮತ್ತು ಬ್ಯಾನರ್‌ಗಳೊಂದಿಗೆ ಕಾಯುತ್ತಿದ್ದರು.

66

ಆದರೆ ಈ ವರ್ಷ ಎಸ್‌ಆರ್‌ಕೆ ಹೊರಬರದ ಕಾರಣ ನಿರಾಸೆಯಿಂದ ಮರಳಬೇಕಾಯಿತು. ಮನ್ನತ್ ಹೊರಗೆ ಜನಸಂದಣಿಯನ್ನು ನಿಯಂತ್ರಿಸಲು ಮುಂಬೈ ಪೊಲೀಸರು ಭಾರೀ ಭದ್ರತೆಯನ್ನು ನಿಯೋಜಿಸಿದ್ದರು.

Read more Photos on
click me!

Recommended Stories