Saif Ali Khan ಮೊದಲ ಪತ್ನಿ ಪೋರ್ನ್ ಸೈಟ್ ನಡೆಸ್ತಾರಾ ? ಅಮ್ಮನ ಬಗ್ಗೆ ಸಾರಾ ಮಾತಿದು

Suvarna News   | Asianet News
Published : Nov 03, 2021, 01:07 PM ISTUpdated : Nov 03, 2021, 01:27 PM IST

ಬಾಲಿವುಡ್ ಟಾಪ್ ನಟ ಮಾತಾಡೋದೆಲ್ಲಾ ಬರೀ ಅಶ್ಲೀಲವಾ ? ನಟಿ ಅಮೃತಾ ಸಿಂಗ್(Amritha Singh)  ಪೋರ್ನ್ ಸೈಟ್(Porn Site) ನಡೆಸ್ತಾರಾ ? ಯಂಗ್ ನಟಿ ಸಾರಾ ಅಲಿ ಖಾನ್(Sara Ali Khan) ಹೇಳಿದ ವಿಚಾರಗಳಿವು

PREV
19
Saif Ali Khan ಮೊದಲ ಪತ್ನಿ ಪೋರ್ನ್ ಸೈಟ್ ನಡೆಸ್ತಾರಾ ? ಅಮ್ಮನ ಬಗ್ಗೆ ಸಾರಾ ಮಾತಿದು

ಬಾಲ್ಯದಲ್ಲಿ ತನ್ನ ತಂದೆ-ತಾಯಿ ನಟರಾದ ಸೈಫ್ ಅಲಿ ಖಾನ್(Saif Ali Khan) ಮತ್ತು ಅಮೃತಾ ಸಿಂಗ್(Amrita Singh) ಕೆಟ್ಟವರೆಂದೇ ಭಾವಿಸಿದ್ದೆ ಎಂದು ನಟಿ ಸಾರಾ ಅಲಿ ಖಾನ್ ಬಹಿರಂಗಪಡಿಸಿದ್ದಾರೆ. ಲೇಟೆಸ್ಟ್ ಸಂದರ್ಶನವೊಂದರಲ್ಲಿ, ಸಾರಾ ಅವರು ಈ ಬಗ್ಗೆ ರಿವೀಲ್ ಮಾಡಿದ್ದಾರೆ.

29

ಓಂಕಾರದಲ್ಲಿ ಸೈಫ್ ಮತ್ತು ಕಲಿಯುಗ್‌ನಲ್ಲಿ ಅಮೃತಾ ಅವರನ್ನು ನೋಡಿದ ನಂತರ, 'ತಂದೆ ಕೆಟ್ಟ ಭಾಷೆ ಬಳಸುತ್ತಾರೆ. ತಾಯಿ ಪೋರ್ನ್ ಸೈಟ್ ನಡೆಸುತ್ತಾರೆ ಎಂದು ಭಾವಿಸಿದ್ದೆ ಎಂದಿದ್ದಾರೆ ಸಾರಾ.

39

ಸೈಫ್ ಅಲಿ ಖಾನ್ ಓಂಕಾರದಲ್ಲಿ (2006) ಈಶ್ವರ್ 'ಲಂಗ್ಡಾ' ತ್ಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ಕೊಂಕಣ ಸೇನ್ ಶರ್ಮಾ ಮತ್ತು ವಿವೇಕ್ ಒಬೆರಾಯ್ ಕೂಡ ನಟಿಸಿದ್ದಾರೆ.

49

ಕಲಿಯುಗ್ (2005) ಒಂದು ಆಕ್ಷನ್ ಥ್ರಿಲ್ಲರ್ ಆಗಿದ್ದು, ಕುನಾಲ್ ಕೆಮ್ಮು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಮೃತಾ ಸಿಂಗ್ ಮಾತ್ರವಲ್ಲದೆ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಸ್ಮೈಲಿ ಸೂರಿ ಮತ್ತು ಅಶುತೋಷ್ ರಾಣಾ ಕೂಡ ನಟಿಸಿದ್ದಾರೆ.

59

ಸಾರಾ ಅಲಿ ಖಾನ್ ಬಾಲ್ಯದಲ್ಲಿ ತನ್ನ ಸಿನಿಮಾ ಆಧಾರಿತ ನೆನಪುಗಳ ಬಗ್ಗೆ ಮಾತನಾಡುತ್ತಾ, ನನಗೆ ನೆನಪಿರುವುದು ಓಂಕಾರ (2006) ಮತ್ತು ಕಲಿಯುಗ್ (2005) ಮತ್ತು ನನ್ನ ಹೆತ್ತವರು ಅಂತಹ ಕೆಟ್ಟ ವ್ಯಕ್ತಿಗಳಾಗಿರುವುದರಿಂದ ನಿಜವಾಗಿಯೂ ನಾನು ವಿಚಲಿತಳಾಗಿದ್ದೆ ಎಂದಿದ್ದಾರೆ.

69

ನಾನು ತುಂಬಾ ಚಿಕ್ಕವಳಾಗಿದ್ದೆ. ನನ್ನ ತಂದೆ ಕೆಟ್ಟ ಭಾಷೆಯನ್ನು ಬಳಸುತ್ತಾರೆ. ನನ್ನ ತಾಯಿ ಅಶ್ಲೀಲ ಸೈಟ್(Porn Site) ನಡೆಸುತ್ತಾರೆ ಎಂದು ನಾನು ಭಾವಿಸುತ್ತಿದ್ದೆ. ಅದು ತಮಾಷೆಯಾಗಿರಲಿಲ್ಲ! ಅವರಿಬ್ಬರೂ ನೆಗೆಟಿವ್ ಪಾತ್ರದಲ್ಲಿ ಅತ್ಯುತ್ತಮ ನಟ, ನಟಿ ಎಂದು ನಾಮನಿರ್ದೇಶನಗೊಂಡಿದ್ದರಿಂದ ನಾನು ಇದೇನು ಎಂದು ಚಿಂತಿಸುವಂತಾಯಿತು ಎಂದಿದ್ದಾರೆ.

79

ಸೈಫ್ ಮತ್ತು ಅಮೃತಾ ಅವರು 2004 ರಲ್ಲಿ ಬೇರ್ಪಡುವ ಮೊದಲು 10 ವರ್ಷಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನದಲ್ಲಿ ಒಂದಾಗಿದ್ದರು. ಅವರಿಗೆ ಸಾರಾ ಮತ್ತು ಇಬ್ರಾಹಿಂ ಅಲಿ ಖಾನ್‌ ಇಬ್ಬರು ಮಕ್ಕಳಿದ್ದಾರೆ.

89

ಸಾರಾ ಅಲಿ ಖಾನ್ 2018 ರಲ್ಲಿ ಅಭಿಷೇಕ್ ಕಪೂರ್ ಅವರ ಕೇದಾರನಾಥ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಸಿಂಬಾ, ಲವ್ ಆಜ್ ಕಲ್ 2 ಮತ್ತು ಕೂಲಿ ನಂ. 1 ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

99

ಅವರು ಆನಂದ್ ಎಲ್ ರೈ ನಿರ್ದೇಶನದ ಅತ್ರಾಂಗಿ ರೇ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories