Padma Shri Award: ಕ್ವೀನ್ ಕಂಗನಾ, ಕರಣ್ ಜೋಹರ್‌ಗೆ ಪದ್ಮಶ್ರೀ ಪ್ರಶಸ್ತಿ

Published : Nov 03, 2021, 03:14 PM ISTUpdated : Nov 03, 2021, 03:32 PM IST

ಬಾಲಿವುಡ್ ಕ್ವೀನ್(Queen) ಕಂಗನಾ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಪದ್ಮಶ್ರೀ ಪ್ರಶಸ್ತಿ(Padma Shri Award) ಸ್ವೀಕರಿಸಲಿದ್ದಾರೆ ಕಂಗನಾ ರಣಾವತ್(Kangana Ranaut)

PREV
16
Padma Shri Award: ಕ್ವೀನ್ ಕಂಗನಾ, ಕರಣ್ ಜೋಹರ್‌ಗೆ ಪದ್ಮಶ್ರೀ ಪ್ರಶಸ್ತಿ

ಜನವರಿ 26, 2020 ರಂದು, ಏಕ್ತಾ ಕಪೂರ್, ಕರಣ್ ಜೋಹರ್ ಮತ್ತು ಕಂಗನಾ ರಣಾವತ್ ಅವರಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು(Padma Shri Award) ಘೋಷಿಸಲಾಗಿತ್ತು.

26

ಪ್ರದರ್ಶನ ಕಲೆ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಮೂವರು ಸೆಲೆಬ್ರಿಟಿಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ನವೆಂಬರ್ 8 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ತಮ್ಮ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

36

ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ಕಂಗನಾ ರನೌತ್ ಶೀಘ್ರದಲ್ಲೇ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಪ್ರಯಾಣಿಸಲಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು ಈಗಾಗಲೇ ವಿಜೇತರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ.

46

ಏಕ್ತಾ ಕಪೂರ್ ಅವರ ತಂದೆ, ಹಿರಿಯ ನಟ ಜೀತೇಂದ್ರ ಕೂಡ ತಮ್ಮ ಮಗಳೊಂದಿಗೆ ದೆಹಲಿಗೆ ಪ್ರಯಾಣಿಸಲಿದ್ದಾರೆ. ಅವರು ಮಗಳು ಪ್ರಶಸ್ತಿ ಸ್ವೀಕರಿಸುವ ಪ್ರತಿಷ್ಠಿತ ಕ್ಷಣವನ್ನು ಲೈವ್ ಆಗಿ ವೀಕ್ಷಿಸಲು ಬಯಸುತ್ತಾರೆ. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆ ಪೂರ್ಣಗೊಂಡಿವೆ ಎನ್ನಲಾಗಿದೆ.

56

ಪದ್ಮಶ್ರೀ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್(Kangana Ranaut) 2020 ರಲ್ಲಿ, ನಾನು ವಿನಮ್ರಳಾಗಿದ್ದೇನೆ. ಇದು ದೊಡ್ಡ ಗೌರವ. ಈ ಗುರುತಿಸುವಿಕೆಗಾಗಿ ನಾನು ನನ್ನ ದೇಶಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದರು.

66

ಕನಸು ಕಾಣಲು ಧೈರ್ಯವಿರುವ ಪ್ರತಿಯೊಬ್ಬ ಮಹಿಳೆಗೆ ನಾನು ಇದನ್ನು ಅರ್ಪಿಸುತ್ತೇನೆ. ಪ್ರತಿ ಹೆಣ್ಣು ಮಗಳಿಗೂ, ಪ್ರತಿ ತಾಯಿಗೆ ಮತ್ತು ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಮಹಿಳೆಯರ ಕನಸುಗಳಿಗೆ ಇದನ್ನು ಅರ್ಪಿಸುತ್ತೇನೆ ಎಂದಿದ್ದರು ನಟಿ.

Read more Photos on
click me!

Recommended Stories