ಮೈಸೂರು ಸಿಲ್ಕ್‌ ರೇಶ್ಮೆ ಸೀರೆ ಗೊತ್ತಿಲ್ವಾ?; ಮೈ ಕಾಣುವ ಸೀರೆ ಧರಿಸಿದ್ದಕ್ಕೆ ಸುಹಾನಾ ಖಾನ್‌ ವಿರುದ್ಧ ನೆಟ್ಟಿಗರು ಗರಂ

First Published | Apr 5, 2023, 12:46 PM IST

ಡಿಸೈನರ್‌ ಸೀರೆ ಧರಿಸಿದ್ದರೂ ಸೊಳ್ಳೆ ಪರದೆ ಎಂದು ಶಾರುಖ್ ಖಾನ್ ಪುತ್ರಿ ಕಾಲೆಳೆದ  ನೆಟ್ಟಿಗರು..ಹೇಗಿದೆ ಸೀರೆ ಲುಕ್‌ ನೋಡಿ..... 

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಮತ್ತು ಡಿಸೈನರ್ ಗೌರಿ ಖಾನ್ ಮುದ್ದಿನ ಪುತ್ರಿ ಸುಹಾನಾ ಖಾನ್ ಸದ್ಯ ಬಿ-ಟೌನ್ ಬೇಡಿಕೆಯ ನಟಿ.

ಕೆಲವು ದಿನಗಳ ಹಿಂದೆ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಸುಹಾನಾ ಸೀರೆ ಧರಿಸಿ ಮಿಂಚುತ್ತಿದ್ದರು.

Tap to resize

ಡಾರ್ಕ್‌ ಆಂಡ್ ಲೈಟ್ ಬ್ರೌನ್ ಬಣ್ಣದ ಸೀರೆಯಲ್ಲಿ ಸುಹಾನಾ ಕಾಣಿಸಿಕೊಂಡಿದ್ದಾರೆ. ಸಬ್ಯಸಾಚಿ ಡಿಸೈನ್ ಇದಾಗಿದ್ದು ಹ್ಯಾಂಡ್‌ ಮೇಡ್‌ ವರ್ಕ್‌ಗಳಿದೆ. 

ಸಾಂಸ್ಕೃತಿಕ ಕೇಂದ್ರ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಉಡುಪು ಧರಿಸಬೇಕು ನಿಜ ಆದರೆ ಮೈ ಕಾಣುವಂತೆ ಧರಿಸಿ ನಮ್ಮ ಬೆಲೆ ನಾವೇ ಕಡಿಮೆ ಮಾಡಿಕೊಳ್ಳಬಾರದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Suhana Kha

ಮೈಸೂರು ಸಿಲ್ಕ್‌ ಅಥವಾ ರೇಶ್ಮೆ ಸೀರೆ ಧರಿಸಿದರೆ ನೀವು ನೋಡಲು ಸೂಪರ್ ಅಗಿರುತ್ತಿದ್ರೆ ಸುಲಭವಾಗಿ ಸೌತ್ ಸಿನಿಮಾ ರಸಿಕರ ಗಮನ ಸೆಳೆಯಬಹುದಿತ್ತು ಎಂದು ಸಲಹೆ ಕೂಡ ಕೊಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸುಹಾನಾ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಖಾನ್ ಕುಟುಂಬವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಸುಹಾನಾ ಎಲ್ಲೇ ಹೋದರೂ ಪ್ಯಾಪರಾಜಿಗಳನ್ನು ನೋಡಬಹುದು. 

Latest Videos

click me!