ಶಾರುಖ್‌ ಈ ಕೆಲಸಕ್ಕೆ ನಟನನ್ನು ಹೃದಯಗಳ ರಾಜ ಎಂದ ಕೊಂಡಾಡಿದ ಫ್ಯಾನ್ಸ್‌

First Published Apr 9, 2023, 9:31 PM IST

ಶಾರುಖ್ ಖಾನ್ (Shah Rukh Khan) ಇತ್ತೀಚೆಗೆ ತಮ್ಮ ತಂಡ KKR ಗಾಗಿ IPL ಪಂದ್ಯಕ್ಕಾಗಿ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಕಿಂಗ್ ಖಾನ್ ಇಲ್ಲಿ ತಮ್ಮ ಮೀರ್ ಫೌಂಡೇಶನ್‌ನೊಂದಿಗೆ ಕೆಲಸ ಮಾಡುತ್ತಿರುವ ಕೆಲವು ಆಸಿಡ್ ದಾಳಿಯಿಂದ ಬದುಕುಳಿದವರನ್ನು ಭೇಟಿಯಾದರು. ಅಭಿಮಾನಿಗಳು ಕಿಂಗ್ ಖಾನ್ ಅವರ ಈ ಕೆಲಸಕ್ಕೆ ಫುಲ್‌ ಫಿದಾ ಆಗಿದ್ದಾರೆ . ಈ ಸಮಯದ ಫೋಟೋ ಗಳನ್ನು  nzsrkuniverse  ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. 

ಆಸಿಡ್ ದಾಳಿಯಿಂದ ಬದುಕುಳಿದವರನ್ನು ಭೇಟಿ ಮಾಡಿ ಶಾರುಖ್ ಖಾನ್ ಆಸಿಡ್ ದಾಳಿಯಿಂದ ಬದುಕುಳಿದವರ ಜೊತೆ ಗ್ರೂಪ್ ಫೋಟೋಗಳನ್ನು ಕ್ಲಿಕ್ಕಿಸಿದರು, ಅವರು ಅವರೊಂದಿಗೆ ದೀರ್ಘಕಾಲ ಸಂವಹನ ನಡೆಸುತ್ತಿದ್ದರು.

ಈ ಸಮಯದಲ್ಲಿ ಬಾಲಿವುಡ್‌ನ ಕಿಂಗ್ ಖಾನ್ ಬೂದು ಬಣ್ಣದ ಶರ್ಟ್ ಮತ್ತು ನೀಲಿ ಡೆನಿಮ್ ಜೀನ್ಸ್‌ನಲ್ಲಿ  ಸಖತ್‌  ಹ್ಯಾಂಡ್ಸಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸಮಯ ಕಳೆದ , ಆಸಿಡ್ ದಾಳಿಯಿಂದ ಬದುಕುಳಿದವರೂ ತುಂಬಾ ಸಂತೋಷಪಟ್ಟರು.

Latest Videos


ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಸಹಾಯ ಮಾಡಿದೆ. ಈ ಸಂಸ್ಥೆಯು ಬಡವರ ಸಹಾಯಕ್ಕಾಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ಶಾರುಖ್ ಅಭಿಮಾನಿಗಳು ಅವರ ಈ ಕೆಲಸಕ್ಕೆ  ಹೊಗಳಿದ್ದಾರೆ.

SRK ಮತ್ತು ಅವರ ಮೀರ್ ಫೌಂಡೇಶನ್ ಅನೇಕ ಸುಟ್ಟಗಾಯ ಮತ್ತು ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಚಿಕಿತ್ಸೆ ನೀಡಿದೆ. ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಶಾರುಖ್‌ ಮತ್ತು ಅವರ ಸಂಸ್ಥೆ ಭರಿಸಿದೆ

ಆಸಿಡ್ ದಾಳಿಯಿಂದ ಬದುಕುಳಿದವರು ಶಾರುಖ್ ಖಾನ್ ಅವರ ಐಪಿಎಲ್ ತಂಡ ಕೆಕೆಆರ್‌ಗೆ ತಮ್ಮ ಬೆಂಬಲವನ್ನು ನೀಡಿದರು.  ಅವರುಗಳು ಪಂದ್ಯದ ವೇಳೆಯಲ್ಲಿ ತಂಡವನ್ನು ಹುರಿದುಂಬಿಸುವುದು ಕಂಡುಬಂದಿತು

ಶಾರುಖ್ ಖಾನ್ ಆಸಿಡ್ ದಾಳಿಯ ಘಟನೆಗಳನ್ನು ತಡೆಯಲು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಇವರ ಮೀರ್ ಫೌಂಡೇಶನ್ ಸಹ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

ಮೀರ್ ಫೌಂಡೇಶನ್ ಶಾರುಖ್ ಖಾನ್ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹೆಸರಿನ ಸಾಮಾಜಿಕ ಪ್ರತಿಷ್ಠಾನವಾಗಿದ್ದು, ಇದು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ. ಇತ್ತೀಚೆಗೆ ಈ ಪ್ರತಿಷ್ಠಾನವು ದೆಹಲಿ ಅಪಘಾತದಲ್ಲಿ ಬಲಿಯಾದ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಸಹಾಯ ಮಾಡಿದೆ.

'ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಿದೆ. 20 ವರ್ಷದ ಅಂಜಲಿ ದೆಹಲಿಯ ಕಂಜಾವಾಲಾದಲ್ಲಿ ಹಿಟ್ ಅಂಡ್ ರನ್‌ನಲ್ಲಿ ಸಾವನ್ನಪ್ಪಿದರು. ಅಂಜಲಿಯ ದೇಹವು ಹಲವಾರು ಕಿಲೋಮೀಟರ್‌ಗಳಷ್ಟು ಹರಡಿತ್ತು, ಈ ಸಮಯದಲ್ಲಿ ಅಂಜಲಿಯ ದೇಹವು ವಿರೂಪಗೊಂಡು  ಕಾರಿನಲ್ಲಿ ಸಿಲುಕಿಕೊಂಡಿತ್ತು' ಎಂದು ಮೀರ್ ಫೌಂಡೇಶನ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.  

click me!