ಪ್ರಿಯಾಂಕಾ ಚೋಪ್ರಾ ಅಮೆರಿಕಾದ ನಿಕ್ ಜೋನಸ್ ಅವರನ್ನು ಮದುವೆಯಾಗಿ ಅಲ್ಲೇ ವಾಸವಿದ್ದರೂ ಭಾರತದ ಸಂಸ್ಕೃತಿ ಮರೆತಿಲ್ಲ. ಪ್ರತಿ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ. ಭಾರತಕ್ಕೆ ಬಂದಾಗಲೂ ವಿನಾಯಕನ ದರ್ಶನ ಮಾಡಿ ಆಶೀರ್ವಾದ ಪಡೆಯುವುದನ್ನು ಮರೆತಿಲ್ಲ. ಪ್ರಿಯಾಂಕಾ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ.