ಯಶಸ್ಸಿಗೆ ಕೇವಲ ಅಂಕಗಳೇ ಮಾನದಂಡವಲ್ಲ, ಅದೃಷ್ಟ ಮತ್ತು ಪ್ರಯತ್ನವೂ ಮುಖ್ಯ. ಈ ಲೇಖನವು ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಸೇರಿದಂತೆ ಹಲವು ಬಾಲಿವುಡ್ ತಾರೆಯರ ಪಿಯುಸಿ ಅಂಕಗಳು ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ವಿವರಿಸುತ್ತದೆ.
ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಉತ್ತಮ ಅಂಕನೇ ಪಡೆಯಬೇಕೆಂದೇನೂ ಇಲ್ಲ. ಅದೃಷ್ಟ ಇದ್ದರೆ ಪ್ರಯತ್ನವೂ ಜೊತೆಗಿದ್ದರೆ ಕೆಲವರಿಗೆ ಯಶಸ್ಸು ಒಲಿದುಬಿಡುತ್ತದೆ. ಅದರಲ್ಲಿಯೂ ಸ್ಟಾರ್ ನಟರಾದವರ ಮಾರ್ಕ್ಸ್ ಕಾರ್ಡ್ ನೋಡಿದರೆ ಇದು ತಿಳಿಯುತ್ತದೆ. ಇಲ್ಲಿ ಕೆಲವೊಂದು ಬಾಲಿವುಡ್ ಸ್ಟಾರ್ಸ್ ಪಿಯುಸಿ ಮಾರ್ಕ್ಸ್ ತಿಳಿಸಲಾಗಿದೆ. ಶಾರುಖ್, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ ಎಷ್ಟು ಮಾರ್ಕ್ಸ್ ತೆಗೆದಿದ್ದಾರೆ ನೋಡಿ.
28
ಶಾರುಖ್ ಖಾನ್ (Shah Rukh Khan)
ಶಾರುಖ್ ಅವರು ಹನ್ಸ್ ರಾಜ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಗೂ ಹಾಜರಾಗಿದ್ದರೂ ಪದವಿಯನ್ನು ಪೂರ್ಣಗೊಳಿಸಲಿಲ್ಲ. ಸಿನಿಮಾ ರಂಗಕ್ಕೆ ಧುಮುಕಿದ್ದರಿಂದ ಕಾಲೇಜಿನಿಂದ ಹೊರಗುಳಿದರು. ಅವರ ಕಾಲೇಜು ದಿನಗಳಲ್ಲಿಯೂ ಅವರು ತಮ್ಮ ಹೆಚ್ಚಿನ ಸಮಯವನ್ನು ಚಿತ್ರಮಂದಿರಗಳಲ್ಲಿ ಕಳೆಯುತ್ತಿದ್ದರು. ಇದರ ಹೊರತಾಗಿಯೂ ಶಾರುಖ್ ಖಾನ್ 12 ನೇ ತರಗತಿಯಲ್ಲಿ ಶೇಕಡಾ 80.5 ಅಂಕಗಳನ್ನು ಗಳಿಸಿದ್ದರು. ಅಂದಿನ ದಿನಗಳಲ್ಲಿ 80ರ ಮೇಲೆ ಅಂಕ ತೆಗೆಯುವುದು ಬಹುದೊಡ್ಡ ಸಾಧನೆಯೇ ಆಗಿತ್ತು. ಸೆಂಟ್ರಲ್ ದೆಹಲಿಯಲ್ಲಿರುವ ಸೇಂಟ್ ಕೊಲಂಬಿಯಾ ಶಾಲೆಯಲ್ಲಿ ಓದಿರೋ ಅವರು, 12 ನೇ ತರಗತಿಯಲ್ಲಿ ಶೇಕಡಾ 80.5 ಅಂಕಗಳನ್ನು ಗಳಿಸಿದ್ದರು.
38
ದೀಪಿಕಾ ಪಡುಕೋಣೆ (Deepika Padukone)
ನಟಿ ದೀಪಿಕಾ ಪಡುಕೋಣೆ 12ನೇ ತರಗತಿ ಪಾಸ್ ಮಾಡಿದ್ದಾರೆ. ಅವರು ತಮ್ಮ ಬೋರ್ಡ್ ಫಲಿತಾಂಶ ಅಥವಾ ಮಾರ್ಕ್‌ಶೀಟ್ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲ. ಕೆಲ ತಿಂಗಳುಗಳ ಹಿಂದೆ ಈ ಬಗ್ಗೆ ಖುದ್ದು ದೀಪಿಕಾ ಹೇಳಿಕೊಂಡಿದ್ದರು. ಯಶಸ್ಸಿಗೆ ಬೇಕಾಗಿರುವುದು ಕಠಿಣ ಪರಿಶ್ರಮ ಮತ್ತು ಶಿಸ್ತು ಎಂದಿರುವ ದೀಪಿಕಾ, ತಾವು ಹೆಚ್ಚಿನ ಶಿಕ್ಷಣ ಕಲಿಯಲು ಏಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. 'ಯಶಸ್ಸನ್ನು ಅರಸಲು ನಾನು ನನ್ನ ಕುಟುಂಬದಿಂದ ದೂರವಿದ್ದೆ. 12ನೇ ಕ್ಲಾಸ್ ಪಾಸ್ ಆದ ತಕ್ಷಣವೇ ಕನಸಿನ ಬೆನ್ನಟ್ಟಿದೆ. ಹಾಗಾಗಿ ಔಪಚಾರಿಕ ಶಿಕ್ಷಣವನ್ನು ನನ್ನಿಂದ ಪೂರ್ಣಗೊಳಿಸಲು ಆಗಲಿಲ್ಲ ಎಂದಿದ್ದರು. ಆದ್ದರಿಂದ ಅಂಕಗಳ ಬಗ್ಗೆ ಅವರು ಮಾತನಾಡಲಿಲ್ಲ.
ಇತ್ತೀಚೆಗೆ ಶ್ರದ್ಧಾ ತಮ್ಮ ಶಿಕ್ಷಣದ ಬಗ್ಗೆ ಹೇಳಿಕೊಂಡಿದ್ದರು. 'ಆರಂಭದಲ್ಲಿ ಶಿಕ್ಷಣ ಮುಗಿಸಿ ನಟನೆ ಆರಂಭಿಸಬೇಕು ಎಂದು ಭಾವಿಸಿದೆ. ಆದರೆ ಅಚಾನಕ್ ಆಗಿ ನಾನು ಸಿನಿಮಾಗಳಿಗೆ ಅಡಿಯಿಡಬೇಕಾಯಿತು. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಮ್ಮೆ ಭಾರತಕ್ಕೆ ಬಂದೆ. ತುಂಬಾ ಆಫರ್ಸ್ ಬಂದವು. ಸಿನಿಮಾಗಳಲ್ಲಿ ನಟಿಸಲು ಅಲ್ಲ. ಆಡಿಷನ್ಸ್ ನೀಡಲು. ಆಗ ನಾನು ಆದಷ್ಟು ಬೇಗ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಬೇಕಾಗಿತ್ತು. ಹಾಗಾಗಿ ಶಿಕ್ಷಣಕ್ಕೆ ಗುಡ್ ಬೈ ಹೇಳಿ ನಟಿಯಾದೆ. ಜೀವನದಲ್ಲಿ ನಮ್ಮ ಮನಸ್ಸಿಗೆ ಇಷ್ಟವಾದದ್ದನ್ನು ಮಾಡಿದರೆ ಸಂತೋಷವಾಗಿ ಇರುತ್ತೇವೆ ಅಲ್ಲವೇ' ಎಂದಿದ್ದರು. ಇಂಥ ನಟಿ, ಮುಂಬೈನ ಜಮ್ನಾಬಾಯಿ ನರ್ಸೀ ಶಾಲೆ ಮತ್ತು ಅಮೇರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ಅಧ್ಯಯನ ಮಾಡಿದ್ದರು. ಅವರು ಅಂತರರಾಷ್ಟ್ರೀಯ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಅವರು 40 ರಲ್ಲಿ 32 ಅಂಕಗಳನ್ನು ಪಡೆದರು. ಇದು CBSE ಪ್ರಕಾರ 85-90 ಶೇಕಡಾಗೆ ಸಮಾನ ಎನ್ನಲಾಗಿದೆ.
58
ಆಲಿಯಾ ಭಟ್ (Alia Bhat)
ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಇಯರ್ (2012) ನಲ್ಲಿ ನಟನೆಯ ಪ್ರಸ್ತಾಪವನ್ನು ಪಡೆದ ಕಾರಣ 12 ನೇ ತರಗತಿಯನ್ನು ಮುಂದುವರಿಸಲಿಲ್ಲ. “ನಾನು ನನ್ನ 12 ನೇ ತರಗತಿಯನ್ನು ಮುಗಿಸಬೇಕು ಎಂದುಕೊಂಡಿದ್ದೆ.ಆದರೆ ಮುಗಿಸಲು ಆಗಲೇ ಇಲ್ಲ ಎಂದಿದ್ದರು. ಅದರಂತೆ, ಕರಿಷ್ಮಾ ಕಪೂರ್, ಅರ್ಜುನ್ ಕಪೂರ್, ಕಂಗನಾ ರಣಾವತ್ ಮುಂತಾದ ಅನೇಕ ತಾರೆಯರು ಶಾಲೆಗಳನ್ನು ತೊರೆದು ನಟನೆಗೆ ಪ್ರವೇಶಿಸಿದರು. ಕತ್ರಿನಾ ಕೈಫ್ ಯಾವತ್ತೂ ಶಾಲೆಗೆ ಹೋಗಿರಲಿಲ್ಲ ಮತ್ತು ಮನೆಯಲ್ಲಿ ಟ್ಯೂಷನ್ ಮಾಡುತ್ತಿದ್ದರು ಎಂದು ಇಂಡಿಯಾ ಟಿವಿ ವರದಿ ಮಾಡಿದೆ.
68
ಪರಿಣಿತಿ ಚೋಪ್ರಾ ( Parineeti Chopra)
ಪರಿಣಿತಿ ಚೋಪ್ರಾ ಹರಿಯಾಣದ ಕಾನ್ವೆಂಟ್ ಆಫ್ ಜೀಸಸ್ ಮತ್ತು ಮೇರಿಯಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು, ಅವರು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು ಮತ್ತು ಇಂಗ್ಲೆಂಡ್‌ನಲ್ಲಿ ಪದವಿ ಪಡೆದರು. ಅವರು ಮ್ಯಾಂಚೆಸ್ಟರ್ ಬಿಸಿನೆಸ್ ಸ್ಕೂಲ್‌ನಲ್ಲಿ ವ್ಯಾಪಾರ, ಹಣಕಾಸು ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಟ್ರಿಪಲ್ ಆನರ್ಸ್ ಪದವಿಯೊಂದಿಗೆ ಪದವಿ ಪಡೆದರು. ಅವರು ದ್ವಿತೀಯ ಪಿಯುಸಿಯಲ್ಲಿ ಆಲ್ ಇಂಡಿಯಾ ಟಾಪರ್ಸ್ ಆಫ್ ಎಕನಾಮಿಕ್ಸ್‌ನಲ್ಲಿ ಸೇರ್ಪಡೆಗೊಂಡಿದ್ದರು. ಅದರಲ್ಲಿ 97 ರಷ್ಟು ಅಂಕಗಳನ್ನು ಪಡೆದಿದ್ದರು.
78
ಊರ್ವಶಿ ರೌಟೇಲಾ (Urvashi Rautela)
ಊರ್ವಶಿ ರೌಟೇಲಾ ಅವರು ಕೋಟ್‌ದ್ವಾರದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ. 2015 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು ಕೂಡ ಕಾಲೇಜಿನ ದಿನಗಳಲ್ಲಿ ಹೆಚ್ಚು ಅಂಕ ಗಳಿಸಿದ ನಟಿ. 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 97 ಅಂಕಗಳನ್ನು ಗಳಿಸಿದರು. ಅವರು ತನ್ನ ಶಾಲೆಯ ಟಾಪರ್ ಆಗಿದ್ದರು. ಪರೀಕ್ಷೆಗಳಲ್ಲಿ 100 ಪ್ರತಿಶತ ಅಂಕಗಳನ್ನು ಗಳಿಸಲು ಬಯಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
88
ಸುಶಾಂತ್ ಸಿಂಗ್ (Sushanth Singh)
ನಟ ಆರ್ ಮಾಧವನ್ 12 ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ 58 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಮಾಧವನ್ ಅವರು 2020 ರಲ್ಲಿ ಟ್ವಿಟರ್‌ನಲ್ಲಿ ತಮ್ಮ ಶೇಕಡಾವಾರು ಬಗ್ಗೆ ಟ್ವೀಟ್ ಮಾಡಿದ್ದಾರೆ, ಆಗ ಫಲಿತಾಂಶದ ನಂತರ ನಿರಾಶೆಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ಟಿಪ್ಪಣಿ ಬರೆಯುತ್ತಿದ್ದರು. ಲೆಜೆಂಡ್ ಆಫ್ ಭಗತ್ ಸಿಂಗ್ ನಟ ಸುಶಾಂತ್ ಸಿಂಗ್ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 74.5 ಶೇಕಡಾವನ್ನು ಗಳಿಸಿದ್ದರು. ಸುಶಾಂತ್ ಅವರು ದೆಹಲಿ ವಿಶ್ವವಿದ್ಯಾಲಯದ ಕಿರೋರಿಮಲ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಕೋರ್ಸ್‌ನ ಪ್ರವೇಶ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದರು. ಕೆಎಂಸಿಯಿಂದ ಎರಡನೇ ವಿಭಾಗದಲ್ಲಿ ಪದವಿ ಪಡೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.