ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗ ದೋಷ ನಿವಾರಣೆಗೆ ಸರ್ಪಸಂಸ್ಕಾರ ಪೂಜೆ ಸಲ್ಲಿಸಿದ್ದರು. Sarpa Samskara in Kukke Katrina Kaif Vicky expecting first child.
ಬಾಲಿವುಡ್‌ನಲ್ಲಿ ಸಕತ್ ಹಿಟ್ ಚಿತ್ರಗಳನ್ನು ನೀಡುತ್ತಾ, ಇದೀಗ ಸಾಂಸಾರಿಕ ಜೀವನ ಸಾಗಿಸುತ್ತಿರುವ ನಟಿಯರಲ್ಲಿ ಒಬ್ಬರು ಕತ್ರಿನಾ ಕೈಫ್. 2021 ರಲ್ಲಿ ಇವರ ಮದುವೆಯಾಗಿದೆ. ಕಳೆದ ಜುಲೈ 16ರಂದು ಕತ್ರಿನಾ ತಮ್ಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 'ಮೆರ್ರಿ ಕ್ರಿಸ್‌ಮಸ್' ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ನಟಿ ಗರ್ಭಿಣಿಯಾಗಿದ್ದು, ಅದಕ್ಕಾಗಿಯೇ ಅವರು ಚಿತ್ರಗಳಿಗೆ ಗ್ಯಾಪ್ ನೀಡಿದ್ದಾರೆ ಎಂದು ಹೇಳಲಾಗಿತ್ತು. ಮದುವೆಯಾಗಿ ನಾಲ್ಕು ವರ್ಷವಾದರೂ ಮಕ್ಕಳಾಗಿರದ ಕಾರಣದಿಂದ ಅವರು ಈಗ ಗುಡ್ನ್ಯೂಸ್ ಕೊಡುತ್ತಿದ್ದಾರೆ ಎಂದೇ ಸುದ್ದಿಯಾಗಿತ್ತು.
27
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ
ಆದರೆ, ಅದು ಇಲ್ಲಿಯವರೆಗೆ ಸಾಧ್ಯವಾಗಿರಲಿಲ್ಲ. ಇದೇ ವರ್ಷದ ಆರಂಭದಲ್ಲಿ ಈ ದಂಪತಿ (Katrina Kaif and Vicky Kaushal) ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟು ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆಯನ್ನು ಮಾಡಿಸಿದ್ದರು. ನಾಗ ದೋಷಗಳನ್ನು ನಿವಾರಿಸಲು ಮಾಡಲಾಗುತ್ತದೆ. ಸರ್ಪವನ್ನು ಕೊಲ್ಲುವುದರಿಂದ ಉಂಟಾಗುವ ಪಾಪ ನಿವಾರಣೆಗಾಗಿ ಈ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಈ ದೋಷವಿದ್ದರೆ ಉಂಟಾಗುವ ಹಲವು ಸಮಸ್ಯೆಗಳಲ್ಲಿ ಮಕ್ಕಳಾಗದೇ ಇರುವುದು ಒಂದು ಎಂದು ಹೇಳಲಾಗುತ್ತದೆ.
37
ಮೊದಲ ಮಗುವಿನ ನಿರೀಕ್ಷೆಯಲ್ಲಿ
ಇದೇ ಕಾರಣಕ್ಕೆ, ದಂಪತಿ ಅಲ್ಲಿಗೆ ಹೋಗಿದ್ದರು ಎಂದು ಹೇಳಲಾಗಿತ್ತು. ಇದಾಗಲೇ ಆರೇಳು ತಿಂಗಳು ಕಳೆದಿದೆ. ಇದೀಗ ಕತ್ರಿನಾ ಕೈಫ್ ಮತ್ತು ವಿಕ್ಕಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ. ನಟಿಗೆ ಇದಾಗಲೇ 6-7 ತಿಂಗಳಾಗಿದ್ದು ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ ಮಗು ಹುಟ್ಟಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೆ ಅಧಿಕೃತವಾಗಿ ಯಾವುದೇ ವಿಷಯ ಹೊರಬಂದಿಲ್ಲ.
ಅಂದಹಾಗೆ, ಕತ್ರಿನಾ ಮತ್ತು ರಣಬೀರ್ ಕಪೂರ್ ಆರೇಳು ವರ್ಷ ಒಟ್ಟಿಗೇ ಇದ್ದವರು. ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣಬೀರ್ ಮತ್ತು ಕತ್ರಿನಾ ಹಲವು ವರ್ಷ ತಮ್ಮ ರಿಲೇಷನ್‌ಶಿಪ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ವಿದೇಶದ ರೆಸಾರ್ಟ್‌ವೊಂದರಲ್ಲಿ ಹಾಲಿಡೇ ಕಳೆಯುತ್ತಿರುವಾಗ ದೊರೆತ ಫೋಟೊಗಳಿಂದ ಇವರಿಬ್ಬರ ನಡುವಿನ ಅಫೇರ್ ಬೆಳಕಿಗೆ ಬಂದಿತ್ತು. ಜತೆಗೆ ರಣಬೀರ್ ತಂದೆ ರಿಷಿ ಕಪೂರ್‌ಗೆ ಕತ್ರಿನಾ ಇಷ್ಟವಾಗಿರಲಿಲ್ಲ. ಮುಂಬೈನಲ್ಲಿರುವ ತಮ್ಮ ಬಂಗಲೆಗೆ ಕತ್ರಿನಾ ಅವರಿಗೆ ಎಂಟ್ರಿ ಕೊಟ್ಟಿರಲಿಲ್ಲ.
57
ಬೇರೆ ಬೇರೆ ಮದುವೆ
ಇದೇ ಕಾರಣಕ್ಕೆ ಆಗ ರಣಬೀರ್ ಸ್ವಂತ ಬಂಗಲೆ ಖರೀದಿಸಿದ್ದರು. ಅಲ್ಲಿ ಪಾರ್ಟಿ ಆಯೋಜಿಸಿ ತಮ್ಮ ಸಂಬಂಧದ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದರು. 2009 ರಿಂದ 2016ರವರೆಗೆ ಇವರು ಒಟ್ಟಿಗೇ ಇದ್ದರು. ಆಮೇಲೆ ಯಾವುದೋ ಕಾರಣಕ್ಕೆ ಬ್ರೇಕಪ್ ಆಗಿ ಇಬ್ಬರೂ ಬೇರೆ ಬೇರೆ ಮದುವೆಯಾಗಿ ಸುಖೀ ಸಂಸಾರ ನಡೆಸುತ್ತಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದಾಗಲೇ ಮಗಳ ಪಾಲಕರಾಗಿದ್ದು, ಕತ್ರಿನಾ-ವಿಕ್ಕಿ ಈಗ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.
67
ಸರ್ಪಸಂಸ್ಕಾರ ಪೂಜೆ ಕುರಿತು
ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ವಹಿಸಲಾಗುವ ಸರ್ಪಸಂಸ್ಕಾರ (Kukke Subrahmanya Sarpa Samskara) ಒಂದು ಶ್ರೇಷ್ಠ ಮತ್ತು ಪ್ರಮುಖ ಪೂಜೆಯಾಗಿದ್ದು, ನಾಗ ದೋಷಗಳನ್ನು ನಿವಾರಿಸಲು ಮಾಡಲಾಗುತ್ತದೆ. ಸರ್ಪವನ್ನು ಕೊಲ್ಲುವುದರಿಂದ ಉಂಟಾಗುವ ಪಾಪ ನಿವಾರಣೆಗಾಗಿ ಈ ಪೂಜೆಯನ್ನು ಕೈಗೊಳ್ಳಲಾಗುತ್ತದೆ ಮತ್ತು ಇದಕ್ಕೆ ವಿಶಿಷ್ಟವಾದ ವಿಧಿವಿಧಾನಗಳನ್ನು ಅನುಸರಿಸಬೇಕು. ಈ ಪೂಜೆಯು ಎರಡು ದಿನಗಳ ಕಾಲ ನಡೆಯುತ್ತದೆ ಮತ್ತು ದೇವಸ್ಥಾನದ ವತಿಯಿಂದ ಉಪಹಾರ ಮತ್ತು ಭೋಜನದ ವ್ಯವಸ್ಥೆಯೂ ಇರುತ್ತದೆ.
77
ಅಶ್ಲೇಷ ಬಲಿ ಪೂಜೆ
ಸರ್ಪಸಂಸ್ಕಾರದ ಜೊತೆಗೆ, ಅಶ್ಲೇಷ ಬಲಿ ಪೂಜೆಯೂ ಒಂದು ಪ್ರಮುಖ ಸೇವೆ. ಇದನ್ನು ತಿಂಗಳ ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ಮಾಡಲಾಗುತ್ತದೆ ಮತ್ತು ಇದು ಒಂದು ದಿನದಲ್ಲಿ ಮುಗಿಯುತ್ತದೆ.