ಸೀರೆ ಮೇಲೆ ಜಾಕೆಟ್‌ ಬಂತು.. ಜಾನ್ವಿ ಕಪೂರ್‌ ಸ್ಟೈಲ್‌ ಫ್ಯಾಷನ್ ಜಗತ್ತಿನಲ್ಲಿ ಹೊಸ ಟ್ರೆಂಡ್!

Published : Sep 16, 2025, 11:10 AM IST

ಸೀರೆಗೆ ಜಾನ್ವಿ ಕಪೂರ್‌ ಬ್ಲೌಸ್ ತೊಟ್ಟಿಲ್ಲ. ಬದಲಿಗೆ ಸೇಮ್ ಸೀರೆಯನ್ನೇ ಕತ್ತರಿಸಿ ಹೊಲಿದಂತಿರುವ ಜಾಕೆಟ್ ತೊಟ್ಟಿದ್ದಾರೆ. ಜಾಕೆಟ್ ಪಾರದರ್ಶಕವಾಗಿದೆ, ಸೀರೆ ತೊಟ್ಟ ನೀರೆಯ ಚೆಲುವಿನ ಮೈಮಾಟಕ್ಕೆ ಕನ್ನಡಿ ಹಿಡಿದಂತಿದೆ.

PREV
15
ಕಂಟೆಂಪರರಿ ಸೀರೆ ಲುಕ್‌

ಇತ್ತೀಚೆಗೆ ಟೊರಂಟೋದಲ್ಲಿ ನಡೆದ ಇಂಟರ್‌ನ್ಯಾಶನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಬಂಗಾರದ ಜಿಂಕೆಯಂತೆ ಕಂಗೊಳಿಸಿದ್ದು ಕಂಟೆಂಪರರಿ ಸೀರೆ ಲುಕ್‌ನಲ್ಲಿ.

25
ಬೆಕ್ಕಿನ ನಡಿಗೆ

ಚಿನ್ನದ ಬಣ್ಣ, ಮೈ ತುಂಬಾ ಜರಿ ವರ್ಕ್‌, ರವಿಕೆಯ ಹಂಗಿಲ್ಲದೇ ಬರಿದಾದ ಬೆನ್ನು, ಪಾರಂಪರಿಕ ಸೊಗಸಿಗೆ ಆಧುನಿಕ ಟಚ್. ಫಿಲಂ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ ಮೇಲೆ ಬೆಕ್ಕಿನ ನಡಿಗೆಯಲ್ಲಿ ಶ್ರೀದೇವಿಯ ಕುವರಿ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ್ತ ಬಂದಾಗ ಫ್ಯಾನ್ಸ್‌, ‘ಪರಮ ಸುಂದರಿ..’ ಎಂದು ಗುನುಗುತ್ತ ಪರವಶರಾದರು.

35
ಜಾನ್ವಿ ಬ್ಲೌಸ್ ತೊಟ್ಟಿಲ್ಲ

ಈ ಸೀರೆಗೆ ಜಾನ್ವಿ ಬ್ಲೌಸ್ ತೊಟ್ಟಿಲ್ಲ. ಬದಲಿಗೆ ಸೇಮ್ ಸೀರೆಯನ್ನೇ ಕತ್ತರಿಸಿ ಹೊಲಿದಂತಿರುವ ಜಾಕೆಟ್ ತೊಟ್ಟಿದ್ದಾರೆ. ಜಾಕೆಟ್ ಪಾರದರ್ಶಕವಾಗಿದೆ, ಸೀರೆ ತೊಟ್ಟ ನೀರೆಯ ಚೆಲುವಿನ ಮೈಮಾಟಕ್ಕೆ ಕನ್ನಡಿ ಹಿಡಿದಂತಿದೆ.

45
ಹೆಗಲಿನಲ್ಲಿ ಜಾಕೆಟ್‌

ಅದ್ಯಾಕೋ ಈ ಸ್ಟೈಲ್ ಜಾನ್ವಿ ಹೃದಯ ಕದ್ದಂತಿದೆ. ಏಕೆಂದರೆ ಸದಾ ಸ್ಟೈಲ್‌ ಕಾನ್ಶಿಯಸ್‌ ಆಗಿರುವ ಜಾನ್ವಿ ಇನ್‌ಸ್ಟಾದಲ್ಲಿ ಇನ್ನೊಂದು ಸೀರೆ ಸ್ಟೈಲ್‌ ಮಾಡಿದ್ದಾರೆ. ಈ ಸೀರೆಯ ಸೆರಗು ಕೆಳಗೆ ಜಾರಿ ಕೈ ಮೇಲೆ ಬಂದಿದೆ. ಸೆರಗು ಹೊದ್ದಿರಬೇಕಿದ್ದ ಹೆಗಲಿನಲ್ಲಿ ಜಾಕೆಟ್‌ ವಿರಾಜಮಾನವಾಗಿದೆ.

55
ಜಾಕೆಟ್ ಟ್ರೆಂಡ್‌

ಮೈ ಬಳುಕಿನ ಮಾದಕತೆಯ ದರ್ಶನವೂ ಆಗಿದೆ. ಇದರಲ್ಲಿ ಓಪನ್‌ ವಿನ್ಯಾಸದ ಬ್ಲೌಸ್‌ ಇದೆ. ಈ ಸೀರೆ ಜಾಕೆಟ್ ಟ್ರೆಂಡ್‌ ಜೊತೆಗೆ, ಇದಕ್ಕೆ ಕಾಂಬಿನೇಶನ್‌ ಆಗಿ ಜಾನ್ವಿ ಕಪೂರ್‌ ಧರಿಸಿರೋ ಮ್ಯಾಚಿಂಗ್ ಹೂವಿನ ವಿನ್ಯಾಸದ ಸ್ಯಾಂಡಲ್ಸ್‌ ಕೂಡ ಟ್ರೆಂಡಿಂಗ್‌ನಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories