ಸಾರಾ ಅಲಿ ಖಾನ್ ಮೇಲೆ 5 ಕೋಟಿಗೆ ಮೊಕದ್ದಮೆ ಹೂಡಿದ 'ಕೇದಾರನಾಥ' ನಿರ್ದೇಶಕ; ನಂತರ ಏನಾಯಿತು?

First Published | Jun 24, 2024, 3:14 PM IST

'ಕೇದಾರನಾಥ್' ನಿರ್ದೇಶಕ ಅಭಿಷೇಕ್ ಕಪೂರ್ ನಟಿ ಸಾರಾ ಅಲಿ ಖಾನ್ ಮೇಲೆ 5 ಕೋಟಿ ಮೊತ್ತದ ಮೊಕದ್ದಮೆ ಹೂಡಿದ್ದರು. 

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಾರಾ ಅಲಿ ಖಾನ್ ಅವರು ತಮ್ಮ ಚೊಚ್ಚಲ ಚಿತ್ರ 'ಕೇದಾರನಾಥ್'ದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಅಭಿಷೇಕ್ ಕಪೂರ್ ತಮ್ಮ ಮೇಲೆ 5 ಕೋಟಿ ರೂ. ಮೊಕದ್ದಮೆ ಹೂಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

 ಸಾರಾ ಅವರ ವೇಳಾಪಟ್ಟಿಯು ರೋಹಿತ್ ಶೆಟ್ಟಿ ಅವರ ಚಿತ್ರವಾದ 'ಸಿಂಬಾ' ಬದ್ಧತೆಗೆ ಘರ್ಷಣೆಯಾದಾಗ ಕಾನೂನು ಸಮಸ್ಯೆಗಳು ಉದ್ಭವಿಸಿದವು. ಸಾರಾ ಈ ಸಮಸ್ಯೆಯಿಂದ ಸಾಕಷ್ಟು ಜರ್ಜರಿತರಾಗಿದ್ದಾಗಿ ಹೇಳಿದ್ದಾರೆ. 
 

Tap to resize

'ಕೇದಾರನಾಥ್' ಮತ್ತು 'ಸಿಂಬಾ' ವೇಳಾಪಟ್ಟಿಗಳು ಒಂದಕ್ಕೊಂದು ಘರ್ಷಣೆಯಾಗುತ್ತಿದ್ದುದರಿಂದ ಈ ಭಿನ್ನಾಭಿಪ್ರಾಯ ಉಂಟಾಗಿತ್ತು.

ಸಾರಾ ಹೇಳುವಂತೆ, 'ಮೇ 2018ರಲ್ಲಿ, ನಾನು ಸಿಂಬಾ ಮಾಡಬೇಕಿತ್ತು. ಕೇದಾರನಾಥ ನಡೆಯುತ್ತಿತ್ತು; ಅದು ನನ್ನ ಚೊಚ್ಚಲ ಚಿತ್ರವಾಗಿತ್ತು. ನಂತರ, ಕೆಲವು ದಿನಾಂಕಗಳು ಮೇಲೆ ಕೆಳಗೆ ಹೋದವು. ನಾನು ಸಿಂಬಾಗೆ ಸಹಿ ಹಾಕಿದೆ. ಈಗ, 3-4 ದಿನಾಂಕಗಳು ಎರಡರದ್ದೂ ಒಂದೇ ಇದ್ದವು. ಇದಕ್ಕಾಗಿ ಕೇದಾರನಾಥ ನಿರ್ದೇಶಕ ನನ್ನ ಮೇಲೆ 5 ಕೋಟಿ ರೂ. ಮೊಕದ್ದಮೆ ಹೂಡಿದರು. ನನ್ನ ಬಳಿ ಅಷ್ಟು ಹಣ ಇಲ್ಲದ ಕಾರಣ ತುಂಬಾ ನರ್ವಸ್ ಆಗಿದ್ದೆ' ಎಂದಿದ್ದಾರೆ. 
 

ಕ್ರಿಆರ್ಜ್ ಎಂಟರ್‌ಟೈನ್‌ಮೆಂಟ್ ಮತ್ತು ಅಭಿಷೇಕ್ ಕಪೂರ್ ನಡುವಿನ ಕಾನೂನು ವಿವಾದಗಳು ಈಗಾಗಲೇ 'ಕೇದಾರನಾಥ್' ನಿರ್ಮಾಣವನ್ನು ನಿಧಾನಗೊಳಿಸಿತ್ತು. ಈ ಹಂತದಲ್ಲಿ, ಸಾರಾ ಸಿಂಬಾಗೆ ಸಹಿ ಹಾಕಿದರು, ಅದು ಬೆಂಕಿಗೆ ಇಂಧನವನ್ನು ಸೇರಿಸಿತು. 

ನಂತರ ನನ್ನ ಮ್ಯಾನೇಜ್‌ಮೆಂಟ್ ತಂಡ ಕೋರ್ಟ್‌ಗೆ ಹೋಯಿತು. ಎರಡೂ ಚಿತ್ರಗಳ ನಿರ್ದೇಶಕರು ಒಂದು ಕೋಣೆಯಲ್ಲಿ ಕುಳಿತು ಓಕೆ ದೆನ್ ಎಂದರು. ಸಿಂಬಾ ನಿರ್ದೇಶಕರು 3 ದಿನ ತಾನೇ, ತಗೊಳ್ಳಿ ಎಂದರು. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಯಿತು ಎಂದಿದ್ದಾರೆ. 

ಕಡೆಗೆ ಡಿಸೆಂಬರ್ 2018 ರ ಮೊದಲ ವಾರದಲ್ಲಿ 'ಕೇದಾರನಾಥ್' ಬಿಡುಗಡೆಯಾಯಿತು, ಎರಡನೇ ವಾರದಲ್ಲಿ 'ಸಿಂಬಾ' ಬಿಡುಗಡೆ ಕಂಡಿತು. 

Latest Videos

click me!