ಕೆಲವು ದೇಶಗಳಿಗಿಲ್ಲ ಈ ನಟರಿಗೆ ಎಂಟ್ರಿ! ರೀಸನ್ಸ್ ಏನು, ಯಾಕೆ ಹೀಗೆ?

First Published | Jun 24, 2024, 2:47 PM IST

ಸೆಲೆಬ್ರೆಟಿಗಳು ಪ್ರಪಂಚದ ವಿವಿಧ ಭಾಗಗಳಿಗೆ ಭೇಟಿ ನೀಡುವುದು ಮತ್ತು ಅಲ್ಲಿ ಶೋಗಳನ್ನು ನೀಡುವುದು ಸಾಮಾನ್ಯ. ಆದರೆ ಕೆಲವು ದೇಶಗಳಿಗೆ ಕೆಲವು ಸೆಲೆಬ್ರೆಟಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಸಹ ಇದ್ದಾರೆ. 

ಸನ್ನಿ ಡಿಯೋಲ್:
ಗದರ್ ಚಿತ್ರದಲ್ಲಿ ಸನ್ನಿ ಡಿಯೋಲ್ ಅವರ ಕಠೋರ ಸಂಭಾಷಣೆಗಳಿಂದಾಗಿ ಪಾಕಿಸ್ತಾನದಲ್ಲಿ ಅವರನ್ನು ನಿಷೇಧಿಸಲಾಗಿದೆ.
 

ಲೇಡಿ ಗಾಗಾ:
ಲೇಡಿ ಗಾಗಾ ಅವರ ಶೋಗಳು ಇಂಡೋನೇಷಿಯನ್ ಸಂಸ್ಕೃತಿಗೆ ತುಂಬಾ ಅಸಭ್ಯವೆಂದು ಆ ದೇಶದ ಅಧಿಕಾರಿಗಳು ಪರಿಗಣಿಸಿದ್ದರಿಂದ ಲೇಡಿ ಗಾಗಾ ಇಂಡೋನೇಷ್ಯಾದಲ್ಲಿ ಪ್ರದರ್ಶನ ನೀಡುವುದನ್ನು ನಿಷೇಧಿಸಲಾಗಿದೆ.

Tap to resize

ಜಸ್ಟಿನ್ ಬೈಬರ್:
ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೈಬರ್ ಅವರ ಕೆಟ್ಟ ನಡವಳಿಕೆಯ ಕಾರಣದಿಂದ ಚೀನಾದಲ್ಲಿ ಇವರನ್ನು ನಿಷೇಧಿಸಲಾಗಿದೆ. 
 

ಸೆಲೆನಾ ಗೊಮೆಜ್:
ಸೆಲೆನಾ ಗೊಮೆಜ್ ಅವರಿಗೆ ಮಲೇಷ್ಯಾಕ್ಕಿಲ್ಲ ಎಂಟ್ರಿ ಪರ್ಮಿಷನ್. ಏಕೆಂದರೆ ಅವರು LGBT+ ಸಮುದಾಯವನ್ನು ಬೆಂಬಲಿಸುತ್ತಾರೆ. ಚೀನಾದಲ್ಲಿ ಅವರು ದಲೈ ಲಾಮಾ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದೂ ಸುದ್ದಿಯಾಗಿತ್ತು.

ಬೆಯೋನ್ಸ್:
ಬೆಯಾನ್ಸ್ ಅನ್ನು ಮಲೇಷ್ಯಾದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅವರ ಪ್ರದರ್ಶನಗಳು ಪಾಶ್ಚಿಮಾತ್ಯ ಮಾದಕ ಸಂಸ್ಕೃತಿಯ ಪ್ರಚಾರವೆಂದು ಪರಿಗಣಿಸಲಾಗಿದೆ.

.

ಬ್ರಾಡ್ ಪಿಟ್:
ಬ್ರಾಡ್ ಪಿಟ್ ಅವರು ತಮ್ಮ ಚಲನಚಿತ್ರ '7 ಇಯರ್ಸ್ ಇನ್ ಟಿಬೆಟ್' ನಲ್ಲಿ ಚೀನಾ ರಾಷ್ಟ್ರವನ್ನು ಚಿತ್ರಿಸಿದ ರೀತಿಯಿಂದ ಚೀನಾದಲ್ಲಿ ಇವರನ್ನು ನಿಷೇಧಿಸಲಾಗಿದೆ.
 

Latest Videos

click me!