ಮುಸ್ಲಿಂ ಯುವಕರನ್ನು ಮದುವೆಯಾಗಿರುವ ಬಾಲಿವುಡ್‌ ನಟಿಯರು!

First Published | Jun 24, 2024, 12:01 PM IST

ಇಂದಿಗೂ  ನಮ್ಮ ದೇಶದಲ್ಲಿ ಅಂತರ್ಧರ್ಮೀಯ ವಿವಾಹಗಳು ಚರ್ಚೆಯ ವಿಷಯ. ಅದರಲ್ಲೂ  ಹಿಂದೂ ಮತ್ತು  ಮುಸ್ಲಿಂ  ವಿವಾಹ ಹೆಚ್ಚು ನ್ಯೂಸ್‌ ಆಗುತ್ತದೆ  ಆದರೆ, ಬಾಲಿವುಡ್‌ನ ಅನೇಕ ನಟಿಯರು ಈ ನಂಬಿಕೆಗೆ ವಿರುದ್ಧವಾಗಿ ತಮ್ಮ ಧರ್ಮದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರೀತಿಸಿ ಮದುವೆ ಆಗಿದ್ದಾರೆ.  ಅಂತರ್ ಧರ್ಮೀಯ  ಮದುವೆಯಾಗಿ ಪರಸ್ಪರರ ನಂಬಿಕೆಗಳನ್ನು ಗೌರವಿಸುವ ಮೂಲಕ ಸಾಮರಸ್ಯದಿಂದ ಬದುಕಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಮುಸ್ಲಿಂ ಯುವಕರನ್ನು ಮದುವೆಯಾಗಿರುವ ಬಾಲಿವುಡ್‌ ನಟಿಯರು ಇವರು. 
 

ಸೋನಾಕ್ಷಿ ಸಿನ್ಹಾ:
 ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ  ಮತ್ತು ನಟ  ಜಹೀರ್ ಇಕ್ಬಾಲ್ ಜೂನ್ 23 ರಂದು ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳಿಲ್ಲದೆ  ಮದುವೆಯಾಗಿದ್ದಾರೆ. ವಿಶೇಷ ವಿವಾಹ ಯೋಜನೆಯಡಿಯಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದು, ನಂತರ ಸಿನಿ ಸ್ನೇಹಿತರಿಗೆ ರಿಸೆಪ್ಷನ್ ಮಾಡಿ ಪಾರ್ಟಿಕೊಟ್ಟಿದ್ದಾರೆ.

ಸಂಗೀತಾ ಬಿಜಲಾನಿ:
ಮಾಜಿ ಮಿಸ್ ಇಂಡಿಯಾ ಮತ್ತು ನಟಿ ಸಂಗೀತಾ ಬಿಜಲಾನಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು 1996 ರಲ್ಲಿ ವಿವಾಹವಾದರು. ನಂತರ ಅವರ ವಿವಾಹವು 2010 ರಲ್ಲಿ ಕೊನೆಗೊಂಡಿತು. ಅದಕ್ಕೂ ಮೊದಲು ಈ ಸಂಗೀತಾ ಸಲ್ಮಾನ್ ಖಾನ್ ಜೊತೆ ಸಂಬಂಧ ಹೊಂದಿದ್ದರು. ಇನ್ನೇನು ಮದವೆ ಆಗಬೇಕೆೆಂದು ಅಂದು ಕೊಂಡಿರುವಾಗ ಸಲ್ಮಾನ್ ಬೇರೆ ಹುಡುಗಿ ಜೊತೆ ಸಿಕ್ಕಿಬಿದ್ದಿದ್ದರಂತೆ.

Tap to resize

ರಿಚಾ ಚಡ್ಡಾ :
ಬಾಲಿವುಡ್‌ ನಟಿ ರಿಚಾ ಚಡ್ಡಾ ಅವರು ತಮ್ಮ ದೀರ್ಘಕಾಲದ ಗೆಳೆಯ ನಟ ಅಲಿ ಫಜಲ್ ಅವರನ್ನು 2022 ರಲ್ಲಿ ವಿವಾಹವಾದರು.

Sharmila Tagore

ಶರ್ಮಿಳಾ ಟ್ಯಾಗೋರ್:
ಜನಪ್ರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿಯನ್ನು 1968 ರಲ್ಲಿ ವಿವಾಹವಾದರು. ಅಷ್ಟೇ ಶರ್ಮಿಳಾ ಇಸ್ಲಾಂಗೆ ಮತಾಂತರಗೊಂಡಿದ್ದರು. ಮನ್ಸೂರ್ ಅವರನ್ನು ಮದುವೆಯಾಗಲು ತಮ್ಮ ಹೆಸರನ್ನು ಬೇಗಂ ಆಯೇಶಾ ಸುಲ್ತಾನಾ ಎಂದು ಬದಲಾಯಿಸಿಕೊಂಡರು.

ಕರೀನಾ ಕಪೂರ್:
ಬಾಲಿವುಡ್‌ ನಟಿ  ಕರೀನಾ ಕಪೂರ್ ನಟ ಸೈಫ್ ಅಲಿ ಖಾನ್ ಅವರನ್ನು 2012 ರಲ್ಲಿ ವಿವಾಹವಾದರು.  ಕರೀನಾ ಸೈಫ್‌  ಅವರ ಎರಡನೇ ಪತ್ನಿ. ತಮಗಿಂತ 12 ವರ್ಷ ದೊಡ್ಡವರಾದ ಅಮೃತಾ ಸಿಂಗ್‌ರನ್ನು ಸೈಫ್ ಮುಂಚೆ ವರಿಸಿದ್ದರು.

ಆಯೇಶಾ ಟಾಕಿಯಾ:
ನಟಿ ಆಯೇಶಾ ಟಾಕಿಯಾನ್ನ 23ನೇ ವಯಸ್ಸಿನಲ್ಲಿ ತನ್ನ ಗೆಳೆಯ ಫರ್ಹಾನ್ ಅಜ್ಮಿಯನ್ನು ಮದುವೆಯಾದರು. ನಂತರ ಅವರು ಇಸ್ಲಾಂಗೆ ಮತಾಂತರಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕೆ ತಮ್ಮ ಹೆಸರನ್ನು ಆಯೇಶಾ ಟಾಕಿಯಾ ಅಜ್ಮಿ ಎಂದು ಘೋಷಿಸಿದ್ದಾರೆ.

ಊರ್ಮಿಳಾ ಮಾತೋಂಡ್ಕರ್:
ಬಾಲಿವುಡ್ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಶ್ಮೀರದ ಉದ್ಯಮಿ ಮತ್ತು ರೂಪದರ್ಶಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು 2016 ರಲ್ಲಿ ವಿವಾಹವಾದರು.

ಅಮೃತಾ ಸಿಂಗ್:
ನಟಿ ಅಮೃತಾ ಸಿಂಗ್ 1991 ರಲ್ಲಿ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಸೈಫ್ ಅಲಿ ಖಾನ್ ಅಮೃತಾ ಅವರಿಗಿಂತ 12 ವರ್ಷ ಚಿಕ್ಕವರು. ಇವರಿಬ್ಬರು 2004 ರಲ್ಲಿ ವಿಚ್ಛೇದನ ಪಡೆದರು.

ರೀನಾ ರಾಯ್‌:
ನಟಿ  ರೀನಾ ರಾಯ್ 1983 ರಲ್ಲಿ, ಅವರು ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ಮದುವೆಯಾಗಲು ಚಿತ್ರರಂಗವನ್ನು ತೊರೆದರು. ಆದರೆ ಅವರು 90ರ ದಶಕದಲ್ಲಿ ವಿಚ್ಛೇದನ ಪಡೆದರು. ಇವರಿಗೆ ಸೋನಾಕ್ಷಿ ತಂದೆ ಶತ್ರುಘ್ನ ಜೊತೆ ದೀರ್ಘ ಕಾಲದ ಸಂಬಂಧವಿತ್ತು.

ರತ್ನ ಪಾಠಕ್ ಶಾ:
ರತ್ನ ಪಾಠಕ್ ಶಾ ಅವರು ಚಲನಚಿತ್ರಗಳು, ದೂರದರ್ಶನ, OTT ಮತ್ತು ರಂಗಭೂಮಿಯಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ ಅತ್ಯಂತ ನಿಪುಣ ನಟಿಯರಲ್ಲಿ ಒಬ್ಬರು. ಅವರು 1982 ರಲ್ಲಿ ನಟ ನಾಸಿರುದ್ದೀನ್ ಶಾ ಅವರನ್ನು ವಿವಾಹವಾದರು.

ಸಾಯಿರಾ ಬಾನು:
1960 ರ ದಶಕದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದ ಸೈರಾ ಬಾನು ದಿಲೀಪ್ ಕುಮಾರ್ ಅಕಾ ಯೂಸುಫ್ ಖಾನ್ ಅವರನ್ನು ವಿವಾಹವಾದರು.

ಸ್ವರಾ ಭಾಸ್ಕರ್:
ನಟಿ ಸ್ವರಾ ಭಾಸ್ಕರ್ ಅವರು  16 ಫೆಬ್ರವರಿ 2023 ರಂದು, ಸಮಾಜವಾದಿ ಯುವಜನ ಸಭಾದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ  ಫಹಾದ್ ಅಹ್ಮದ್ ಅವರನ್ನು ವಿವಾಹವಾದರು.

Latest Videos

click me!