ನೈಟ್‌ ಶೂಟ್‌ ಗೆ ಫುಲ್‌ ಸಪೋರ್ಟ್‌ ಮಾಡ್ತಿದ್ದ ಸುಮಂತ್‌, ಪ್ರೀತಿಯಿಂದ ಗಂಡನನ್ನು ಹೊಗಳಿದ್ದ ಶುಭಾ ಪೂಂಜಾ

Published : Jun 04, 2026, 03:46 PM IST

ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಾಲ್ಕು ವರ್ಷಗಳ ನಂತ್ರ ಶುಭಾ ಪೂಂಜಾ ಉದ್ಯಮಿ ಸುಮಂತ್ ಬಿಲ್ಲವ ಅವರಿಂದ ದೂರವಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಭಾ ಈ ನಿರ್ಧಾರಕ್ಕೆ ಕಾರಣ ತಿಳಿದಿಲ್ಲ. ಆದ್ರೆ ಈ ಹಿಂದೆ ಶುಭಾ ಪತಿಯನ್ನು ಮನಸ್ಪೂರ್ವಕವಾಗಿ ಹೊಗಳಿದ್ದ ವಿಡಿಯೋ ವೈರಲ್ ಆಗಿದೆ. 

PREV
15
ಶುಭಾ ಪೂಂಜಾ ಮದುವೆ

ಶುಭಾ ಪೂಜಾ ಹಾಗೂ ಸುಮಂತ್ ಮದುವೆ ಜನವರಿ 5, 2022ರಂದು ಸರಳವಾಗಿ ನಡೆದಿತ್ತು. ಮಂಗಳೂರಿನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸರಳವಾಗಿ ನಡೆದಿದ್ದ ಮದುವೆಯ ಫೋಟೋಗಳನ್ನು ಹಂಚಿಕೊಂಡ ಶುಭಾ ಪೂಂಜಾ, ತಮ್ಮ ಮದುವೆಯನ್ನು ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತಗೊಳಿಸಿದ್ದರು.

25
ಪತಿಯನ್ನು ಹೊಗಳಿದ್ದ ಶುಭಾ ಪೂಂಜಾ

ಶುಭಾ ಪೂಜಾ ಹಾಗೂ ಸುಮಂತ್ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿ ಮದುವೆಗೆ ಬಂದು ನಿಂತಿತ್ತು. ನಾನೇ ಪ್ರಪೋಸ್ ಮಾಡಿದ್ದೆ ಅಂತ ಈ ಹಿಂದೆ ಶುಭಾ ಪೂಂಜಾ ಹೇಳಿದ್ದರು. ಅಲ್ದೆ ಮದುವೆ ಆದ್ಮೇಲೆ ಗಂಡನ ಜೊತೆ ಖುಷಿಯಾಗಿದ್ದ ಶುಭಾ ಪೂಂಜಾ ಅನೇಕ ಬಾರಿ ಈ ವಿಷ್ಯವನ್ನು ಮೀಡಿಯಾ ಮುಂದೆ ಹಂಚಿಕೊಂಡಿದ್ದರು.

35
ಕೆಲ್ಸಕ್ಕೆ ಬೆಂಬಲ ನೀಡ್ತಿದ್ದ ಸುಮಂತ್

ಶುಭಾ ಪೂಂಜಾ ಡಿವೋರ್ಸ್ ಸುದ್ದಿ ಬೆನ್ನಲ್ಲೆ ಅನೇಕ ಅವರ ಹಳೆಯ ವಿಡಿಯೋಗಳು ವೈರಲ್ ಆಗ್ತಿವೆ. ಒಂದು ವಿಡಿಯೋದಲ್ಲಿ ಶುಭಾ, ಸುಮಂತ್ ಅವರನ್ನು ಹೊಗಳಿದ್ದಾರೆ. ಸುಮಂತ್ ಕೆಲ್ಸಕ್ಕೆ ಬೆಂಬಲ ನೀಡ್ತಾರೆ. ಮನೆಯಲ್ಲಿ ಕುಳಿತುಕೊಳ್ಳೋದು ಅವರಿಗೆ ಇಷ್ಟವಿಲ್ಲ. ಸಿನಿಮಾ ಮಾಡು, ಸಿನಿಮಾ ನಿರ್ಮಾಣ ಮಾಡು ಅಂತ ಪ್ರೋತ್ಸಾಹ ನೀಡ್ತಾರೆ ಅಂತ ಶುಭಾ ಪೂಂಜಾ ಹೇಳಿದ್ದರು.

45
ನೈಟ್ ಶೂಟ್ ಗೆ ಫುಲ್ ಸಪೋರ್ಟ್

ಶುಭಾ ಪೂಂಜಾಗೆ ಬೆಂಬಲವಾಗಿ ನಿಂತ್ರದಂತೆ ಸುಮಂತ್. ನೈಟ್ ಶೂಟ್ ಇದ್ದಾಗ ಶುಭಾ ಬೇಸರಪಟ್ಟುಕೊಂಡ್ರೂ ಸುಮಂತ್ ಪ್ರೋತ್ಸಾಹ ನೀಡ್ತಿದ್ದರಂತೆ. ಮದುವೆಯಾಗಿ ಎರಡನೇ ದಿನ ಕೆಲ್ಸಕ್ಕೆ ಹೋದ್ರೂ ಅವರು ಬೇಸರಪಟ್ಟುಕೊಂಡಿರಲಿಲ್ಲ ಅಂತ ಶುಭಾ ಪೂಂಜಾ ಈ ಹಿಂದೆ ಸುಮಂತ್ ಅವರನ್ನು ಹೊಗಳಿದ್ದರು.

55
ದಾಂಪತ್ಯದಲ್ಲಿ ಬಿರುಕು

ಶುಭಾ ಪೂಂಜಾ ಹಾಗೂ ಸುಮಂತ್ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಇಬ್ಬರ ಮಧ್ಯೆ ಯಾವ ಕಾರಣಕ್ಕೆ ವಿಚ್ಛೇದನವಾಗ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಇತ್ತೀಚಿನ ಕೆಲ ಸಂದರ್ಶನಗಳಲ್ಲಿ ಶುಭಾ ಪರೋಕ್ಷವಾಗಿ ತಮ್ಮ ನೋವು ತೋಡಿಕೊಂಡಿದ್ದರು. ಅಮ್ಮನ ಸಾವಿನ ಸಂದರ್ಭದಲ್ಲೂ ತಾವು ಒಂಟಿ ಎಂಬುದನ್ನು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories