ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಜಾನ್ ಅಬ್ರಹಾಂ ಅದಕ್ಕೆ ಪ್ರತಿಯಾಗಿ ಪಡೆದಿದ್ದೇನು?

Published : Jun 03, 2026, 11:14 PM IST

ಪ್ರಧಾನಿ ನರೇಂದ್ರ ಮೋದಿ, ದೇಶದ ದುಡಿಯುವ ವರ್ಗವನ್ನು "ದೇಶದ ಹಣೆಬರಹ ರೂಪಿಸುವವರು ಅಥವಾ ಭಾಗ್ಯವಿಧಾತರು" ಎಂದು ಕರೆದ ಮಾತುಗಳು ಕಂಗನಾ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಹೀಗಾಗಿ ಸಿನಿಮಾಗೆ ‘ಭಾರತ್ ಭಾಗ್ಯ ವಿಧಾತಾ’ ಎಂಬ ಹೆಸರಿಡಲು ತಂಡ ನಿರ್ಧರಿಸಿತು. ಆದ್ರೆ ಟೈಟಲ್ ಜಾನ್ ಅಬ್ರಹಾಂ ಬಳಿ ಇತ್ತು!

PREV
16

ಬಾಲಿವುಡ್‌ನ ವಿವಾದಿತ ಬೆಡಗಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ತಮ್ಮ ಸಿನಿಮಾದ ವಿವಾದಕ್ಕಾಗಿ ಅಲ್ಲ, ಬದಲಾಗಿ ಸಹನಟ ಜಾನ್ ಅಬ್ರಹಾಂ ಅವರ ಉದಾರತೆಯನ್ನು ಕೊಂಡಾಡುವ ಮೂಲಕ. ಸಿನಿಮಾರಂಗ ಎಂದರೆ ಅಲ್ಲಿ ಕೇವಲ ಪೈಪೋಟಿ, ಈರ್ಷೆ ಮಾತ್ರ ಇರುತ್ತದೆ ಎಂದು ಭಾವಿಸುವವರಿಗೆ, ಇತ್ತೀಚೆಗೆ ನಡೆದ ಒಂದು ಘಟನೆ ಹೊಸ ಆಯಾಮವನ್ನು ನೀಡಿದೆ.

26

ಕಂಗನಾ ರಣಾವತ್ ನಟಿಸಿ, ನಿರ್ಮಿಸಿರುವ ‘ಭಾರತ್ ಭಾಗ್ಯ ವಿಧಾತಾ’ (Bharat Bhhagya Viddhaata) ಸಿನಿಮಾದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಈ ಚಿತ್ರವು 26/11ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ನಡೆದ ಮನಕಲಕುವ ಮತ್ತು ಸ್ಫೂರ್ತಿದಾಯಕ ನೈಜ ಘಟನೆಯನ್ನು ಆಧರಿಸಿದೆ. ಅಂದು ಮುಂಬೈನ ಕಾಮಾ ಆಸ್ಪತ್ರೆಯಲ್ಲಿದ್ದ ನರ್ಸ್‌ಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸುಮಾರು 400 ಜನರ ಜೀವವನ್ನು ಕಾಪಾಡಿದ್ದರು. ಈ ವೀರ ನಾರಿಯರ ಹೋರಾಟದ ಕಥೆಯೇ ಈ ಸಿನಿಮಾ.

ಆದರೆ ಈ ಸಿನಿಮಾದ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ. ಸಿನಿಮಾ ಆರಂಭವಾದಾಗ ಚಿತ್ರತಂಡ ಇದಕ್ಕೆ ‘ನರ್ಸಸ್ ಆಫ್ ಕಾಮಾ’ (Nurses of Cama) ಎಂಬ ಶೀರ್ಷಿಕೆಯನ್ನು ಇಟ್ಟಿತ್ತು.

36

ಆದರೆ ಕಂಗನಾ ಅವರಿಗೆ ಈ ಶೀರ್ಷಿಕೆ ಕಥೆಯ ಗಾಂಭೀರ್ಯಕ್ಕೆ ತಕ್ಕಂತೆ ಇಲ್ಲ ಎನಿಸಿತ್ತು. ಅದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ದುಡಿಯುವ ವರ್ಗವನ್ನು "ದೇಶದ ಹಣೆಬರಹ ರೂಪಿಸುವವರು ಅಥವಾ ಭಾಗ್ಯವಿಧಾತರು" ಎಂದು ಕರೆದ ಮಾತುಗಳು ಕಂಗನಾ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಹೀಗಾಗಿ ಸಿನಿಮಾಗೆ ‘ಭಾರತ್ ಭಾಗ್ಯ ವಿಧಾತಾ’ ಎಂಬ ಹೆಸರಿಡಲು ತಂಡ ನಿರ್ಧರಿಸಿತು.

ಇಲ್ಲಿಯೇ ಅಸಲಿ ಟ್ವಿಸ್ಟ್ ಶುರುವಾಗಿದ್ದು!

46

ಈ ಶೀರ್ಷಿಕೆಯನ್ನು ಈಗಾಗಲೇ ನಟ ಜಾನ್ ಅಬ್ರಹಾಂ ಅವರ ಪ್ರೊಡಕ್ಷನ್ ಹೌಸ್ ನೋಂದಾಯಿಸಿತ್ತು. ಬಾಲಿವುಡ್‌ನಲ್ಲಿ ಸಾಮಾನ್ಯವಾಗಿ ಒಂದು ಆಕರ್ಷಕ ಶೀರ್ಷಿಕೆಯನ್ನು ಬಿಟ್ಟುಕೊಡಲು ಲಕ್ಷಾಂತರ ರೂಪಾಯಿಗಳ ಬೇಡಿಕೆ ಇಡಲಾಗುತ್ತದೆ ಅಥವಾ ಅದಕ್ಕೆ ಬದಲಾಗಿ ಬೇರೆ ಸವಲತ್ತುಗಳನ್ನು ಕೇಳಲಾಗುತ್ತದೆ. ಆದರೆ ಕಂಗನಾ ಅವರು ಜಾನ್ ಅಬ್ರಹಾಂ ಅವರಿಗೆ ಕರೆ ಮಾಡಿ ವಿನಂತಿಸಿಕೊಂಡಾಗ ಜಾನ್ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

56

ಜಾನ್ ಅಬ್ರಹಾಂ ಅವರು ಯಾವುದೇ ಹಣ ಅಥವಾ ಪ್ರತಿಯುಪಕಾರವನ್ನು ನಿರೀಕ್ಷಿಸದೆ, ಕೇವಲ ಒಂದೇ ದಿನದಲ್ಲಿ ಈ ಶೀರ್ಷಿಕೆಯನ್ನು ಕಂಗನಾ ಅವರ ತಂಡಕ್ಕೆ ಹಸ್ತಾಂತರಿಸಿದರು. ಈ ಬಗ್ಗೆ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಕಂಗನಾ, "ಸಿನಿಮಾ ಇಂಡಸ್ಟ್ರಿಯಲ್ಲಿ ಇಂತಹ ಉದಾರತೆ ತುಂಬಾನೇ ವಿರಳ. ಜನರು ಸಣ್ಣ ವಿಷಯಕ್ಕೂ ಕಿತ್ತಾಡುವ ಈ ಕಾಲದಲ್ಲಿ, ಜಾನ್ ಅವರು ಯಾವುದೇ ಸಂಕೋಚವಿಲ್ಲದೆ ನಮಗಾಗಿ ಸಹಾಯ ಮಾಡಿದರು. ಅವರು ನಿಜವಾದ ಜೆಂಟಲ್‌ಮನ್," ಎಂದು ಹೊಗಳಿದ್ದಾರೆ.

66

ಸಿನಿಮಾ ಎಂಬ ಗ್ಲಾಮರ್ ಪ್ರಪಂಚದ ಹಿಂದೆ ಇಂತಹ ಸ್ನೇಹ ಮತ್ತು ಪರಸ್ಪರ ಸಹಕಾರದ ಕಥೆಗಳು ಕೇಳಿಬಂದಾಗ ಅಭಿಮಾನಿಗಳಿಗೆ ಹಬ್ಬವೇ ಸರಿ. ‘ಭಾರತ್ ಭಾಗ್ಯ ವಿಧಾತಾ’ ಸಿನಿಮಾ ಕೇವಲ ನರ್ಸ್‌ಗಳ ಸಾಹಸವನ್ನಷ್ಟೇ ಅಲ್ಲ, ತೆರೆಯ ಹಿಂದೆ ಇಬ್ಬರು ಸ್ಟಾರ್ ನಟರ ನಡುವಿನ ಸೌಹಾರ್ದತೆಯನ್ನೂ ನೆನಪಿಸುವಂತಿದೆ.

ಇನ್ನು ಚಿತ್ರದ ವಿಷಯಕ್ಕೆ ಬಂದರೆ, ಅಂದು ಆಸ್ಪತ್ರೆಯಲ್ಲಿದ್ದ ಅಸಹಾಯಕ ರೋಗಿಗಳು ಮತ್ತು ಗರ್ಭಿಣಿಯರನ್ನು ನರ್ಸ್‌ಗಳು ಹೇಗೆ ರಕ್ಷಿಸಿದರು ಎಂಬ ರೋಚಕ ದೃಶ್ಯಗಳು ಟ್ರೇಲರ್‌ನಲ್ಲಿ ಮನ ಮಿಡಿಯುವಂತಿವೆ. ಒಟ್ಟಾರೆಯಾಗಿ ಕಂಗನಾ ಅವರ ಈ ಹೊಸ ಪ್ರಯತ್ನಕ್ಕೆ ಈಗ ಜಾನ್ ಅಬ್ರಹಾಂ ಅವರ ಹಾರೈಕೆಯೂ ಜೊತೆಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories