ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿ; ಯಶ್ ಮಾತ್ರವಲ್ಲ ರಾಧಿಕಾನೂ ಸೃಷ್ಟಿಸಿದ್ರು ಹವಾ..!

Published : Jun 05, 2022, 01:20 PM ISTUpdated : Jun 05, 2022, 01:31 PM IST

ಪ್ರಶಾಂತ್ ಬರ್ತಡೇ ಪಾರ್ಟಿಯಲ್ಲಿ ನಟಿ, ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಭಾಗಿಯಾಗಿದ್ದರು. ರಾಧಿಕಾ ಪಂಡಿತ್ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ರಾಧಿಕಾ ಪತಿ ಯಶ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ಮೂರು ಬಣ್ಣದ ಬಗ್ಗೆ ವಿವರಿಸಿದ್ದಾರೆ.  

PREV
16
ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿ; ಯಶ್ ಮಾತ್ರವಲ್ಲ ರಾಧಿಕಾನೂ ಸೃಷ್ಟಿಸಿದ್ರು ಹವಾ..!

ಕನ್ನಡ ಸಿನಿಮಾರಂಗದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಡೀ ವಿಶ್ವವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಮಾಂತ್ರಿಕ ಬರ್ತಡೇಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಳೆಯೇ ಬಂದಿದೆ.

 

26

ಜೂನ್ 4ರಂದು ಹುಟ್ಟುಹಬ್ಬ ಆಚರಿಸಿಕೊಂಡ ಪ್ರಶಾಂತ್ ನೀಲ್ ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಕೆಜಿಎಫ್ ನಿರ್ದೇಶಕರ ಬರ್ತಡೇ ಪಾರ್ಟಿಯಲ್ಲಿ ಯಶ್, ಪ್ರಭಾಸ್ ಸೇರಿದಂತೆ ಇಡೀ ಕೆಜಿಎಫ್-2 ತಂಡ ಹಾಜರಿತ್ತು.

 

36

ಪ್ರಶಾಂತ್ ಬರ್ತಡೇ ಪಾರ್ಟಿಯಲ್ಲಿ ನಟಿ, ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಭಾಗಿಯಾಗಿದ್ದರು. ರಾಧಿಕಾ ಪಂಡಿತ್ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

 

46

ರಾಧಿಕಾ ಪತಿ ಯಶ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ಮೂರು ಬಣ್ಣದ ಬಗ್ಗೆ ವಿವರಿಸಿದ್ದಾರೆ. ಎಲ್ಲೋ ಓದಿದ ನೆನಪು, ಉತ್ತಮ ವರ್ಣಚಿತ್ರಕಾರನಿಗೆ ಕೆಂಪು, ಬಿಳಿ ಮತ್ತು ಕಪ್ಪು ಈ ಮೂರು ಬಣ್ಣಗಳು ಮಾತ್ರ ಸಾಕು ಎಂದಿದ್ದಾರೆ.

 

56

ರಾಧಿಕಾ ಪಂಡಿತ್ ಶೇರ್ ಮಾಡಿರುವ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ರಾಕಿಂಗ್ ಜೋಡಿಯ ಹೊಸ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 

66

ರಾಧಿಕಾ ಪಂಡಿತ್ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಫೋಟೋ ಜೊತೆಗೆ ಸ್ಫೂರ್ತಿದಾಯಕ ಸಾಲುಗಳನ್ನು ಬರೆಯುತ್ತಿರುತ್ತಾರೆ. ರಾಧಿಕಾ ಫೋಟೋಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಇದೀಗ ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿಯಲ್ಲಿ ಹಾಜರಾದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

Read more Photos on
click me!

Recommended Stories