ಬಾಲಿವುಡ್ ಸ್ಟೈಲ್ ಐಕಾನ್ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೆ ಇಬ್ಬರೂ ಬೇಬಿ ಮೂನ್ ಎಂಜಾಯ್ ಮಾಡುತ್ತಿದ್ದಾರೆ.
ಇಟಲಿಯಲ್ಲಿ ಸೋನಂ ಬೇಬಿ ಮೂನ್ ಎಂಜಾಯ್ ಮಾಡುತ್ತಿರುವ ಫೋಟೋಗಳನನ್ನು ಹಂಚಿಕೊಂಡಿದ್ದರು. ಅಲ್ಲದೆ ಇದನ್ನು ಆಯೋಜನೆ ಮಾಡಿರುವ ಪತಿಗೆ ಥ್ಯಾಂಕ್ಸ್ ಕೂಡ ಹೇಳಿದ್ದರು.
'ಲವ್ ಯು ಆನಂದ್. ಇಷ್ಟು ಅದ್ಭುತವಾಗಿರುವ ಬೇಬಿ ಮೂನ್ ಆಯೋಜನೆ ಮಾಡಿರುವುದಕ್ಕೆ ಬಿಗ್ ಥ್ಯಾಂಕ್ಸ್' ಎಂದು ಸೋನಂ ಬರೆದುಕೊಂಡಿದ್ದರು.
ಸೋನಂ ಫೋಟೋ ರೀ-ಶೇರ್ ಮಾಡಿಕೊಂಡ ಆನಂದ್ 'ನಾನು ನೋಡಿರುವ ಆಕರ್ಷಕವಾದ ಗರ್ಭಿಣಿ ನೀನೇ. ಲಾಸ್ಟ್ ಸ್ಟ್ರೇಜ್ ಈಗ' ಎಂದು ಬರೆದುಕೊಂಡಿದ್ದಾರೆ.
36 ವರ್ಷದ ಸೋನಂ ಶೇರ್ ಮಾಡಿರುವ ವಿಡಿಯೋದಲ್ಲಿ ಬೇಬಿ ಬಂಪ್‌ನೊಂದಿಗೆ ಪೋಸ್ ನೀಡುತ್ತಿದ್ದು, ಆನಂದ್ ಅವರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆನಂದ್ ತಿಳಿಯದ ಹಾಗೇ ಮರೆಮಾಚುತ್ತಿದ್ದಾರೆ. ಇದನ್ನು ನೋಡಿ ಸೋನಂ ನಕ್ಕಿದ್ದಾರೆ.
ವಿಡಿಯೋದ ಶೀರ್ಷಿಕೆಯಲ್ಲಿ ಸೋನಂ, 'ಪೂಲ್ ರೆಡಿ, ಎಂದು ಬರೆದಿದ್ದಾರೆ. ಸೋನಂ ಅವರು ತಮ್ಮ ಕ್ಲೋಸ್‌ಅಪ್ ಸೆಲ್ಫಿ ಮತ್ತು ಆನಂದ್ ಅವರ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಸೆಲ್ಫಿಯಲ್ಲಿ ಸೋನಂ ಮೇಕಪ್ ಹಾಕಿಲ್ಲ ಮತ್ತು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.