ಅತೀ ಕೆಟ್ಟ ಪರಿಸ್ಥಿತಿಯಲ್ಲಿದೆ Akshay Kumar ಅವರ ಬಾಕ್ಸ್‌ ಆಫೀಸ್‌ ರೆಕಾರ್ಡ್‌

First Published | Jun 12, 2022, 5:28 PM IST

ಕಳೆದ 7 ವರ್ಷಗಳಲ್ಲಿ ಅಕ್ಷಯ್ ಕುಮಾರ್ (Akshay Kumar) ಇದೇ ಮೊದಲ ಬಾರಿಗೆ ಬಾಕ್ಸ್ ಆಫೀಸ್ ನಲ್ಲಿ ಅತಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ಎರಡು ಬ್ಯಾಕ್ ಟು ಬ್ಯಾಕ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಎಂದು ಸಾಬೀತಾಗಿದೆ ಮತ್ತು  7 ವರ್ಷಗಳ ನಂತರ ಇಂತಹ ಸ್ಥಿತಿ ಬಂದಿದೆ ಮತ್ತು ಇದೇ ರೀತಿ ಹಿಂದೆ 2014ರಲ್ಲಿಯೂ ಕಾಣಿಸಿಕೊಂಡಿತ್ತು. ಆದರೆ 2015 ರಿಂದ 2019 ರವರೆಗೆ,ಒಂದು ವರ್ಷದಲ್ಲಿ  ಅಕ್ಷಯ್  ಅವರ 3-4 ಚಿತ್ರಗಳು ಬಿಡುಗಡೆಯಾಗಿವೆ. ಕೆಲವನ್ನು ಹೊರತು ಪಡಿಸಿ ಬಹುತೇಕ ಎಲ್ಲಾ ಚಿತ್ರಗಳು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿವೆ.  ಕಳೆದ 7 ವರ್ಷಗಳ ಅಕ್ಷಯ್ ಕುಮಾರ್ ಅವರ  ಬಾಕ್ಸ್‌ ಆಫೀಸ್‌ ರಿಪೋರ್ಟ್ ಕಾರ್ಡ್  ಇಲ್ಲಿದೆ.

ಅಕ್ಷಯ್‌ ಕುಮಾರ್‌ ಅವರ 2022ರ ಬಾಕ್ಸ್‌ ಆಫೀಸ್‌ ರಿಪೋರ್ಟ್ ಕಾರ್ಡ್: 
ಚಿತ್ರ : ಸಾಮ್ರಾಟ್ ಪೃಥ್ವಿರಾಜ್ (ಫ್ಲಾಪ್)
ಬಿಡುಗಡೆ ದಿನಾಂಕ: ಜೂನ್ 3
ನಿರ್ದೇಶಕ: ಡಾ. ಚಂದ್ರಪ್ರಕಾಶ್ ದ್ವಿವೇದಿ
 ಸಂಗ್ರಹ: ರೂ 55.05 ಕೋಟಿ 

ಚಿತ್ರ : ಬಚ್ಚನ್ ಪಾಂಡೆ (ಫ್ಲಾಪ್)
ಬಿಡುಗಡೆ ದಿನಾಂಕ: ಮಾರ್ಚ್ 18
ನಿರ್ದೇಶಕ: ಫರ್ಹಾದ್ ಸಾಮ್ಜಿ
ಸಂಗ್ರಹ: 49.98 ಕೋಟಿ ರೂ

2021ರಲ್ಲಿ ತೆರೆಕಂಡ ಅಕ್ಷಯ್‌ ಕುಮಾರ್‌ ಸಿನಿಮಾಗಳು ಇಲ್ಲಿವೆ 

ಚಲನಚಿತ್ರ : ಬೆಲ್ ಬಾಟಮ್ (ಫ್ಲಾಪ್)
ಬಿಡುಗಡೆ ದಿನಾಂಕ: 19 ಆಗಸ್ಟ್
ನಿರ್ದೇಶಕ: ರಂಜಿತ್ ತಿವಾರಿ
ಜೀವಮಾನದ ಸಂಗ್ರಹ: 30.63 ಕೋಟಿ ರೂ

ಚಲನಚಿತ್ರ : ಸೂರ್ಯವಂಶಿ (ಸೂಪರ್‌ಹಿಟ್)
ಬಿಡುಗಡೆ ದಿನಾಂಕ: ನವೆಂಬರ್ 5
ನಿರ್ದೇಶಕ: ರೋಹಿತ್ ಶೆಟ್ಟಿ
ಸಂಗ್ರಹ: 196 ಕೋಟಿ ರೂ

2021 ರಲ್ಲಿ, ಸಾರಾ ಅಲಿ ಖಾನ್ ಮತ್ತು ಧನುಷ್ ಅವರೊಂದಿಗೆ ಅಕ್ಷಯ್ ಕುಮಾರ್ ಅವರ ಚಿತ್ರ 'ಅತ್ರಂಗಿ ರೇ' ಸಹ ಬಂದಿತು. ಇದು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಯಿತು.

Tap to resize

फिल्म रिलीज की अनाउंसमेंट करते हुए अक्षय कुमार ने कहा कि 20 साल के करियर में इतने दिन घर पर रहा। इतने दिनों में तो मैं और डेविड धवन मिलकर दो-तीन पिक्चर बना लेते हैं। बहरहाल, इस जिंदगी का भी अपना मजा है। ये जिंदगी न मिलेगी दोबारा।

2020 ರಲ್ಲಿ ಕರೋನಾ ಮತ್ತು ಲಾಕ್‌ಡೌನ್ ಕಾರಣ, ಅಕ್ಷಯ್ ಅವರ ಯಾವುದೇ ಚಿತ್ರವು ದೊಡ್ಡ ಪರದೆಯ ಮೇಲೆ ಬರಲಿಲ್ಲ. ಅವರ ಒಂದು ಚಿತ್ರ 'ಲಕ್ಷ್ಮಿ' ಮಾತ್ರ OTT ವೇದಿಕೆಯಲ್ಲಿ ಬಿಡುಗಡೆಯಾಯಿತು.

2019ರಲ್ಲಿ ಬಿಡುಗಡೆಯಾದ ಅಕ್ಷಯ್‌ಕುಮಾರ್‌ ಸಿನಿಮಾಗಳ ರೆಕಾರ್ಡ್‌ ಹೀಗಿದೆ

ಚಲನಚಿತ್ರ : ಕೇಸರಿ (ಹಿಟ್)
ಬಿಡುಗಡೆ ದಿನಾಂಕ: 21 ಮಾರ್ಚ್
ನಿರ್ದೇಶಕ: ಅನುರಾಗ್ ಸಿಂಗ್
 ಸಂಗ್ರಹ: 154.41 ಕೋಟಿ ರೂ

ಚಲನಚಿತ್ರ : ಮಿಷನ್ ಮಂಗಲ್ (ಸೂಪರ್‌ಹಿಟ್)
ಬಿಡುಗಡೆ ದಿನಾಂಕ: 15 ಆಗಸ್ಟ್
ನಿರ್ದೇಶಕ: ಜಗನ್ ಶಕ್ತಿ
 ಸಂಗ್ರಹ: 202.98 ಕೋಟಿ ರೂ

ಚಲನಚಿತ್ರ : ಹೌಸ್‌ಫುಲ್ 4 (ಹಿಟ್)
ಬಿಡುಗಡೆ ದಿನಾಂಕ: 25 ಅಕ್ಟೋಬರ್
ನಿರ್ದೇಶಕ: ಫರ್ಹಾದ್ ಸಾಮ್ಜಿ
 ಸಂಗ್ರಹ: 194.60 ಕೋಟಿ ರೂ

ಚಲನಚಿತ್ರ : ಗುಡ್ ನ್ಯೂಸ್‌ (ಸೂಪರ್‌ಹಿಟ್)
ಬಿಡುಗಡೆ ದಿನಾಂಕ: 27 ಡಿಸೆಂಬರ್
ನಿರ್ದೇಶಕ: ರಾಜ್ ಮೆಹ್ತಾ
 ಸಂಗ್ರಹ: 205.14 ಕೋಟಿ ರೂ

2018ರಲ್ಲಿ ತೆರೆಕಂಡ ಅಕ್ಷಯ್‌ ಕುಮಾರ್‌ ಸಿನಿಮಾಗಳು ಇಲ್ಲಿವೆ

ಚಲನಚಿತ್ರ : ಪ್ಯಾಡ್‌ಮ್ಯಾನ್ (ಸರಾಸರಿ)
ಬಿಡುಗಡೆ ದಿನಾಂಕ: 9 ಫೆಬ್ರವರಿ
ನಿರ್ದೇಶಕ: ಆರ್. ಬಾಲ್ಕಿ
ಸಂಗ್ರಹ: 81.82 ಕೋಟಿ ರೂ

ಚಲನಚಿತ್ರ : Gold (ಸರಾಸರಿ)
ಬಿಡುಗಡೆ ದಿನಾಂಕ: 15 ಆಗಸ್ಟ್
ನಿರ್ದೇಶಕರು: ರೀಮಾ ಕಾಗ್ತಿ
 ಸಂಗ್ರಹ: 104.72 ಕೋಟಿ ರೂ

 ಚಲನಚಿತ್ರ : 2.0 (ಸೂಪರ್ ಹಿಟ್)
ಬಿಡುಗಡೆ ದಿನಾಂಕ: 29 ನವೆಂಬರ್
ನಿರ್ದೇಶಕ: ಎಸ್. ಶಂಕರ್
 ಸಂಗ್ರಹ: ರೂ 189.55 

ಅಕ್ಷಯ್‌ ಕುಮಾರ್‌  2017ರ ಸಿನಿಮಾಗಳ ಅಂಕಿಅಂಶ :

ಚಲನಚಿತ್ರ : ಜಾಲಿ ಎಲ್.ಎಲ್. ಬಿ 2 ( ಹಿಟ್)
ಬಿಡುಗಡೆ ದಿನಾಂಕ: 10 ಫೆಬ್ರವರಿ
ನಿರ್ದೇಶಕ: ಸುಭಾಷ್ ಕಪೂರ್
ಸಂಗ್ರಹ: 117 ಕೋಟಿ ರೂ

ಚಲನಚಿತ್ರ : ನಾಮ್ ಶಬಾನಾ (ಸರಾಸರಿ)
ಬಿಡುಗಡೆ ದಿನಾಂಕ: 31 ಮಾರ್ಚ್
ನಿರ್ದೇಶಕ: ಶಿವಂ ನಾಯರ್
ಸಂಗ್ರಹ: 36.76 ಕೋಟಿ ರೂ

ಚಲನಚಿತ್ರ : ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಸೆಮಿಹಿಟ್)
ಬಿಡುಗಡೆ ದಿನಾಂಕ: ಆಗಸ್ಟ್ 11
ನಿರ್ದೇಶಕ: ಶ್ರೀ ನಾರಾಯಣ ಸಿಂಗ್
 ಸಂಗ್ರಹ: 134.22 ಕೋಟಿ ರೂ

2016 ರಲ್ಲಿ ತೆರೆಕಂಡ ಅಕ್ಷಯ್‌ ಕುಮಾರ್‌ ಸಿನಿಮಾಗಳು ಇಲ್ಲಿವೆ;

ಚಲನಚಿತ್ರ : ಏರ್‌ಲಿಫ್ಟ್ (ಹಿಟ್)
ಬಿಡುಗಡೆ ದಿನಾಂಕ: 22 ಜನವರಿ
ನಿರ್ದೇಶಕ: ರಾಜಾ ಕೃಷ್ಣ ಮೆನನ್
ಸಂಗ್ರಹ: 128 ಕೋಟಿ ರೂ

ಚಲನಚಿತ್ರ : ಹೌಸ್‌ಫುಲ್ 3 (ಹಿಟ್)
ಬಿಡುಗಡೆ ದಿನಾಂಕ: ಜನವರಿ 3
ನಿರ್ದೇಶಕ: ಸಾಜಿದ್ ಫರ್ಹಾದ್
ಸಂಗ್ರಹ: 109.14 ಕೋಟಿ ರೂ

ಚಲನಚಿತ್ರ : ರುಸ್ತಂ (ಹಿಟ್)
ಬಿಡುಗಡೆ ದಿನಾಂಕ: 12 ಆಗಸ್ಟ್
ನಿರ್ದೇಶಕ: ಟಿನು ಸುರೇಶ್ ದೇಸಾಯಿ
ಸಂಗ್ರಹ: 127.49 ಕೋಟಿ ರೂ.

2015ರಲ್ಲಿ ಬಿಡುಗಡೆಯಾದ ಅಕ್ಷಯ್‌ಕುಮಾರ್‌ ಸಿನಿಮಾಗಳ ರೆಕಾರ್ಡ್‌ ಹೀಗಿದೆ

ಚಲನಚಿತ್ರ : ಬೇಬಿ (ಸೆಮಿ ಹಿಟ್)
ಬಿಡುಗಡೆ ದಿನಾಂಕ: 23 ಜನವರಿ
ನಿರ್ದೇಶಕ: ನೀರಜ್ ಪಾಂಡೆ
ಸಂಗ್ರಹ: 95.56 ಕೋಟಿ ರೂ

2. ಚಿತ್ರ : ಗಬ್ಬರ್ ಈಸ್ ಬ್ಯಾಕ್ (ಸೆಮಿ ಹಿಟ್)
ಬಿಡುಗಡೆ ದಿನಾಂಕ: ಮೇ 1
ನಿರ್ದೇಶಕ: ಕ್ರಿಶ್ ಜಗರ್ಲಮುಡಿ
 ಸಂಗ್ರಹ: 87.55 ಕೋಟಿ ರೂ

ಚಲನಚಿತ್ರ : ಬ್ರದರ್ಸ್ (ಫ್ಲಾಪ್)
ಬಿಡುಗಡೆ ದಿನಾಂಕ: ಆಗಸ್ಟ್ 14
ನಿರ್ದೇಶಕ: ಜಿಮ್ ಶೆರಿಡನ್
ಸಂಗ್ರಹ: 82.47 ಕೋಟಿ ರೂ

ಚಲನಚಿತ್ರ: ಸಿಂಗ್ ಈಸ್ ಬ್ಲಿಂಗ್ (ಸರಾಸರಿ)
ಬಿಡುಗಡೆ ದಿನಾಂಕ: ಅಕ್ಟೋಬರ್ 2
ನಿರ್ದೇಶಕ: ಪ್ರಭುದೇವ
ಸಂಗ್ರಹ: 89.95 ಕೋಟಿ ರೂ 

2014ರಲ್ಲಿನ ಅಕ್ಷಯ್‌ಕುಮಾರ್‌ ಸಿನಿಮಾಗಳು: 

ಚಲನಚಿತ್ರ : ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (ಹಿಟ್)
ಬಿಡುಗಡೆ: ಜೂನ್ 7
ನಿರ್ದೇಶಕ: ಎ. ಆರ್. ಮುರುಗದಾಸ್
ಕಲೆಕ್ಷನ್: 112.45 ಕೋಟಿ ರೂ

 ಚಲನಚಿತ್ರ : ಎಂಟರ್‌ಟೈನ್ಮೆಂಟ್‌ (ಫ್ಲಾಪ್)
ಬಿಡುಗಡೆ ದಿನಾಂಕ: ಆಗಸ್ಟ್ 8
ನಿರ್ದೇಶಕ: ಸಾಜಿದ್-ಫರ್ಹಾದ್
 ಸಂಗ್ರಹ: 72.02 ಕೋಟಿ ರೂ

ಚಲನಚಿತ್ರ : ದಿ ಶೌಕೀಸ್ (ಫ್ಲಾಪ್)
ಬಿಡುಗಡೆ ದಿನಾಂಕ: ನವೆಂಬರ್ 7
ನಿರ್ದೇಶಕ: ಅಭಿಷೇಕ್ ಶರ್ಮಾ
 ಸಂಗ್ರಹ: ರೂ 28.00 ಕೋಟಿ

Latest Videos

click me!