ಹೆಸರು ಬದಲಾಯಿಸುತ್ತಿದ್ದಾರೆ ನಟಿ ಸಮಂತಾ, ಹೊಸ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ರಿವೀಲ್

Published : Jan 26, 2026, 08:23 PM IST

ಹೆಸರು ಬದಲಾಯಿಸುತ್ತಿದ್ದಾರೆ ನಟಿ ಸಮಂತಾ, ರಾಡ್ ನಿಡಿಮೋರ್ ಮದುವೆಯಾದ ಬಳಿಕ ನಟಿ ಸಮಂತಾ ಇದೀಗ ಹೊಸ ಹೆಸರಿಡಲು ಮುಂದಾಗಿದ್ದಾರೆ. ಸಮಂತಾ ಹೊಸ ಹೆಸರು ಏನು ಅನ್ನೋದು ಹೊಸ ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿದೆ.

PREV
15
ಸಮಂತಾ ಹೆಸರು ಬದಲು

ನಟಿ ಸಮಂತಾ ರುತ್ ಪ್ರಭು ಇದೀಗ ಹೆಸರು ಬದಲಾಯಿಸಲು ನಿರ್ಧರಿಸಿದ್ದಾರೆ. ಇದೀಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಸಮಂತಾ ಹೊಸ ಹೆಸರೇನು ಎಂದು ಎಲ್ಲೆಡೆ ತಡಕಾಡುತ್ತಿದ್ದಾರೆ. ಅಷ್ಟಕ್ಕೂ ಸಮಂತಾ ಹೊಸ ಹೆಸರು ಮುಂಬರುವ ಬಹುನಿರೀಕ್ಷಿತ ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿದೆ ಎಂದು ಮೂಲಗಳು ಹೇಳಿದೆ. 

25
ಮದುವೆ ಬಳಿಕ ಮೊದಲ ಸಿನಿಮಾದಲ್ಲಿ ಹೆಸರು ಬದಲು

ರಾಜ್ ನಿಡಿಮೋರು ಜೊತೆ ಎರಡನೇ ಮದುವೆ ನಂತರ ಇದೀಗ ಸಮಂತಾ ಸಿನಿಮಾಗೆ ರಿ ಎಂಟ್ರಿಕೊಟ್ಟಿದ್ದಾರೆ. ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ ಇದು. 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ 'ಸಮಂತಾ ನಿಡಿಮೋರು' ಎಂದು ಹೆಸರು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ.  ಈ ಮೂಲಕ ಸಮಂತಾ ರುತ್ ಪ್ರಭು ಹೆಸರು ಇನ್ನು ಮುಂದೆ ಸಮಂತಾ ನಿಡಿಮೋರು ಎಂದು ಬದಲಾಗುವ ಸಾಧ್ಯತೆ ಇದೆ. 

35
ಸಮಂತಾ ನಿಡಿಮೋರ್ ಪಯಣ

'ಫ್ಯಾಮಿಲಿ ಮ್ಯಾನ್ 2' ಸೆಟ್‌ನಲ್ಲಿ ರಾಜ್-ಸಮಂತಾ ಪ್ರೀತಿ ಶುರು. ಇತ್ತೀಚೆಗೆ ರಹಸ್ಯವಾಗಿ ಮದುವೆಯಾದರು. ನಮ್ರತಾ, ಲಾವಣ್ಯರಂತೆ ಸಮಂತಾ ಕೂಡ ಪತಿಯ ಸರ್‌ನೇಮ್ ಬಳಸುವ ಸಾಧ್ಯತೆ ಇದೆ. ಮೊದಲ ಮದುವೆ ವಿಚ್ಚೇದನ ಬಳಿಕ ಸಿನಿಮಾಗಳಿಂದಲೂ ದೂರ ಉಳಿದಿದ್ದ ಸಮಂತಾ ಇದೀಗ ಮತ್ತೆ ಸಿನಿಮಾಗೆ ಎಂಟ್ರಿಕೊಟ್ಟಿದ್ದಾರೆ. 

45
ಮೊದಲ ಮದುವೆ ಬಳಿಕ ಬದಲಾಗಿತ್ತು ಹೆಸರು

ನಟ ನಾಗಚೈತನ್ಯ ಜೊತೆ ಸಮಂತಾ ಮೊದಲ ಮದುವೆ ಮಾಡಿಕೊಂಡಿದ್ದರು. ಆದರೆ ಈ ಮದುವೆ ಮುರಿದಿ ಬಿದ್ದಿತ್ತು. ಮೊದಲ ಮದುವೆ ನಂತರ ಸಮಂತಾ ಅಕ್ಕಿನೇನಿ ಎಂದು ಹೆಸರು ಬದಲಾಯಿಸಿದ್ದರು.  ವಿಚ್ಛೇದನದ ಬಳಿಕ ಆ ಸರ್‌ನೇಮ್ ತೆಗೆದುಹಾಕಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೆಸರು ಬದಲಿಸಿದ್ದೇ ಇವರ ಬೇರ್ಪಡಿಕೆಯ ಮೊದಲ ಸುಳಿವಾಗಿತ್ತು.

55
ನಿಡಿಮೋರು ಜೊತೆ ದಾಂಪತ್ಯ ಜೀವನ

ನಾಗ ಚೈತನ್ಯ ಜೊತೆಗಿನ ವೈವಾಹಿಕ ಜೀವನದಿಂದ ಹೊರಬಂದ ಸಮಂತಾ ಬಳಿಕ ನಿಡಿಮೋರು ಜೊತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಈ ಜೋಡಿ ಕುರಿತು ಗಾಸಿಪ್ ಹರಿದಾಡಿತ್ತು. ಇತ್ತ ಅಭಿಮಾನಿಗಳ ಊಹೆಯಂತೆ ಈ ಜೋಡಿ ಮದುವೆಯಾಗಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories