ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?

Published : Jan 25, 2026, 11:25 PM IST

ದಕ್ಷಿಣ ಭಾರತದಿಂದ ಬಾಲಿವುಡ್‌ವರೆಗೆ ತನ್ನ ನಟನಾ ಚಾತುರ್ಯದಿಂದಲೇ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಈಗ ಕೇವಲ 'ಬಬ್ಲಿ' ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಹಾದಿ ತುಳಿಯುತ್ತಿದ್ದಾರೆ. ಇದೀಗ ರಶ್ಮಿಕಾ ಹೊಸ ಹೇಳಿಕೆ ಕೊಟ್ಟಿದ್ದಾರೆ. ಈ ಸ್ಟೋರಿ ನೋಡಿ..

PREV
17

ದಕ್ಷಿಣ ಭಾರತದಿಂದ ಬಾಲಿವುಡ್‌ವರೆಗೆ ತನ್ನ ನಟನಾ ಚಾತುರ್ಯದಿಂದಲೇ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಈಗ ಕೇವಲ 'ಬಬ್ಲಿ' ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಹಾದಿ ತುಳಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಚಿತ್ರಗಳನ್ನು ಗಮನಿಸಿದರೆ, ಅವರು ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಗಂಭೀರ ಹಾಗೂ ಮಹಿಳಾ ಪ್ರಧಾನ ಪಾತ್ರಗಳಿಗೂ ಹೆಚ್ಚು ಒತ್ತು ನೀಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

27

ಬದಲಾಗುತ್ತಿರುವ ಪಾತ್ರಗಳ ಆಯ್ಕೆ:

ರಶ್ಮಿಕಾ ಅಭಿನಯದ ಮುಂಬರುವ ಚಿತ್ರಗಳಾದ 'ದಿ ಗರ್ಲ್‌ಫ್ರೆಂಡ್' (The Girlfriend) ಮತ್ತು 'ಮೈಸಾ' (Mysaa) ಸಿನಿಪ್ರಿಯರಲ್ಲಿ ಈಗಾಗಲೇ ಕುತೂಹಲ ಮೂಡಿಸಿವೆ. ಇವು ಸಮಾನ್ಯ ಸಿನಿಮಾಗಳಂತಲ್ಲದೆ, ನಾಯಕಿಯ ಸುತ್ತಲೇ ಸುತ್ತುವ ಗಂಭೀರ ಕಥಾಹಂದರವನ್ನು ಹೊಂದಿವೆ. ಆದರೆ, ಈ ಬದಲಾವಣೆಯ ಬಗ್ಗೆ ರಶ್ಮಿಕಾ ಅವರ ಅಭಿಪ್ರಾಯವೇ ಬೇರೆ...

37

"ನನ್ನ ಸಿನಿಮಾ ಆಯ್ಕೆಯ ವಿಷಯದಲ್ಲಿ ನಾನು ಯಾವುದೇ ಉದ್ದೇಶಪೂರ್ವಕ ತಂತ್ರಗಾರಿಕೆ ಮಾಡುತ್ತಿಲ್ಲ. ಕಥೆ ನನಗೆ ಇಷ್ಟವಾದರೆ ಮಾತ್ರ ನಾನು ಆ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತೇನೆ. ನನ್ನ ಸಿನಿಮಾಗಳನ್ನು ಆಯ್ಕೆ ಮಾಡುವ ವಿಧಾನ ಮೊದಲಿನಂತೆಯೇ ಇದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

47

ಲೇಖಕರು ಮತ್ತು ನಿರ್ದೇಶಕರಿಗೆ ರಶ್ಮಿಕಾ ಮನವಿ:

ಚಿತ್ರರಂಗದಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುತ್ತಾ, ರಶ್ಮಿಕಾ ಒಂದು ಮುಖ್ಯವಾದ ಅಂಶವನ್ನು ಒತ್ತಿ ಹೇಳಿದ್ದಾರೆ. "ಬರಹಗಾರರು ಮತ್ತು ನಿರ್ದೇಶಕರು ಮಹಿಳೆಯರಿಗಾಗಿ ಹೆಚ್ಚು ಅರ್ಥಪೂರ್ಣ ಮತ್ತು ಶಕ್ತಿಯುತ ಪಾತ್ರಗಳನ್ನು ಸೃಷ್ಟಿಸಬೇಕು ಎಂದು ನಾನು ಆಶಿಸುತ್ತೇನೆ. ಮಹಿಳೆಯರಲ್ಲಿ ಅದ್ಭುತವಾದ ನಟನಾ ಸಾಮರ್ಥ್ಯವಿದೆ ಮತ್ತು ಸ್ಕ್ರೀನ್ ಮೇಲೆ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಯೂ ಇದೆ.

57

ನಮಗೆ ಸರಿಯಾದ ರೀತಿ ಬರೆಯಲ್ಪಟ್ಟ ಪಾತ್ರಗಳು ಸಿಕ್ಕಾಗ ಮಾತ್ರ ನಾವು ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯ," ಎನ್ನುತ್ತಾರೆ ರಶ್ಮಿಕಾ. ಅಲ್ಲದೆ, ಹೆಚ್ಚಿನ ಮಹಿಳೆಯರು ಚಿತ್ರರಂಗಕ್ಕೆ ಬಂದು ತಮ್ಮದೇ ಆದ ಕಥೆಗಳನ್ನು ಹೇಳಬೇಕು ಮತ್ತು ನಿರ್ದೇಶನ ಮಾಡಬೇಕು ಎಂಬುದು ಅವರ ದೊಡ್ಡ ಕನಸು.

67

ಬಯೋಪಿಕ್ ಮತ್ತು ಪಿರಿಯಡ್ ಸಿನಿಮಾಗಳತ್ತ ಒಲವು:

ತಮ್ಮ ಮುಂದಿನ ಗುರಿಗಳ ಬಗ್ಗೆ ವಿವರಿಸುತ್ತಾ, ರಶ್ಮಿಕಾ ಮಂದಣ್ಣ ತಮಗೆ ಬಯೋಪಿಕ್ (ಜೀವನಾಧಾರಿತ ಚಿತ್ರಗಳು) ಮತ್ತು ಪಿರಿಯಡ್ ಫಿಲ್ಮ್‌ಗಳ ಮೇಲೆ ಹೆಚ್ಚಿನ ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ. "ನಾನು ನನ್ನನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಲು ಬಯಸುವುದಿಲ್ಲ. ನನಗೆ ಕಲೆಯ ಎಲ್ಲಾ ಆಯಾಮಗಳನ್ನು ಅನ್ವೇಷಿಸುವ ಆಸೆ ಇದೆ. ನಾನು ಈಗಷ್ಟೇ ವಿಭಿನ್ನ ಶೈಲಿಯ ಸಿನಿಮಾಗಳನ್ನು ಅನ್ವೇಷಿಸಲು ಆರಂಭಿಸಿದ್ದೇನೆ, ನಟಿಯಾಗಿ ಕಲಿಯುವುದು ಇನ್ನೂ ಬಹಳಷ್ಟಿದೆ," ಎಂದು ಅತ್ಯಂತ ವಿನಮ್ರವಾಗಿ ಹೇಳಿದ್ದಾರೆ.

77

ಒಟ್ಟಾರೆಯಾಗಿ ಹೇಳುವುದಾದರೆ, ರಶ್ಮಿಕಾ ಮಂದಣ್ಣ ಕೇವಲ ಗ್ಲಾಮರ್ ಗೊಂಬೆಯಾಗಿ ಉಳಿಯದೆ, ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ. ಬರವಣಿಗೆ ಗಟ್ಟಿಯಾಗಿದ್ದರೆ ನಟಿಯರ ವೃತ್ತಿಜೀವನವೂ ಗಟ್ಟಿಯಾಗಿರುತ್ತದೆ ಎಂಬ ಅವರ ಮಾತು ಈಗ ಗಾಂಧಿನಗರದಿಂದ ಬಾಲಿವುಡ್‌ವರೆಗೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಅವರ ಈ ಹೊಸ ಅವತಾರಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories