'ನನಗೆ ವಿಚ್ಛೇದನ ನೀಡ್ತೀಯಾ ಅಂತ ಅರ್ಪಿತಾಗೆ ಕೇಳಿದೆ. ಮತ್ತವಳು..' ಡೈವೋರ್ಸ್ ವದಂತಿ ಬಗ್ಗೆ ಸಲ್ಮಾನ್ ಭಾವ ಹೇಳಿದ್ದೇನು?

ಸಲ್ಮಾನ್ ಖಾನ್ ಭಾವ ಆಯುಷ್ ಶರ್ಮಾ ಮತ್ತು ಅರ್ಪಿತಾ ಖಾನ್ ವಿಚ್ಛೇದನ ಮಾಡಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳು ಜೋರಾಗಿ ಹರಿದಾಡುತ್ತಿದ್ದವು. ಈ ಬಗ್ಗೆ ಶರ್ಮಾ ಮೌನ ಮುರಿದಿದ್ದಾರೆ. 

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ 2014ರಲ್ಲಿ ಆಯುಷ್ ಶರ್ಮಾ ಜೊತೆ ಅದ್ಧೂರಿ ವಿವಾಹವಾದರು. ಇತ್ತೀಚೆಗೆ ಇವರಿಬ್ಬರ ವಿಚ್ಛೇದನ ವದಂತಿಗಳು ಜೋರಾಗಿ ಹರಿದಾಡುತ್ತಿದ್ದವು. 

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ ಆಯುಷ್ ಶರ್ಮಾ. ರುಸ್ಲಾನ್ ನಟ ತನ್ನ ಹೆಂಡತಿಗೆ ವಿಚ್ಛೇದನ ನೀಡುತ್ತಿರುವುದು ಹೌದೇ ಎಂದು ಕೇಳಿದಾಗ ಅವರಿದಕ್ಕೆ ಉತ್ತರ ಕೊಟ್ಟಿದ್ದಾರೆ.


'ಈ ವದಂತಿಗಳ ಬಗ್ಗೆ ನೋಡಿದ ನಂತರ ನಾನು ಮನೆಗೆ ಹೋದ ಬಳಿಕ ಅರ್ಪಿತಾ ನನಗೆ ವಿಚ್ಛೇದನ ನೀಡುತ್ತೀಯಾ ಎಂದು ಕೇಳಿದೆ. ಮತ್ತು ಅವಳು ನಗಲಾರಂಭಿಸಿದಳು. ನಂತರ ನಾವಿಬ್ಬರೂ ಜೋರಾಗಿ ನಗಲಾರಂಭಿಸಿದೆವು' ಎಂದು ಆಯುಷ್ ಹೇಳಿದ್ದಾರೆ. 

ಆಯುಷ್ ಹಣ ಮತ್ತು ಪ್ರಭಾವಕ್ಕಾಗಿ ಅರ್ಪಿತಾಳನ್ನು ವಿವಾಹವಾಗಿದ್ದಾರೆ ಎಂಬ ಆರೋಪಗಳನ್ನು ಮದುವೆಯಾದಂದಿನಿಂದ ಎದುರಿಸುತ್ತಿದ್ದಾರೆ. ಈ ಬಗ್ಗೆಯೂ ಮಾತನಾಡಿದ ಅವರು ಮಾಧ್ಯಮಗಳ ಸೃಷ್ಟಿಗಳು ತಮ್ಮ ಜೀವನದಲ್ಲಿ ಒಂದೆರಡಲ್ಲ ಎಂದಿದ್ದಾರೆ.

ಎಲ್ಲಿದೆ ವಜ್ರಖಚಿತ ಶೇರ್ವಾನಿ?

'ಸಾಮಾಜಿಕ ಮಾಧ್ಯಮಗಳು ನನ್ನ ಬಹಳಷ್ಟು ವಿಷಯಗಳನ್ನು ನಿರ್ಧರಿಸಿದವು. ನಾನು ಮದುವೆಯಾಗುವಾಗ ನನಗೆ ವಜ್ರಖಚಿತ ಶೆರ್ವಾನಿ ಉಡುಗೊರೆಯಾಗಿ ಸಿಕ್ಕಿತು ಎಂದು ಕೆಲವರು ಹೇಳಿದ್ದು ನೆನಪಿದೆ. ನನಗೆ ಇನ್ನೂ ಆ ಶೇರ್ವಾನಿ ಸಿಕ್ಕಿಲ್ಲ. ನಾನು ಬೆಂಟ್ಲಿಯನ್ನು ವರದಕ್ಷಿಣೆಯಲ್ಲಿ ಪಡೆದಿದ್ದೇನೆ ಎಂದು ಕೆಲವರು ಹೇಳಿದರು. ಆ ಬೆಂಟ್ಲಿ ಎಲ್ಲಿದೆ?' ಎಂದು ಆಯುಷ್ ಕೇಳಿದ್ದಾರೆ.

'ಮಾಧ್ಯಮಗಳು ನನ್ನನ್ನು ದೆಹಲಿಯ ಉದ್ಯಮಿಯನ್ನಾಗಿ ಮಾಡಿದವು. ನಾನು ಯಾವುದೇ ಕೋನದಿಂದ ಉದ್ಯಮಿ ಅಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಸಲ್ಮಾನ್ ಭಾವ ಹೇಳಿದ್ದಾರೆ.

ಇನ್ನು ತಮ್ಮ ಹಿನ್ನೆಲೆ ಬಗ್ಗೆ ಮಾತಾಡುತ್ತಾ, 'ನಾನು ರಾಜಕೀಯ ಹಿನ್ನೆಲೆಯಿಂದ ಬಂದವನು. ನನ್ನ ತಂದೆ ರಾಜಕಾರಣಿ ಮತ್ತು ನಾನು ಇಂಡಸ್ಟ್ರಿಯಲ್ಲಿ ಹೆಸರು ಕಂಡುಕೊಳ್ಳಲು ಒದ್ದಾಡುತ್ತಿರುವ ನಟ' ಎಂದು ತಿಳಿಸಿದ್ದಾರೆ. 

ನಾನು ಹಣ, ವೃತ್ತಿ ಮತ್ತು ಬಾಲಿವುಡ್‌ಗೆ ಎಂಟ್ರಿಗಾಗಿ ಮದುವೆಯಾಗಿದ್ದೇನೆ ಎಂದು ಜನರು ನನ್ನ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಒಳ್ಳೆಯ ಕುಟುಂಬದಿಂದ, ರಾಜಕೀಯ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಆಯುಷ್ ಹೇಳಿದ್ದಾರೆ. 

ನಾನು ಮೊದಲ ಬಾರಿಗೆ ಮೆಹಬೂಬ್ ಸ್ಟುಡಿಯೋಗೆ ಬಂದಿದ್ದು ಯೇ ಜವಾನಿ ಹೈ ದೀವಾನಿಗಾಗಿ. ‘ಯಾಕೆ ಬ್ಯಾಕ್‌ಗ್ರೌಂಡ್‌ ಡ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದೀರಿ’ ಎಂದು ಯಾರೋ ಹೇಳಿದ್ದರು. ನಾನು ಸಿನಿಮಾ ಸೆಟ್‌ ಹೇಗಿದೆ ಎಂದು ನೋಡಬೇಕು ಮತ್ತು ಶೂಟಿಂಗ್‌ ಹೇಗೆ ನಡೆಯುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದೆ. ನನಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಸಿಗಲಿಲ್ಲ ಎಂದು ಆಯುಷ್ ಬಾಲಿವುಡ್‌ನಲ್ಲಿ ಎಲ್ಲ ಹೊಸಬರಂತೆ ತಾವೂ ಕಷ್ಟ ಪಡುವುದನ್ನು ಹೇಳಿದ್ದಾರೆ. 

ಆಯುಷ್ ಅರ್ಪಿತಾ ದಂಪತಿಗೆ ಮಗ ಆಹಿಲ್ ಹಾಗೂ ಮಗಳು ಅಯಾತ್ ಇದ್ದಾರೆ. ನನ್ನ ಮಕ್ಕಳನ್ನು ನನ್ನ ದುಡಿಮೆಯಲ್ಲೇ ಸಾಕುತ್ತೀನಿ ಹೊರತು ಸಲ್ಮಾನ್ ಬಳಿ ದುಡ್ಡು ಪಡೆದು ಅಲ್ಲ ಎಂದು ಈ ಹಿಂದೊಮ್ಮೆ ಆಯುಷ್ ಹೇಳಿದ್ದರು.

Latest Videos

click me!