ಈಗಾಗಲೆ 'ಈಗ', 'ಮಗಧೀರ', 'ಬಾಹುಬಲಿ' ಮತ್ತು 'ಆರ್ಆರ್ಆರ್' ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಾಜಮೌಳಿ ಅವರು ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿ ತಮ್ಮ ಡ್ರೀಮ್ ಪ್ರಾಜೆಕ್ಟ್ ಮತ್ತು ಮಹಾಭಾರತ ಎಂಬ ಚಲನಚಿತ್ರವನ್ನು ಮಾಡುವ ಪ್ರಕ್ರಿಯೆಯಲ್ಲಿದ್ದಾರೆ. ಮಹೇಶ್ ಬಾಬು (Mahesh Babu)ಅವರ ಬಿಗ್ ಬಜೆಟ್ ಚಿತ್ರವೂ ರಾಜಮೌಳಿ ಕೈಯಲ್ಲಿದೆ. ತಮ್ಮ ಚಿತ್ರ ಕೇವಲ ತೆಲುಗು ಜನರಿಗೆ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಜನರಿಗೆ ತಲುಪಿಸೋದೆ ರಾಜಮೌಳಿಯವರ ಯೋಜನೆ. ಮಹಾಭಾರತ ಸಿನಿಮಾ ವಿಶ್ವ ಸಿನಿಮಾರಂಗದಲ್ಲೇ ಮೆರೆಯಬೇಕು ಅನ್ನೋದು ಇವರ ಕನಸು. 'ಅವೆಂಜರ್ಸ್' ಮತ್ತು 'ಅವತಾರ್' ಮಾದರಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ ರಾಜಮೌಳಿ.